ಉನ್ನತ ಧ್ಯೇಯೋದ್ದೇಶಗಳಿಗೆ, ಕಠಿಣ ಶ್ರಮ ಅಗತ್ಯ: ಶಿವಶಂಕರ ಶಿವಾಚಾರ್ಯರು
For high goals, hard work is necessary: Shiva Shankar Shivacharya
ಮಹಾಲಿಂಗಪುರ 27: ಉನ್ನತ ಧ್ಯೇಯೋದ್ದೇಶಗಳಿಗೆ, ಕಠಿಣ ಶ್ರಮ ನೀಡಿದಲ್ಲಿ ಎಂತಹ ಗುರಿಗಳನ್ನು ಸಹ ಸಾಧಿಸಬಹುದು ಎಂದು ಹುಬ್ಬಳ್ಳಿ ನೀಲಕಂಠ ಮಠದ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸ್ಥಳೀಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಕುರುಹಿನಶೆಟ್ಟಿ ಯುವ ವೇದಿಕೆಯಿಂದ ನಡೆದ ವಿವಿಧ ತರಗತಿಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶಿರ್ವಚನ ನೀಡಿ ಮಾತನಾಡಿದ ಅವರು, ಬದುಕಿನಲ್ಲಿ ತಾವು ಏಳ್ಗೆ ಕಾಣಬೇಕಾದರೆ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಮತ್ತು ಅತಿಥಿ ದೇವೋಭವ ಎಂಬ ನಿಯಮಗಳನ್ನು ಪಾಲಿಸುತ್ತ ಹೋಗಬೇಕು, ಆಗ ತಾವು ಬದುಕಿನಲ್ಲಿ ಯಶಸ್ಸು ಕಾಣುತ್ತೀರಿ ಎಂದರು.
ಅವರು ಮುಂದುವರೆದು ಕುರುಹಿನಶೆಟ್ಟಿ ಸಮಾಜ ನೇಕಾರ ವೃತ್ತಿ ಅವಲಂಭಿಸಿಯೇ ಬದುಕು ಸಾಗಿಸುತ್ತಿರುವುದರಿಂದ, ಸಹಜವಾಗಿ ಈ ಜನ ಆರ್ಥಿಕ ದೃಷ್ಟಿಯಿಂದ ಹಿಂದುಳಿದವರಾಗಿದ್ದಾರೆ.ಇಷ್ಟಾಗಿಯೂ ವಿದ್ಯಾರ್ಥಿಗಳು ಇಷ್ಟೊಂದು ತಮ್ಮ ಕಠಿಣ ಪರಿಶ್ರಮದಿಂದ ಪ್ರಮಾಣದಲ್ಲಿ ಸಾಧನೆ ಮಾಡಿದ್ದನ್ನು ನೋಡಿದರೆ ನನಗೆ ತುಂಬಾ ಸಂತೋಷವಾಗಿದೆ. ಈ ಮಕ್ಕಳ ಭವಿಷ್ಯ ಉಜ್ವಲವಾಗಲಿ ಮತ್ತು ಇವರಿಂದ ಊರಿನ ಕೀರ್ತಿ ಹೆಚ್ಚಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೆರಿಸಿ ಸನ್ಮಾನ ಸ್ವೀಕರಸಿದ ಬಸವಾನಂದ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಕೆ. ಗಿಂಡೆ ಮಾತನಾಡಿ, ಕಣ್ಣಿಗೆ ಕಾಣುವ ನಿಜವಾದ ಶಕ್ತಿ ತಂದೆ, ತಾಯಿಗಳು ಅವರಿಗೆ ಯಾವ ಮಕ್ಕಳು ನೋವಾಗದಂತೆ ನಡೆದುಕ್ಕೊಳ್ಳದೆ ಪರಿವಾರದ ಹೆಸರು ತರಬೇಕು ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಯುವ ವೇದಿಕೆ ಅಧ್ಯಕ್ಷ ರವಿ ಮುಂಡಗನೂರ, ಸಮಾಜದ ಹಿರಿಯರಾದ ಎಮ್ ಎಸ್. ಮುಗಳಖೋಡ, ಹೊಳೆಪ್ಪ ಬಾಡಗಿ, ಈರ್ಪ ಬೇಟಗೇರಿ, ಮಹೇಶ ಜಿಡ್ಡಿಮನಿ, ಅಡಿವೆಪ್ಪ ಹುಣಶ್ಯಾಳ, ಚನ್ನಪ್ಪ ಹುಣಶ್ಯಾಳ, ಪ್ರಕಾಶ ಬಿಲಕುಂದಿ, ಮುತ್ತಪ್ಪ ಢವಳೇಶ್ವರ, ಶ್ರೀಶೈಲ ಬೀಸನಕೊಪ್ಪ ಶಂಕರ ಯಾದವಾಡ, ಮಹಾಲಿಂಗ ಕೆಳಗಿನಮನಿ ಹಾಗೂ ಕುರುಹಿನಶೆಟ್ಟಿ ಸಮಾಜದ ಎಲ್ಲ ಹಿರಿಯರು, ಯುವಕರು ಹಾಗೂ ಪರಸ್ಥಳಗಳಿಂದ ಬಂದ ವಿದ್ಯಾರ್ಥಿಗಳು, ಪಾಲಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶ್ರೀಶೈಲ್ ಬಾಳಿಗಿಡದ ಸ್ವಾಗತಿಸಿ, ಶಿಕ್ಷಕರಾದ ಚನ್ನಬಸು ಹುಣಶ್ಯಾಳ ಕಾರ್ಯಕ್ರಮ ನಿರೂಪಿಸಿ, ಮಹಾ ಮಂಗಲದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 