ಜೆಡಿಎಸ್ ಪಕ್ಷದ ಚಿಟಗುಪ್ಪಾ ತಾಲೂಕು ಅಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
Former Minister Bandeppa Kashempur handed over the appointment letter to the JD(S) party's Chitguppa
ಲೋಕದರ್ಶನ ವರದಿ
ಬೀದರ್ 13 : ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಜೆಡಿಎಸ್ ಪಕ್ಷದ ನೂತನ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ಸೈಯದ್ ಫರಮಾನ ಉಲ್ ಹಕ್ ಬುಕಾರಿರವರಿಗೆ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ನೇಮಕಾತಿ ಆದೇಶ ಪತ್ರವನ್ನು ನೀಡಿ ಶುಭ ಕೋರಿದರು.
ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್ ರವರು ಹೊರಡಿಸಿರುವ ಆದೇಶ ಪತ್ರವನ್ನು ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಬಂಡೆಪ್ಪ ಖಾಶೆಂಪುರ್ ರವರ ನಿವಾಸದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್ ರವರು ವಿತರಿಸಿದರು.
ಈ ವೇಳೆ ಮಾತಾನಾಡಿದ ಬಂಡೆಪ್ಪ ಖಾಶೆಂಪುರ್ ರವರು, ಪಕ್ಷವನ್ನು ಸಂಘಟಿಸಿ ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಿಬೇಕಾಗಿದೆ. ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬುಕಾರಿರವರು ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ತಾಲೂಕಿನ ಕಾರ್ಯಕರ್ತರು, ಮುಖಂಡರೊಂದಿಗೆ ಸೇರಿ ಪಕ್ಷವನ್ನು ಬಲಪಡಿಸುವ ಕೆಲಸ ಅವರಿಂದ ಆಗಬೇಕಾಗಿದೆ ಎಂದರು.
ರಮೇಶ್ ಪಾಟೀಲ್ ಸೋಲ್ಪೂರ್ ರವರು ಹೊರಡಿಸಿದ ಆದೇಶ ಪತ್ರದಲ್ಲಿ ’ಸೈಯದ್ ಫರಮಾನ ಉಲ್ ಹಕ್ ಬುಕಾರಿರವರೇ, ಕರ್ನಾಟಕ ಪ್ರದೇಶ ಜನತಾದಳ(ಜ್ಯಾ) ಪಕ್ಷವನ್ನು ಪರಿಣಾಮಕಾರಿಯಾಗಿ ಬೇರುಮಟ್ಟದಿಂದ ಸಂಘಟಿಸುವ ನಿಟ್ಟಿನಲ್ಲಿ ಚಿಟಗುಪ್ಪಾ ತಾಲೂಕಾ ಅಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ತಮ್ಮನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ತಾವುಗಳು ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ಚಿಟ್ಟಗುಪ್ಪಾ ತಾಲೂಕಿನಲ್ಲಿ ಜನತಾದಳ ಜಾತ್ಯಾತೀತ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತೀರೆಂದು ಆಶಿಸಿ ಶುಭ ಕೋರುತ್ತೇನೆ.’ ಎಂದು ಬರೆಯಲಾಗಿದೆ.
ನೇಮಕಾತಿ ಆದೇಶ ಪತ್ರ ವಿತರಣೆಯ ವೇಳೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್, ಪಕ್ಷದ ಪ್ರಮುಖರಾದ ಅಶೋಕ್ ಕೊಡಗೆ, ಸಜ್ಜದ್ ಸಾಹೇಬ್, ಶಾಂತಲಿಂಗ್ ಸಾವಳಗಿ, ಬಸವರಾಜ್ ಪಾಟೀಲ್ ಹಾರೂರಗೇರಿ, ಸಂತೋಷ್ ರಾಸೂರೆ, ಲಲಿತಾ ಕರಂಜೆ, ಜಾಪೇಡ್ ಕಡ್ಯಾಳ, ಅಬೀದ್ ಅಲಿ, ನಿಜಾಮ್ ಹಕೀಮ್, ಲೈಖ್ ಬಾರೋದ್ ರವರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಆಗಸ್ಟ್ 6ರ ವಿಧಾನಸಭೆ ಅಧಿವೇಶನಕ್ಕೂ ಮುನ್ನ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ. ಶಿವಕುಮಾರ್
ರಾಜಸ್ಥಾನದ ಬಾಲೋತ್ರಾ-ಜೋಧ್ಪುರ ಹೆದ್ದಾರಿಯಲ್ಲಿ ಎಸ್ಯುವಿ-ಡಂಪರ್ ಡಿಕ್ಕಿ: ಐವರು ಸಾವು, ಮೂವರಿಗೆ ಗಾಯ
ಬಕ್ಕಖಾಲಿ ಕರಾವಳಿಯಲ್ಲಿ ಮುಳುಗಿದ್ದ ಮೀನುಗಾರಿಕಾ ದೋಣಿಯಲ್ಲಿ 9 ಮೀನುಗಾರರ ಶವ ಪತ್ತೆ; 6 ಮಂದಿಗಾಗಿ ಶೋಧ ಮುಂದುವರಿಕೆ
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ 