ಮಹಾಲಿಂಗಪುರ 12: ಬೆಲ್ಲದ ನಾಡು ಮಹಾಲಿಂಗಪುರ ನಗರಕ್ಕೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಕ್ರಾಂತಿ ವೀರರ ಬ್ರಿಗೇಡ್ ನ ಸಂಸ್ಥಾಪಕ ಕೆ ಎಸ್ ಈಶ್ವರಪ್ಪ ರವಿವಾರ ಭೇಟಿ ನೀಡಿದರು. ಪುರಸಭೆ ಸದಸ್ಯರು ಮತ್ತು ಹಿಂದೂ ಮುಖಂಡರು ಹಾಗೂ ನೂರಾರು ಹಿಂದೂ ಯುವ ಕಾರ್ಯಕರ್ತರು ಸನ್ಮಾನಿಸುವುದರ ಮೂಲಕ ಸ್ವಾಗತ ಕೋರಿದರು.
ನಂತರ ಬಸವೇಶ್ವರ ವೃತ್ತದ ಬಸವಣ್ಣನವರ ಪುತ್ತಳಿಗೆ ಮಾಲಾರೆ್ಣ ಮಾಡಿ ನಗರದ ಆರಾಧ್ಯ ದೈವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ಅವರ ಆಶೀರ್ವಾದ ಪಡೆದು ಗೋಶಾಲೆ ವೀಕ್ಷಣೆ ಮಾಡಿ.ಬಸವನ ಬಾಗೇವಾಡಿಯಲ್ಲಿ ಫೆಬ್ರವರಿ 4ರಂದು ಕ್ರಾಂತಿ ವೀರರ ಬ್ರಿಗೇಡ್ ನ ಉದ್ಘಾಟನೆ ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನಿಸಿ ತೆರಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರಹ್ಲಾದ್ ಸಣ್ಣಕ್ಕಿ,ಬಸವರಾಜ್ ಹಿಟ್ಟಿನಮಠ, ರಾಜು ಚಮಕೇರಿ, ರವಿ ಜವಳಗಿ,ಚೆನ್ನಪ್ಪ ರಾಮೋಜಿ,ಮಹಾಲಿಂಗ ಮುದ್ದಾಪುರ, ಕ್ರಾಂತಿ ವೀರರ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ,ವೀರಣ್ಣ ಹಳೆಗೌಡರ, ಮಹಾಲಿಂಗಪ್ಪ ಸನದಿ, ನೇಕಾರರ ಮುಖಂಡ ಶಿವಲಿಂಗ ಟಿರ್ಕಿ, ಹನಮಂತ ಜಮಾದಾರ, ಪ್ರಕಾಶ ಮರೆಗುದ್ದಿ, ರಾಘು ಗರಗಟ್ಟಿ, ಸತೀಶ ಜುಂಜರ್ವಾಡ, ಯಮನಪ್ಪ ಉಪ್ಪಾರ,ಸುರೇಶ ಸಣ್ಣಕ್ಕಿ, ಮಲ್ಲಪ್ಪ ಕೌಜಲಗಿ, ಚಿನ್ನಪ್ಪ ಬಾಯಪ್ಪಗೊಳ, ವಿನಾಯಕ್ ಒಡೆಯರ್, ಅರವಿಂದ ಸಣ್ಣಕ್ಕಿ, ಚನ್ನಗಿರಿ ತಳಗಡೆ, ನಾಗರಾಜ ಭಜಂತ್ರಿ, ಪ್ರಭು ಭಜಂತ್ರಿ, ಸಚಿನ ಕಲ್ಮಡಿ, ಅಭಿ ಲಮಾಣಿ, ರಾಘು ಪವಾರ, ಶ್ರೀನಿಧಿ ಕುಲಕರ್ಣಿ,ಮಹಾಲಿಂಗ ದೇಸಾಯಿ, ದತ್ತ ಯರಗಟ್ಟಿಕರ್, ಬಸವರಾಜ್ ಗಿರಿಸಾಗರ, ಬೈರೇಶ ಆದೇಪ್ಪನವರ,ನಂದು ಲಾತುರ, ಮಹಾಲಿಂಗ ಕಲಾಲ, ಬಸು ಮುರಾರಿ, ರಾಘವೇಂದ್ರ ಶಿರೋಳ,ಅಕ್ಷಯ ಜಳ್ಳಿ, ಶಿವು ಸಣ್ಣಕ್ಕಿ, ಅಭಿ ಸೊನ್ನದ, ಮಂಜುನಾಥ ಬಾವಿಕಟ್ಟಿ, ರಾಕೇಶ ಕೆಸರಗೋಪ್ಪ, ರಾಘು ಕಪರಟ್ಟಿ, ದಾನೇಶ ಡೊಠರ,ಚೇತನ ಬಂಡಿವಡ್ಡರ, ಶಿವು ಸಣ್ಣಕ್ಕಿ,ಮಹಾಲಿಂಗ ಹಾವನಳ್ಳಿ, ಸಂತೋಷ ಹಜಾರೆ, ಜಗದೀಶ ಜಕ್ಕನ್ನವರ, ಚೇತನ ಬಂಡಿ, ಚೇತನ್ ಹುಣಸ್ಯಾಳ ಸೇರಿದಂತೆ ಇನ್ನು ಅನೇಕ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.