ಗುರು ಗಾನ ಲಹರಿಯಲ್ಲಿ ಶರಣಪ್ಪರಿಂದ ಜನಪದ ಸಂಗೀತ ಕಾರ್ಯಕ್ರಮಗಳು

ಗುರು ಗಾನ ಲಹರಿಯಲ್ಲಿ ಶರಣಪ್ಪರಿಂದ ಜನಪದ ಸಂಗೀತ ಕಾರ್ಯಕ್ರಮಗಳು  Folk music programs by Sharanappa at Guru Gana Lahari

ಲೋಕದರ್ಶನ ವರದಿ 

ಕೊಪ್ಪಳ 10 : ಗುರು ಗಾನಯೋಗಿ ಸಂಗೀತ ಹಾಗೂ ಲಲಿತ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಬೆಂಗಳೂರು ಇವರ ಸಹಯೋಗದಲ್ಲಿ ಕೊಪ್ಪಳದ ಗಣೇಶ ನಗರದ ಬಯಲು ವೇದಿಕೆಯಲ್ಲಿ “ಗುರು ಗಾನ ಲಹರಿ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು  

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ವಕೀಲರಾದ ಮಾರುತಿ ಚಾಮಲಾಪುರ ಗಣೇಶ ನಗರದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಕಾರ್ಯವಾಗಿದೆ ಕೊಪ್ಪಳದ ಪ್ರತಿ ಗಲ್ಲಿ ಗಲ್ಲಿಯಲ್ಲೂ ಇಂತಹ ಕಾರ್ಯಕ್ರಮಗಳು ಜರುಗಬೇಕು ಮಕ್ಕಳಿಗೆ ಇಂತಹ ಕಾರ್ಯಕ್ರಮಗಳು ಜರುಗುವುದರಿಂದ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುವುದರಲ್ಲಿ ಸಹಾಯಕವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪಿ.ಎಸ್‌.ಐ ಚಂದ್ರಹಾಸ ವಹಿಸಿದ್ದು, ಮುಖ್ಯ ಆತಿಥಿಗಳಾಗಿ ಶಿವಕುಮಾರ, ಲಕ್ಷ್ಮೀದೇವಿ ವಹಿಸಿದ್ದರು.  

ಕಾರ್ಯಕ್ರಮದಲ್ಲಿ ಕುಮಾರೇಶ್ವರ ಕೃಪಾಪೋಷಿತ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಾರುತಿ ದೊಡ್ಡಮನಿಯವರ ವಚನ ಸಂಗೀತ, ಅಲ್ಲಾಭಕ್ಷಿ ವಾಲಿಕಾರರಿಂದ ಸುಗಮ ಸಂಗೀತ, ಶರಣಪ್ಪರಿಂದ ಜನಪದ ಸಂಗೀತ ಕಾರ್ಯಕ್ರಮಗಳು ನಡೆದವು. 

ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರ​‍್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ ಹಾಗೂ ಏಕಾಂಬರೇಶ ಹಳ್ಳಿಕೇರಿ, ರಿಧಮ್ ಪ್ಯಾಡ್‌ನಲ್ಲಿ  ಸಂಜನ ಬೆಲ್ಲದ ಸಾಥ್ ನೀಡಿದರು.