ಅಮೆರಿಕಾದ ಮಾಜಿ ಅಧ್ಯಕ್ಷ ಜಾಜರ್್.ಎಚ್.ಡಬ್ಲಯು.ಬುಷ್ ನಿಧನ:

ಹೌಸ್ಟನ್:ಅಮೆರಿಕಾದ ಮಾಜಿ ಅಧ್ಯಕ್ಷ ಜಾಜರ್್.ಎಚ್.ಡಬ್ಲಯು.ಬುಷ್. ನೆನ್ನೆ ರಾತ್ರಿ (ಅಮೆರಿಕಾ ಕಾಲಮಾನ ರಾತ್ರಿ 10-15) ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಐದು ಜನ ಮಕ್ಕಳು, 17 ಜನ ಮೊಮ್ಮಕ್ಕಳು, 8 ಜನ ಮರಿಮಕ್ಕಳು ಮತ್ತು ಇಬ್ಬರು ಒಡಹುಟ್ಟದವರನ್ನು ಅಗಲಿದ್ದಾರೆ.

ಬುಷ್ 1924ರ ಜೂನ್ 12ರಂದು ಮಿಲ್ಟನ್ನಲ್ಲಿ ಜನಿಸಿದರು. ಬುಷ್ 20-01-1989 ರಿಂದ 20-01-1993 ರವರೆಗೆ ಅಮೆರಿಕಾದ 41ನೇ ಅಧ್ಯಕ್ಷರಾಗಿದ್ದರು. ಇವರ ಅವದಿಯಲ್ಲಿ ಶೀತಲ ಸಮರ ಕೊನೆಗೊಂಡಿತು ಮತ್ತು ಇರಾಕ್ನ ಅಂದಿನ ಅಧ್ಯಕ್ಷ ಸದ್ದಾಂ ಹುಸೇನ್ ಅವರ ಸವರ್ಾಧಿಕಾರ ವಿರೋಧಿಸಿ ಇರಾಕ್ ಮೇಲೆ ಮೊದಲ ಯುದ್ದ ಮಾಡಿ ಸೋಲಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಅವರ ಆರೋಗ್ಯದಲ್ಲಿ ತೊಂದರೆಯಿದ್ದರೂ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು.