ರೈತರ ಹಿತಕ್ಕಾಗಿ ರೈತರ ಹೊಲಗಳಿಗೆ ಏಳು ತಾಸು ವಿದ್ಯುತ್ ಕೊಡಿ: ಶ್ರೀಶೈಲಗೌಡ ಕಮತರ

 ರೈತರ ಹಿತಕ್ಕಾಗಿ ರೈತರ ಹೊಲಗಳಿಗೆ ಏಳು ತಾಸು ವಿದ್ಯುತ್ ಕೊಡಿ: ಶ್ರೀಶೈಲಗೌಡ ಕಮತರ For the benefit of farmers, provide seven hours of electricity to farmers' fields: Srisailagouda Kam

ಲೋಕದರ್ಶನ ವರದಿ 

ಧಾರವಾಡ 18: ಸರ್ಕಾರ ಸರಿಯಾಗಿ ರೈತರ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ರೈತರ ಬೆಳೆಗೆಳಿಗೆ ಅತೀ ಅವಶ್ಯಕವಾಗಿರುವ ನೀರಿಗಾಗಿ ಸರಿಯಾಗಿ ವಿದ್ಯುತ್ ನೀಡುತ್ತಿಬೇಕೆಂಬ ಬೇಡಿಕೆಗೆ ಸರಕಾರ ಸ್ಪಂದಿಸುತ್ತಿಲ್ಲ. ಅಲ್ಲದೇ ರೈತರ ಅಹವಾಲುಗಳಿಗೆ ಸ್ಥಳೀಯ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲವಾದ್ದರಿಂದ ಅನಿವಾರ‌್ಯವಾಗಿ ಮನಗುಂಡಿ ಬೆಳ್ಳಿಗಟ್ಟಿ ಸುತ್ತಮುತ್ತಲಿನ ರೈತರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತಮ್ಮ ಅಹವಾಲನ್ನು ತೋಡಿಕೊಂಡರು.  

 15 ದಿನಗಳಿಂದ ರೈತರ ಹೊಲಗಳಿಗೆ ಸರಿಯಾದ ವಿದ್ಯುತ್ ವಿತರಣೆಯಾಗುತ್ತಿಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಸರಿಯಾಗಿ ವಿದ್ಯುತ್ ಸಂಪರ್ಕ ನೀಡದೇ ಬೆಳಗಿನ ಜಾವ 3ಗಂಟೆಗೆ ವಿದ್ಯುತ್ ಕೊಡುವುದು,  ತಾಸಿಗೊಮ್ಮೆ ವಿದ್ಯುತ್ ತೆಗೆಯುವುದು, ಸರಿಯಾದ ವೋಲ್ಟೇಜ್ ಇಲ್ಲದೆ ಫ್ಯೂಸ್‌ಗಳು ಹೋಗಿ, ಬೋರಿನ ಮೋಟರ್‌ಗಳು ಹಾಳಾಗುತ್ತಿದ್ದು, ಸಮರ​‍್ಕ ನೀರು ಬೋರುಗಳ ಮೂಲಕ ಬರುತ್ತಿಲ್ಲ.  ಹೆಸ್ಕಾಂ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದರೆ, ಅದಕ್ಕೆ ಸರಿಯಾಗಿ ಸ್ಪಂದಿಸಸುತ್ತಿಲ್ಲ. ಇದರಿಂದ ನೊಂದ ರೈತರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಭೇಟಿಯಾಗಿ ಈಗ ಬೇಸಿಗೆ ಕಾಲ ಪ್ರಾರಂಭವಾಗಿದ್ದು ಇದೇ ಸಮಯದಲ್ಲಿ ರೈತರಿಗೆ ವಿದ್ಯುತ್ ಅವಶ್ಯಕತೆ ಇರುತ್ತದೆ. ಇಂಥದರಲ್ಲಿ ರೈತರ ಜೊತೆ ಅಧಿಕಾರಿಗಳು ಚೆಲ್ಲಾಟವನ್ನು ಆಡುತ್ತಿದ್ದು ನಿಲ್ಲಿಸಬೇಕು. ರೈತರ ಜಲ್ಮಂತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಏಳು ತಾಸು ವಿದ್ಯುತ್ತನ್ನು ಪೂರೈಸಿ ಕೂಡಲೇ ಶಿಸ್ತು ಕ್ರಮಕೈಗೊಂಡು ಸಮಗ್ರ ರೈತ ಕುಲವನ್ನು ಕಾಪಾಡಬೇಕೆಂದು ವಿನಂತಿಸಲಾಯಿತು.  ಮನಗುಂಡಿ ಬೆಳ್ಳಿಗಟ್ಟಿ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು.