ಕಳಸೂರ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ರಚನೆ
Formation of SDMC of Kalasur Government School
ಸವಣೂರ 06: ತಾಲೂಕಿನ ಕಳಸೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಉಮೇಶ ಶಿವಪ್ಪ ಕರಕಣ್ಣನವರ, ಉಪಾಧ್ಯಕ್ಷರಾಗಿ ರೂಪಾ ಗುಡ್ಡಪ್ಪ ಆಡಿಕಾರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹನುಮಂತ ಗೌಡ್ರ ಪಾಟೀಲ, ಶಿವಾಜಪ್ಪ ಪುಟ್ಟಣ್ಣನವರ, ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪವಿತ್ರಾ ಮಂಟಗಣಿ, ಸದಸ್ಯರಾದ ಪುಟ್ಟಪ್ಪ ಮರಗಿ, ಜಗದೀಶ ಮಂಟಗಣಿ, ಪಿಡಿಓ ಜರಿನಾಬೇಗಂ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಕ್ಕ ಝಾಗಟಿ, ಶಿಕ್ಷಣ ಪ್ರೇಮಿಗಳಾದ ಶ್ರೀಕಾಂತಣ್ಣ ಬನ್ನಿಕೊಪ್ಪ, ಯಲ್ಲಪ್ಪ ಕೋಗಿಲೆ,ರಮೇಶ ಕ್ಯಾಲಕೊಂಡ, ಎಸ್‌ಡಿಎಂಸಿ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಮಕ್ಕಳ ಪಾಲಕ/ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳು,ಗುರು ಬಳಗದವರು ಹಾಜರಿದ್ದರು.
ನೂತನ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಶುಭ ಕೋರಲಾಯಿತು.ಶಾಲೆಯ ಪ್ರಧಾನ ಗುರುಗಳು ಸ್ವಾಗತಿಸಿದರು, ಶಿಕ್ಷರಾದ ಮೈಲಾರ್ಪ ನಿಂಬಕ್ಕನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷರಾದ ಉಮೇಶ ಕೊರಕ್ಕನವರ ಹಾಗೂ ಜ್ಯೋತಿ ಮೇಡಂ ಅವರು ಎಸ್‌ಡಿಎಂಸಿ ಕುರಿತು ಮಾಹಿತಿ ನೀಡಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 