ಕಾರ್ಯನಿರತ ಪತ್ರಕರ್ತರ ಒಕ್ಕೂಟ ಅಸ್ತಿತ್ವಕ್ಕೆ


ಲೋಕದರ್ಶನ ವರದಿ         

ಕೂಡ್ಲಿಗಿ25: ಸ್ಥಳೀಯ,ಪ್ರಾದೇಶಿಕ,ರಾಜ್ಯ ಮಟ್ಟದ ದಿನ ಹಾಗೂ ಪಾಕ್ಷಿಕ ಮತ್ತು ಮಾಸಿಕ ಸೇರಿದಂತೆ ವಿವಿದ ಪತ್ರಿಕೆಗಳ ಸಮಾನ ಪತ್ರಕರ್ತರು ಒಗ್ಗೂಡಿ ನೂತನ ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಒಕ್ಕೂಟ ವನ್ನು ಅಸ್ಥಿತ್ವಕ್ಕೆ ತರಲಾಗಿದ್ದು, ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಪತ್ರಿಕೆಗಳ ಸಮಾನ ಮನಸ್ಕ ವರದಿಗಾರರು ಸಭೆ ಸೆರಿ ಸರ್ವರೂ ಸಹಮತ ವ್ಯಕ್ತಪಡಿಸುವ ಮೂಲಕ ಒಕ್ಕಟವನ್ನು ಅಸ್ಥಿತ್ವಕ್ಕೆ ತರಲಾಯಿತು. 

ಗೌರವಾಧ್ಯಕ್ಷ ಎಲ.ಎಸ್.ಬಷೀರ್ ಅಹಮ್ಮದ್ ರವರು ಮಾತನಾಡಿ ಒಕ್ಕೂಟದಲ್ಲಿ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ ಗ್ರಾಮಗಳ ಪತ್ರಕರ್ತರೂ ಸಹ ಇದರಲ್ಲಿ ಸದಸ್ಯತ್ವ ಪಡೆದು ಪದಾಧಿಕಾರಿಗಳಾಗಿದ್ದು, ತಾಲೂಕಿನ ಯಾವುದೇ ಗ್ರಾಮದ ಪತ್ರಿಕೆಯ ಪತ್ರಕರ್ತರು ಯಾವಕ್ಷಣದಲ್ಲಾದರೂ ಒಕ್ಕೂಟವನ್ನು ಸಂಪಕರ್ಿಸಿ ಒಕ್ಕೂಟದಲ್ಲಿ ತಮ್ಮ ಸದಸ್ಯತ್ವನೊಂದಾಯಿಸಿಕೊಳ್ಳಬಹುದಾಗಿದೆ,  ಸಂಘಟನೆ ಮುಂದಿನ ದಿನಗಳಲ್ಲಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ಸದಾ ಸಕ್ರೀಯವಾಗಿ ತೊಡಗಿಸಿಕೊಳ್ಳಲಿದೆ ಎಂದರು. 

ಅಧ್ಯಕ್ಷ ವಿ.ಜಿ.ವೃಷಭೇಂದ್ರ ಮಾತನಾಡಿ ಸಮಾಜದಲ್ಲಿ ಸಂಘಟನೆ ಅನಿವಾರ್ಯವಾಗಿದ್ದು, ಸಂಘಟನೆ ತಾಲೂಕಿನ ಪ್ರತಿಯೊಬ್ಬ ನಾಗರೀಕನ ಧ್ವನಿಯಾಗಿ ನೊಂದವರ ಧ್ವನಿಯಾಗಿ,ರೈತರ,ಮಹಿಳೆಯರ ಶೋಷಿತರ,ದೀನ ದಲಿತರ,ವಿಧ್ಯಾಥರ್ಿಗಳ ಪರ ಕಾರ್ಯನಿರ್ವಹಿಸಲಿದೆ. ಎಲ್ಲಾ ಪತ್ರಕರ್ತರೂ ಸಮಾಜಮುಖಿಗಳಾಗಿ ಸೇವೆಸಲ್ಲಿಸುವ ಏಕೈಕ ಉಧ್ದೇಶದಿಂದ ಪತ್ರಿಕಾರಂಗವನ್ನು ಪ್ರವೇಶಿಸಿ ನಂತರ ಅನಿವಾರ್ಯ ಬೆಳವಣಿಗೆಗಳ ಒತ್ತಡಗಳಿಗೆ ಮಣಿದೋ ಅಥವಾ ಅಕಸ್ಮಿಕವಾಗಿಯೋ ಉಧ್ಧೇಶವನ್ನು ನಿರ್ಲಕ್ಷಿಸುವುದು ಪತ್ರಕರ್ತರಲ್ಲಿ ಇತ್ತೀಚೆಗೆ ಸಾಮನ್ಯವಾದ ಬೆಳವಣಿಗೆ ಯಾಗುತ್ತಿದ್ದು, ಅದು ಒಕ್ಕೂಟದ ಪದಾಧಿಕಾರಿಗಳಿಗೆ ಅನ್ವಯವಾಗದಂತೆ ಸರ್ವರೂ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟು ಕರ್ಥವ್ಯ ನಿರ್ವಹಿಸಬೇಕಿದೆ, ಒಕ್ಕೂಟದಲ್ಲಿ ಸದಸ್ಯತ್ವ ಹೊಂದಲು ಕೂಡ್ಲಿಗಿ ತಾಲೂಕಿನ ಯವುದೇ ಮೂಲೆಯ ಕಾರ್ಯನಿರತ ಪತ್ರಕರ್ತರಿಗೆ ಅವಕಾಶವಿದ್ದು, ಯವುದೇ ಕ್ಷಣದಲ್ಲಿಯಾದರೂ ಒಕ್ಕೂಟದ ಪದಾಧಿಕಾರಿಗಳನ್ನ ಸಂಪಕರ್ಿಸಬಹುದಾಗಿದೆ, ಸಮಾಜದ ಸರ್ವತೋಮುಖ ಬೆಳವಣಿಗೆಯ ಏಕೈಕ ಉದ್ದೇಶವನ್ನು ಹೊಂದಿರುವ ಸಮಾನ ಮನಸ್ಕರೆಲ್ಲರೂ ಸಂಘಟಿತರಾಗಿ ಒಕ್ಕೂಟ ಅಸ್ಥಿತ್ವಕ್ಕೆ ತರಲಾಗಿದೆ, ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಪತ್ರಕರ್ತರ, ಅಧಿಕಾರಿಗಳ ಹಾಗೂ ನೌಕರ ವರ್ಗದವರ ಹಿರಿಯನಾಗರೀಕರ, ಜನಪ್ರತಿನಿಧಿಗಳ, ಸರ್ವಸಂಘ ಸಂಸ್ಥೆಗಳ ರೈತರ,ಕಾಮರ್ಿಕ ವರ್ಗದವರ, ಮಹಿಳಾ ಸಂಘಟನೆಗಳ ಸಲಹೆ ಸಹಕಾರ ಅತ್ಯಗತ್ಯವಿದೆ ಎಂದರು .ಬಾಣದ ಶಿವಮೂತರ್ಿ, ಬಡಿಗೇರ ನಾಗರಾಜ ಮಾತನಾಡಿದರು.

ಪದಾಧಿಕಾರಿಗಳ ಆಯ್ಕೆ: ಒಕ್ಕೂಟದ ಗೌರವಾಧ್ಯಕ್ಷರಾಗಿ ಎಲ್.ಎಸ್.ಬಷೀರ್ ಅಹಮದ್ದ್, ಅಧ್ಯಕ್ಷರು ವಿ,ಜಿ,ವೃಷಭೇಂದ್ರ, ಉಪಧ್ಯಕ್ಷರಾಗಿ ಬೆಳ್ಳಗಟ್ಟೆ ಕೃಷ್ಣಪ್ಪ, ಕಾರ್ಯದಶರ್ಿಯಾಗಿ ಬಾಣದ ಶಿವಮೂತರ್ಿ, ಖಜಾಂಚಿಯಾಗಿ ಕೆ.ಎಸ್.ಮುರುಳಿಧರಶೆಟ್ಟಿ, ಸಹಕಾರ್ಯಶರ್ಿ ಅಮ್ಮನಕೇರಿ ತಿಪಪ್ಪೇಸ್ವಾಮಿ ಅವರನ್ನುಆಯ್ಕೆಮಾಡಲಾಯಿತು. 

ಒಕ್ಕೂಟದ ಸದಸ್ಯರಾದ ಬಡಿಗೇರ ನಾಗರಾಜ ಆಚಾರಿ, ಗುಡೇಕೋಟೆ ಎಲೆ ನಾಗರಾಜ, ಜೂಗುಲರ ಸೊಲ್ಲೇಶ, ಕಿತ್ತೂರು ಕನರ್ಾಟಕ ಸುರೇಶ, ಟಿ.ಇಬ್ರಾಹೀಂ ಕಲೀಲ್, ಹನಸಿ ಮಂಜುನಾಥಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.