ಜಿಲ್ಲೆಯಲ್ಲಿ ಮಾದಕ ವಸ್ತು ಕಳ್ಳ ಸಾಗಣೆ ಮತ್ತು ಅಕ್ರಮ ವಸ್ತುಗಳ ದುರುಪಯೋಗ ತಡೆಗಟ್ಟಲು ಆಂಟಿ ಡ್ರಗ್ ಕಮೀಟಿ ರಚಿಸಿ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಜಿಲ್ಲೆಯಲ್ಲಿ ಮಾದಕ ವಸ್ತು ಕಳ್ಳ ಸಾಗಣೆ ಮತ್ತು ಅಕ್ರಮ ವಸ್ತುಗಳ ದುರುಪಯೋಗ ತಡೆಗಟ್ಟಲು ಆಂಟಿ ಡ್ರಗ್ ಕಮೀಟಿ ರಚಿಸಿ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ Form an Anti-Drug Committee to prevent drug smuggling and misuse of illegal substances in the distri

ಹಾವೇರಿ 07 :  ಜಿಲ್ಲೆಯಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ ವಸ್ತುಗಳ ದುರುಪಯೋಗವನ್ನು ತಡೆಗಟ್ಟಲು ಸಂಬಂಧ ಪಟ್ಟ ಅಧಿಕಾರಿಗಳು  ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು  ಎಂದು  ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಸೂಚಿಸಿದರು.  

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಏನ್ ಸಿ ಓ ಆರ್ ಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ  ಮಾದಕ ವ್ಯಸನವು ಸಮಾಜ ಮತ್ತು ಮಾನವರ ಮೇಲೆ ವ್ಯತೀರಿಕ್ತ ಪರಿಣಾಮ ಬೀರುವ  ಸಮಸ್ಯೆಗಳಲ್ಲಿ ಒಂದಾಗಿದೆ ಮಾದಕವಸ್ತು ಕಳ್ಳಸಾಗಣಿಕೆಯನ್ನು ತಡೆಗಟ್ಟುವಿಕೆ ಹಾಗೂ  ನಿಯಂತ್ರಣಕ್ಕೆ ಮುಂದಾಗಬೇಕು  ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಯಾವುದೇ ಭಯವಿಲ್ಲದೆ ನಿರ್ಬಿತಿಯಿಂದ  ಕೆಲಸ ಮಾಡುವಂತೆ  ಸಲಹೆ ನೀಡಿದರು.  

ಜಿಲ್ಲೆಯ ಎಲ್ಲ ಶಾಲೆ, ಕಾಲೇಜ್ ಹಾಗೂ ಹಾಸ್ಟೆಲ್ ಗಳಲ್ಲಿ ಆಂಟಿ ಡ್ರಗ್ಸ್‌ ಕಮಿಟಿ ರಚಿಸಿ ವಿದ್ಯಾರ್ಥಿಗಳಮೇಲೆ ಗಮನ ಹರಿಸಬೇಕು. ಅತೀ ಹೆಚ್ಚು ಪ್ರಮಾಣದಲ್ಲಿ ಇಂದು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದರ ಬಗ್ಗೆ ವರದಿಯಾಗುತ್ತಿವೆ ಇದನ್ನು ಹತೋಟಿಗೆ ತರಲು ಆಂಟಿ ಡ್ರಗ್ ಕಮಿಟಿ ರಚನೆ ಮಾಡುವುದು ತುಂಬಾನೆ ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ ಕಮಿಟಿ ರಚಿಸಿ ಆ ಮೂಲಕ ಮಾದಕ ವ್ಯಸನಕ್ಕೆ ಒಳಗಾಗುವುದನ್ನು ತಡೆಗಟ್ಟಲು ಕ್ರಮ ವಹಿಸಬೇಕು ಎಂದರು.  

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ಶಿರಕೋಳ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.