ಅನ್ನ, ನೀರು, ಒಳ್ಳೆಯ ಮಾತುಗಳು ಜಗತ್ತಿನ ಮೂರು ರತ್ನಗಳು: ಶ್ರೀಗಳು
Food, water, and kind words are the three gems of the world: Sri
ಮಾಂಜರಿ 25: ಅನ್ನ, ನೀರು ಮತ್ತು ಒಳ್ಳೆಯ ಮಾತುಗಳು ಇವು ಜಗತ್ತಿನ ಮೂರು ರತ್ನಗಳು. ಪವಿತ್ರವಾದ ಶ್ರಾವಣ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳಬೇಕು. ಆದ್ದರಿಂದ ಸಮಾಜದಲ್ಲಿ ಒಳ್ಳೆಯ ಮಾತುಗಳನ್ನು ಬಿತ್ತುವ ಕಾರ್ಯವನ್ನು ಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ಇವರ ನೇತೃತ್ವದಲ್ಲಿ ಅಂಕಲಿ ಗ್ರಾಮದ ಶಿವಾಲಯ ಸಮಿತಿಯನ್ನು ಮಾಡುತ್ತಿದೆ ಎಂದು ಚಿಕ್ಕೋಡಿಯ ಸಂಪಾದನ ಚರಮೂರ್ತಿಯ ಮಠದ ಪರಮಪೂಜ್ಯ ಸಂಪಾದನ ಮಹಾಸ್ವಾಮಿಜಿಗಳು ಹೇಳಿದರು.
ಅವರು ರವಿವಾರರಂದು ಶ್ರಾವಣ ಮಾಸದ ಪ್ರಯುಕ್ತ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಡಾ ಪ್ರಭಾಕರ್ ಕೋರೆ ಇವರ ನೇತೃತ್ವದಲ್ಲಿ ಮತ್ತು ಶಿವಾಲಯ ಸಮಿತಿಯ ಆಶ್ರಯದಲ್ಲಿ ನಡೆದ ವಚನ ಶ್ರಾವಣ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲು ಸಂಜೆ ನಡೆದ ವಚನ ಶ್ರಾವಣ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತಿಗೆ ಮನುಷ್ಯನಲ್ಲಿ ಪರಿವರ್ತನೆ ತರುವ ಶಕ್ತಿಸಾಮರ್ಥ್ಯವಿದೆ. ಆದ್ದರಿಂದ ಕೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಗೊಳ್ಳಬೇಕು ಎಂದರು.
ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳಗಳ ಕಾಲದ ವರೆಗೆ ಪ್ರವಚನ ನೀಡಿದ ಬಸವರಾಜ್ ಶರಣರು ಮಾತನಾಡಿ, ಧರ್ಮ ಮತ್ತು ಭಕ್ತಿ ಇದ್ದುದಕ್ಕೆ ಬಹಳಷ್ಟು ಮಠಗಳಿವೆ. ಆದರೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಸುಪುತ್ರರಾದ ಹಾಗೂ ಶೈಕ್ಷಣಿಕ ಸಾಮಾಜಿಕ ಆರೋಗ್ಯ ಮತ್ತು ಸಹಕಾರ ಕ್ಷೇತ್ರದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಉನ್ನತ ಸ್ಥಾನ ಪಡೆದಿರುವ ಪ್ರಭಾಕರ್ ಕೋರೆ ಇವರ ಮಾರ್ಗದರ್ಶನದಲ್ಲಿ ಅಂಕಲಿ ಗ್ರಾಮವನ್ನು ಧಾರ್ಮಿಕವಾಗಿ ಎಲ್ಲರನ್ನು ಆಕರ್ಷಿಸುತ್ತದೆ. ಪ್ರಕೃತಿ ಪ್ರೀತಿಸುವ ಅಂಕಲಿಯಲ್ಲಿ ಜನರು ಇದ್ದಾರೆ ಹೊಟ್ಟೆ ಹಸಿದಾಗ ಬುಟ್ಟಿಯಲ್ಲಿ ರೊಟ್ಟಿ ಇರಲಿಲ್ಲ, ಹೊಟ್ಟೆ ತುಂಬಿದಾಗ ಬುಟ್ಟಿಯಲ್ಲಿ ರೊಟ್ಟ ತುಂಬಿದ್ದವು ಎಂದು ಅವರು ಹೇಳಿದರು
ಈ ವೇಳೆ ಶಿವಾಲಯ ಸಮಿತಿಯ ವತಿಯಿಂದ ಪರಮಪೂಜ್ಯ ಸಂಪಾದನಾ ಸ್ವಾಮೀಜಿಗಳು ಹಾಗೂ ಬಸವರಾಜ ಶರಣರನ್ನು ಸನ್ಮಾನಿಸಲಾಯಿತು. ಈ ಮುಕ್ತಾಯ ಸಮಾರಂಭಕ್ಕೆ ನಾಗೇಶ್ ಮುಜುಕರ ತುಕಾರಾಮ ಪಾಟೀಲ್ ವಿವೇಕ್ ನಷ್ಟೇ ಅನ್ನಸಾಹೇಬ್ ಜಕಾತಿ ಕುಮಾರ್ ಕೋರೆ ತಮ್ಮಣ್ಣ ಗುಂಡಕಲ್ಲೇ ಪ್ರಶಾಂತ ಕೋರೆ ಹಾಗೂ ಶಿವಾಲಯ ಸಮಿತಿಯ ಪದಾಧಿಕಾರಿಗಳು ಮತ್ತು ಶರಣರು ಮತ್ತು ಶರಣಿಯರು ಹಾಜರಿದ್ದರು.
ನಾಗೇಶ್ ಮುಜುಕರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 