ಜನಪದ ಸಂಗೀತ, ನೃತ್ಯದಲ್ಲಿ ವಿವಿಧತೆಯಲ್ಲಿ ಏಕತೆಯ ಬಿಂಬ : ಸವಿತಾ ಅಮರಶೆಟ್ಟಿ

ಜನಪದ ಸಂಗೀತ, ನೃತ್ಯದಲ್ಲಿ ವಿವಿಧತೆಯಲ್ಲಿ ಏಕತೆಯ ಬಿಂಬ : ಸವಿತಾ ಅಮರಶೆಟ್ಟಿ Folk music and dance are an image of unity in diversity: Savita Amarshetty

                  ಧಾರವಾಡ 13: ಜನಪದ ಸಂಗೀತ ಮತ್ತು ನೃತ್ಯ ಆಯಾ ರಾಜ್ಯದ ಜನರ ಭಾವನೆ, ಪರಂಪರೆ, ಇತಿಹಾಸ ಸಾರುತ್ತವೆ. ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಅದರಲ್ಲಿ ಕಾಣಬಹುದು’ ಎಂದು ರೇಷ್ಮೆ ಮಾರಾಟ ಮಂಡಳಿಯ ಮಾಜಿ  ಅಧ್ಯಕ್ಷರು, ಹಿರಿಯ ಮುಖಂಡರಾದ ಶ್ರೀಮತಿ ಸವಿತಾ ಅಮರಶೆಟ್ಟಿ ಹೇಳಿದರು.ಅವರು ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ಇವರು ಹಮ್ಮಿಕೊಂಡಕಲೆ,ಸಂಸ್ಕೃತಿ, ಉಪನ್ಯಾಸ, ಚಿತ್ರಕಲೆ, ಪರಿಸರ, ಸಂಗೀತ, ಸಾಹಿತ್ಯಗಳ ಚಿಂತನಾ ಸಮಾವೇಶದ ಅಂಗವಾಗಿ ನಡೆದ ಜಾನಪದ ನೃತ್ಯ ಸ್ಪರ್ಧೆಯ ಉದ್ಘಾಟನೆ ಮಾಡಿ ಮಾತನಾಡಿ  ಪಂಡಿತ್ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕ್ರಿಯಾಶೀಲ ಕಾರ್ಯದರ್ಶಿಗಳಾದ ಮಾರ್ತಂಡಪ್ಪ ಕತ್ತಿ ಅವರು ವಿನೂತನವಾದ ಇಂತಹ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದರಿಂದ ಯುವ ಸಮುದಾಯ ಮತ್ತು ಮಹಿಳೆಯರಲ್ಲಿ  ಸ್ಪರ್ಧಾಭಾವನೆ ಮೂಡಿ  ನಮ್ಮ ನಾಡಿನ ಮೂಲ ಸಂಸ್ಕೃತಿ ಜಾನಪದವನ್ನು ಉಳಿಸಿ ಬೆಳೆಸುವಲ್ಲಿ ಕತ್ತಿಯವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಡಾ. ವೀಣಾ ಬಿರಾದಾರ, ಡಾ. ಶರಣಮ್ಮ ಗೋರೆಬಾಳ, ಡಾ. ರತ್ನಾ ಐರಸಂಗ, ಮುಖ್ಯ ಅತಿಥಿಗಳಾಗಿ  ಆಗಮಿಸಿದ ಅಭಿಯಂತರಾದ ಸುಧೀರ್ ಪಿ ಎಸ್ ಮಾತನಾಡಿದರು.

        ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕಲಾವಿದರಾದ ಪ್ರಮೀಳಾ ಜಕ್ಕಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಎಸ್‌.  ಫರಾಸ, ಸಮಾವೇಶದ ಸಂಯೋಜಕರಾದ ಅರುಣ ಕುಮಾರ ಶೀಲವಂತ,  ಗೌರವ ಉಪಸ್ಥಿತರಿದ್ದರು.ಈ  ಕಾರ್ಯಕ್ರಮದಲ್ಲಿ ಈ ವರ್ಷದ ಧೀಮಂತ ಸನ್ಮಾನ ಪಡೆದ ಸಾಧಕರಿಗೆ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ  ಡಾ.ರಾಜೇಶ್ವರಿ ಮಹೇಶ್ವರಯ್ಯ, ಜಾನಪದ ನೃತ್ಯ ಹಾಗೂ ವಿವಿಧ ಕಲೆಗಳಲ್ಲಿ ಪಾಲ್ಗೊಳ್ಳುವ ಮಹಿಳಾ ಮಣಿಗಳು ಎಲ್ಲಾ  ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ.

                  ಇಂತಹ ಕಲಾ ಪ್ರತಿಷ್ಠಾನಗಳು ಮಹಿಳೆಯರನ್ನು ಹುರಿದುಂಬಿಸಿ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಜಾನಪದ ನೃತ್ಯ ಸ್ಪರ್ಧೆಯ ನಿರ್ಣಾಯಕರಾಗಿ  ಕಲಾವಿದರಾದ ಬಸವರಾಜ ಗೊರವರ, ಪ್ರಮೀಳಾ ಜಕ್ಕಣ್ಣನವರ,ಹಾಗೂ ಮಲ್ಲನಗೌಡ ಪಾಟೀಲ್ ಉಪಸ್ಥಿತರಿದ್ದರು. ನೃತ್ಯ ಸ್ಪರ್ಧೆಯ ಸಂಚಾಲಕರಾಗಿ ನೇಹಾ ಬುದ್ನಿ ನೃತ್ಯ ಸ್ಪರ್ದೇಯ ನಿರ್ವಹಣೆ ಮಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷರು ಮತ್ತು ಶಿಕ್ಷಕಿ ವಿಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.  ಸುರೇಶ ಬೆಟಗೇರಿ ಸ್ವಾಗತಿಸಿದರು. ಕಾರ್ಯದರ್ಶಿ  ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೃತಿ ಪ್ರಾರ್ಥಿಸಿದರು. ಕೃಷ್ಣಮೂರ್ತಿ ಗೊಲ್ಲರ ವಂದಿಸಿದರು. ಮಾರ್ತಾಂಡಪ್ಪ ಎಮ್ ಕತ್ತಿವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು.