ತೆಲಂಗಾಣ ರಾಜ್ಯ ಸರ್ಕಾರದಲ್ಲಿ ಮಾಜಿ ಕ್ರಿಕೆಟಿಗ ಅಜರುದ್ದೀನ್‌ಗೆ ಮಂತ್ರಿಸ್ಥಾನ: ಆಸಿಫ್‌ಅಲಿ ಹರ್ಷ

ತೆಲಂಗಾಣ ರಾಜ್ಯ ಸರ್ಕಾರದಲ್ಲಿ ಮಾಜಿ ಕ್ರಿಕೆಟಿಗ ಅಜರುದ್ದೀನ್‌ಗೆ ಮಂತ್ರಿಸ್ಥಾನ: ಆಸಿಫ್‌ಅಲಿ ಹರ್ಷ Former cricketer Azharuddin to be given ministerial berth in Telangana state government

ಕೊಪ್ಪಳ 04: ಪಕ್ಕದ ತೆಲಂಗಾಣ ರಾಜ್ಯ ಸರ್ಕಾರದಲ್ಲಿ ಆ ಭಾಗದ ಶಾಸಕ ಹಾಗೂ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಅಲ್ಪಸಂಖ್ಯಾತ ಸಮುದಾಯದ ರಾಷ್ಟ್ರಮಟ್ಟದ ನಾಯಕರಾಗಿರುವ ಮಹಮ್ಮದ್ ಅಜರುದ್ಧಿನ್ ರವರಿಗೆ ತೆಲಂಗಾಣ ರಾಜ್ಯ ಸರ್ಕಾರದಲ್ಲಿ ಸಂಪುಟ ದರ್ಜೆಯ ಉನ್ನತ ಸಚಿವ ಸ್ಥಾನ ದೊರಕಿಸಿ ಕೊಟ್ಟಿರುವುದಕ್ಕೆ ಕೊಪ್ಪಳದ ಹಿರಿಯ ಕಾಂಗ್ರೆಸ್ಸಿಗ ಹಾಗೂ ಕರ್ನಾಟಕ ರಾಜ್ಯ ವಕ್ಫ್‌ ಸಲಹಾ ಮಂಡಳಿಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಎಸ್, ಆಸಿಫ್ ಅಲಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. 

ಮಹಮ್ಮದ್ ಅಜರುದ್ದೀನ್ ರವರು ನಮ್ಮ ಮುಸ್ಲಿಂ ಸಮುದಾಯದ ಹಿರಿಯ ರಾಷ್ಟ್ರಮಟ್ಟದ ನಾಯಕರಾಗಿದ್ದು ಅವರನ್ನು ಮಂತ್ರಿ ಮಂಡಲದಲ್ಲಿ ಸ್ಥಾನಮಾನ ದೊರಕಿಸಿಕೊಟ್ಟ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯವರಿಗೆ ಹಾಗೂ ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹೈಕಮಾಂಡ್ ಗಳಿಗೆ ಸಮಸ್ತ ಮುಸ್ಲಿಂ ಸಮಾಜ ಬಾಂಧವರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು, ಮಹಮ್ಮದ್  ಅಜರುದ್ದೀನ್ ರವರಿಗೆ ಮಂತ್ರಿ ಮಂಡಳ ದಲ್ಲಿ ಸ್ಥಾನಮಾನ ನೀಡಿರುವುದರಿಂದ ಇಡೀ ನಮ್ಮ ಮುಸ್ಲಿಂ ಸಮಾಜ ಹರ್ಷ ವ್ಯಕ್ತಪಡಿಸಿದೆ ಇದು ಸಮಾಜಕ್ಕೆ ನೀಡಿರುವ ಒಂದು ಸುವರ್ಣ ಅವಕಾಶ, ಅವರು ತೆಲಂಗಾಣ ರಾಜ್ಯ ಸರ್ಕಾರದಲ್ಲಿ ಸರ್ಕಾರದ ಅಭಿವೃದ್ಧಿ ಪರ ಕೆಲಸ ಇಲಾಖೆಯ ಅಭಿವೃದ್ಧಿಪರ ಯೋಜನೆಗಳನ್ನು ಅಲ್ಲಿಯ ಸಾರ್ವಜನಿಕರಿಗೆ ದೊರಕಿಸಿ ಕೊಡುವದರ ಜೊತೆಗೆ ಸಮಾಜದ  ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಮ್ಮದ್ ಅಜರುದ್ದೀನ್ ರವರು ಶ್ರಮಿಸಲಿ, ಉತ್ತಮ ಕಾರ್ಯ ಚಟುವಟಿಕೆ ಮಾಡಿ ಅವರು ರಾಜ್ಯ ಮತ್ತು ರಾಷ್ಟ್ರ ದಲ್ಲಿ ಇನ್ನಷ್ಟು ಹೆಸರು ಮತ್ತು ಹೆಗ್ಗಳಿಕೆ ತರುವಂತಹ ಕೆಲಸ ಮಾಡಲಿ ಎಂದು ಕೊಪ್ಪಳದ ಹಿರಿಯ ನ್ಯಾಯವಾದಿ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಕರ್ನಾಟಕ ರಾಜ್ಯ ವಕ್ಫ್‌ ಸಲಹಾ ಮಂಡಳಿಯ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಎಸ್ ಆಸಿಫ್ ಅಲಿ ಅವರು ಹರ್ಷ ವ್ಯಕ್ತಪಡಿಸಿ ಸಮಸ್ತ ಮುಸ್ಲಿಂ ಸಮುದಾಯದ ಪರವಾಗಿ ರಾಷ್ಟ್ರೀಯ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರಿಗೆ, ತಲಂಗಾಣ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮತ್ತು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ತೆಲಂಗಾಣದ ಸಚಿವರಾದ ಮೊಹಮ್ಮದ್ ಅಜರುದ್ದೀನ್ ರವರಿಗೆ ಅಭಿನಂದಿಸಿ ಶುಭಕೋರಿದ್ದಾರೆ.