ಮನುಷ್ಯನ ಅರಿವನ್ನು ವಿಸ್ತರಿಸಲು ಜನಪದ ಸಾಹಿತ್ಯ ಪೂರಕ: ಧನಗೊಂಡ
Folk literature is a supplement to broaden human awareness: Dhangonda
ಚಿಕ್ಕೋಡಿ 20: ಜನಪದ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದೆ ಮನುಷ್ಯನ ಅರಿವನ್ನು ವಿಸ್ತರಿಸಲು ಈ ಸಾಹಿತ್ಯ ಪೂರಕವಾಗಿದೆ ಎಂದು ಜಾನಪದ ಕಲಾವಿದ ಹಾಗೂ ಶಿಕ್ಷಕರಾದ ಸಿದ್ದಪ್ಪ ಧನಗೊಂಡ ಹೇಳಿದರು.
ಇಲ್ಲಿನ ಚೌಸನ್ ಶಿಕ್ಷಣ ಮಾಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣದಲ್ಲಿ ಜನಪದ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತ ಗೊಳಿಸುವುದು ಎನ್ನುವ ವಿಷಯದ ಕಾರ್ಯಗಾರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಳ್ಳಿಗಾಡಿನ ಬದುಕು ಜನಪದ ಸಾಹಿತ್ಯದ ಮೂಲ ಜನಪದ ಸಾಹಿತ್ಯದಲ್ಲಿ ಶಿಕ್ಷಣ ಪಾಠ ಇದೆ ನಮ್ಮ ಪೂರ್ವಜರು ಜನಪದ ಸಾಹಿತ್ಯದ ಮೂಲಕ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದ್ದಾರೆ ವಿದ್ಯಾರ್ಥಿ ಗಳು ಜನಪದ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು, ಜನಪದ ಗೀತೆ ಗಾದೆ ಒಗಟುಗಳನ್ನು ಸಂಗ್ರಹಿಸುವ ಕಾರ್ಯವಾಗಬೇಕು ಎಂದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಜನಪದ ಸಾಹಿತ್ಯದಲ್ಲಿರುವ ಮೌಲ್ಯಗಳು ಸಹಕಾರಿಯಾಗಿವೆ. ಜೀವನದಲ್ಲಿ ಸಾಧನೆ ಮಾಡಿದ ಮಹನೀಯರು ಪ್ರೇರಣೆಯಾಗಬೇಕು ಬದುಕು ಕೇವಲ ನಿಂತ ನೀರಲ್ಲ ಪ್ರತಿನಿತ್ಯ ಬಾಳನ್ನು ಸಂಸ್ಕರಿಸಬೇಕು ದುಃಖ ಸುಖಗಳಲ್ಲಿ ತಟಸ್ಥ ಭಾವ ಇರಬೇಕು ಬರುವ ಕಷ್ಟಗಳಿಗೆ ಎದುರಿಸುವ ಧೈರ್ಯ ಇರಬೇಕು ಬಾಳು ಗಂಭೀರವಾಗಿ ಕಂಡರೂ ಸರ್ವಕಾಲಿಕ ಕೃಷಿಯಿಂದ ಜೀವಿಸಬೇಕು ಎನ್ನುವ ಅನೇಕ ಉದಾತ ವಿಚಾರಗಳು ನಮ್ಮ ಜನರದು ಆಗಿತ್ತು ಎಂದರು.
ಜೀವನದ ಲೆಕ್ಕವನ್ನು ಮಾಡಲು ಗಣಿತದ ಲೆಕ್ಕಾಚಾರ ಅವಶ್ಯಕ ವೆಂದು ಗಣಿತದ ಮಹತ್ವವನ್ನು ಜನಪದ ಶೈಲಿಯಲ್ಲಿ ತಿಳಿಸಿದರು. ಸಂಸ್ಕೃತಿ ಸಂಪ್ರದಾಯ ಜೀವನದ ಅಡಿಪಾಯ ವಾಗಿವೆ ಜಾನಪದ ಸಂಸ್ಕೃತಿಯ ಸೊಗಡು ಸಂಪ್ರದಾಯವನ್ನು ತಮ್ಮ ಹಾಡಿನ ಮೂಲಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜಾನಪದದ ಮೆರಗು ಹೆಚ್ಚಿಸಿದರು.
ಡಾ. ಕನಕಾಚಲ ಕನಕಗಿರಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ವ್ಯಕ್ತಿಗೆ ಸಾಧನೆಗಿಂತ ಬದುಕಿನ ಮೌಲ್ಯದ ಶಿಕ್ಷಣದ ಅಗತ್ಯವಿದೆ ಶಿಕ್ಷಣವು ಉತ್ತಮ ಮೌಲ್ಯಗಳ ಮೂಲಕ ಕೌಶಲ ಆಧಾರಿತ ಜೀವನಕ್ಕೆ ಆದ್ಯತೆ ಆಗಿರಬೇಕು ಎಂದರು.
ಪ್ರಾಧ್ಯಾಪಕ ರಾದ ಡಾ.ಎನ್.ಎಸ್. ಶಿಂದೆ ಸ್ವಾಗತ ಹಾಗೂ ಅತಿಥಿಗಳ ಪರಿಚಯ ಮಾಡಿದರು
ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಸ್ವಾತಿ ಕೋಳಿ, ಪ್ರಿಯಾಂಕ ಬನ್ನಪ್ಪ ಚೌಗುಲ. ಪ್ರೇಮ ಮರಡಿ ಕಾರ್ಯಾಗಾರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು
ಪ್ರಶಿಕ್ಷಣಾರ್ಥಿಯಾದ ಗಂಗಾ ಜಾದವ್ ಪ್ರಾರ್ಥನ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಎಸ್ ಎಮ್ ಚಂದ್ಗಡೆ, ಚೌಸನ್ ನರ್ಸರಿ ಶಾಲೆಯ ಶಿಕ್ಷಕರಾದ ಕವಿತಾ ಹರಕೆ ಆಸ್ಮಾ ಜಮಾದಾರ್ ಉಜ್ವಲ ಮಾನೆ ಎಂ.ಎಚ್.ರಾವುತ್. ಪ್ರಶಾಂತ್ ಪತ್ತಾರ್ ಕೃಷ್ಣ ಅರಗೆ ಉಪಸ್ಥಿತರಿದ್ದರು. ಕೀರ್ತಿ ಖೊತ ಹಾಗೂ ಆರತಿ ತಳವಾರ ನಿರೂಪಿಸಿದರು. ರೂಪಾಲಿ ದಿವಟೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 