ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ವನಮಹೋತ್ಸವ
Forest Festival at Thimmakka Arboretum
ಮುದ್ದೇಬಿಹಾಳ 19: ಬಾವೋಬಾಬ್ ಮರಗಳು ಅತೀ ದೀರ್ಘ ಕಾಲದ ಆಯುಷ್ಯ ಹೊಂದಿದ್ದು, ಅವುಗಳ ನೆಡುವಿಕೆಯಿಂದ ಅಂತರ್ಜಲ ಹೆಚ್ಚಲಿದೆ ಎಂದು ತಾಲ್ಲೂಕು ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಹೇಳಿದರು.
ಅವರು ಬುಧವಾರ, ಬಿದರಕುಂದಿ ಬೆಟ್ಟದಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೃಕ್ಷೋದ್ಯಾನದಲ್ಲಿ ಗಿಡಗಳನ್ನು ನೆಡುವ ಹಾಗೂ ಅದರ ಸೌಂದರ್ಯ ಹೆಚ್ಚಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ ಎಂದರು.
ಅರಣ್ಯ ಇಲಾಖೆಯ ಸಹಾಯಕ ವಲಯ ಅರಣ್ಯಾಧಿಕಾರಿ, ರಾಜೇಂದ್ರ ಹುನ್ನೂರ, ಅರಣ್ಯ ಇಲಾಖೆಯ ವಿಠ್ಠಲ ಬೋರಟಗಿ, ವಿಜಯಕುಮಾರ್ ಕಿತ್ತೂರ, ಯಲಗೂರ್ಪ, ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ, ಕಾರ್ಯದರ್ಶಿ ಅಮರೇಶ ಗೂಳಿ, ಸಂಚಾಲಕ ಮಹಾಬಲೇಶ್ವರ ಗಡೇದ, ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ರವಿ ಗೂಳಿ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ವಿಲಾಸರಾವ್ ದೇಶಪಾಂಡೆ, ವೆಂಕನಗೌಡ ಪಾಟೀಲ, ಅಮರೇಶ ಐಹೊಳೆ, ಕಿರಣ ಪಾಟೀಲ, ವಿನಯ ಹಿರೇಮಠ, ಮಹಾಂತೇಶ ಬಸನಗೌಡ್ರ, ಈರಯ್ಯ ಮಠ, ಆದೇಶ ಕೋಳೂರ, ರೇಶ್ಮಾ ಮಾಳನೂರ ಬಿದರಕುಂದಿ, ಸೀತಿಮನಿ, ಚಿಕ್ಕ ನರಗುಂದ, ಮತ್ತಿತರರು ಇದ್ದರು. ಪರಮಾನಂದ ಪಾಟೀಲ ಪ್ರಾರ್ಥಿಸಿದರು. ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 