ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಅರಣ್ಯ ಇಲಾಖೆ ಭೇಟಿ

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಅರಣ್ಯ ಇಲಾಖೆ ಭೇಟಿ Forest Department visits Vriksha Mata Saalu Marad Thimmakka Park

ಮುದ್ದೇಬಿಹಾಳ 10 : ಸಮೀಪದ ಬಿದರಕುಂದಿ ಗುಡ್ಡದಲ್ಲಿ ನಿರ್ಮಾಣವಾಗುತ್ತಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಶನಿವಾರ ಭೇಟಿ ನೀಡಿದ್ದ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು, ಅರಣ್ಯ ಇಲಾಖೆ ಮತ್ತು ಕೆ.ಆರ್‌.ಐ.ಡಿ.ಎಲ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ವೀಕ್ಷಿಸಿದರು. 33 ಎಕರೆ ವಿಸ್ತೀರ್ಣದ ಉದ್ಯಾನವನದಲ್ಲಿ ಸಮರೋಪಾದಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ.   ಈಗಾಗಲೇ ಅಲ್ಲಿ 3500 ದೊಡ್ಡ ಗಿಡಗಳನ್ನು ಜೊತೆಗೆ  25 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಮತ್ತು ಓಷಧೀಯ ಗಿಡಗಳನ್ನು  ನೆಡಲಾಗಿದೆ.

ಅವುಗಳ ರಕ್ಷಣೆಗೆ ನುರಿತ ತಂಡವೇ ಕಾರ್ಯ ನಿರ್ವಹಿಸುತ್ತಿದೆ ಎಂದು ವಲಯ ಅರಣ್ಯಾಧಿಕಾರಿಗಳಾದ ಬಸನಗೌಡ ಬಿರಾದಾರ ಮತ್ತು ಗೀರೀಶ್ ಆಲಕುಡೆ ವಿವರಿಸಿದರು. ಉದ್ಯಾನವನದಲ್ಲಿ ಆಕರ್ಷಕ ಪ್ಯಾರಾಗೋಲಗಳು, ವೀಕ್ಷಣಾ ಗೋಪುರ, ಸಿಬ್ಬಂದಿ ವಸತಿ ಗೃಹಗಳು, ಶುದ್ಧ ಕುಡಿಯುವ ನೀರಿನ ಘಟಕ, ಸಣ್ಣ ಸಣ್ಣ ನೀರಿನ ಹೊಂಡಗಳು, ಸ್ಥಳೀಯ ಕಲ್ಲುಗಳನ್ನೇ ಬಳಸಿ ಮಾಡಲಾದ ನೈಸರ್ಗಿಕ ನೀರಿನ ಝರಿಗಳು, ಬೃಹತ್ ಪ್ರಮಾಣದ ನೀರು ಸಂಗ್ರಹಾಗಾರ, ಚಿಕ್ಕ ಮಕ್ಕಳಿಗೆ ಮನರಂಜನಾ ಪಾರ್ಕ, ಹೊರಾಂಗಣ ವ್ಯಾಯಾಮದ ಮೈದಾನ,  ಉದ್ಯಾನವನದ ಸುತ್ತಲೂ ವಿಶಾಲವಾದ ವಾಯು ವಿಹಾರ ಪಥ, ಎಲ್ಲೆಡೆ ವಿಶ್ರಾಂತಿ ಕಟ್ಟೆಗಳು,  ಕ್ಯಾಂಟೀನ್ ನಿರ್ಮಾಣ ಭರದಿಂದ ಸಾಗಿವೆ.  ಇಡೀ ಪ್ರದೇಶದಲ್ಲಿ ಬೀಳುವ ಮಳೆ ನೀರಿನ ಒಂದು ಹನಿಯೂ ವ್ಯರ್ಥವಾಗದಂತೆ  ಮಳೆ ನೀರಿನ ಸಂಗ್ರಹ ಮಾಡಲಾಗುತ್ತಿದೆ ಎಂದವರು ವಿವರಿಸಿದರು. 

 ಇದೇ ಸಂದರ್ಭದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಉದ್ಯಾನವನದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ನೀರೆರೆದರು. ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಅಮರೇಶ ಗೂಳಿ, ಗೌರವಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಕಾರ್ಯದರ್ಶಿ ಬಸವರಾಜ ಬಿಜ್ಜೂರ, ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಹಾಗೂ ಸಂಚಾಲಕ ಮಹಾಬಲೇಶ್ವರ ಗಡೇದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷರಾದ ಬಿ.ಎಸ್‌.ಮೇಟಿ, ಅಶೋಕ ರೇವಡಿ, ನಾಗಭೂಷಣ ನಾವದಗಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ,  ಬಿ.ಎಚ್‌.ಬಳಬಟ್ಟಿ, ಸದಸ್ಯರಾದ ಬಿ.ಎಂ.ಪಲ್ಲೇದ, ಜಿ.ಎಂ.ಹುಲಗಣ್ಣಿ,  ಮಲ್ಲಿಕಾರ್ಜುನ ಬಾಗೇವಾಡಿ, ವೆಂಕನಗೌಡ ಪಾಟೀಲ, ಎಚ್‌.ವೈ.ಪಾಟೀಲ,

ರವಿ ತಡಸದ, ಪಿ.ಆರ್‌.ಕೂಡಗಿ, ಶ್ರೀಶೈಲ ಮರೋಳ,  ಡಾ.ಚಂದ್ರಶೇಖರ ಶಿವಯೋಗಿಮಠ, ಅಮರೇಶ ಐಹೊಳೆ, ಬಸವರಾಜ ಸಿದರಡ್ಡಿ, ಕಿರಣ ಪಾಟೀಲ, ವೀರೇಶ ಹಂಪನಗೌಡ್ರ, ಈರಯ್ಯ ಮಠ, ಪಶು ವೈದ್ಯಾಧಿಕಾರಿ ಡಾ.ಬಸವರಾಜ ಸಜ್ಜನ, ಉಪನಾಳ, ಯಲ್ಲಪ್ಪ ತಂಗಡಗಿ, ಶ್ರೀನಿವಾಸ, ವಿನಾಯಕ ಬೊಂಬಳೇಕರ,     ಅರಣ್ಯ ಇಲಾಖೆಯ ಅಧಿಕಾರಿಗಳಿದ್ದರು. ಬಸನಗೌಡ ಬಿರಾದಾರ ಸ್ವಾಗತಿಸಿದರು. ಯಲಗೂರ​‍್ಪ ಗುಬ್ಬಿ ನಿರೂಪಿಸಿದರು. ವಿಠ್ಠಲ ಬೋರಟಗಿ ವಂದಿಸಿದರು.(ಕೋಟ್ ಮಾಡಿ) ಸುಂದರವಾಗಿ ನಿರ್ಮಾಣವಾಗುತ್ತಿರುವ ಸಾಲುಮರದ ತಿಮ್ಮಕ್ಕನ ಉದ್ಯಾನವನ ಕಂಡು ಸಂತೋಷವಾಗುತ್ತದೆ. ನಿಜವಾಗಿಯೂ ಅದ್ಭುತವಾದ ಅರಣ್ಯವೇ ಸಾಮ್ರಾಜ್ಯ  ಇಲ್ಲಿ ನಿರ್ಮಾಣವಾಗುತ್ತಿದೆ. ಸೋಮಶೇಖರ ಚೀರಲದಿನ್ನಿ ಗೌರವಾಧ್ಯಕ್ಷ, ಹಸಿರು ತೋರಣ ಬಳಗ