ಜಾನಪದ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವ
Folk artists honored with awards
ಜಾನಪದ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವ
ರಾಣೆಬೆನ್ನೂರು ಸೆ.12: ತಾಲೂಕಿನ ಯಕಲಾಸಪುರ ಗ್ರಾಮದ ಜನನಿ ಜಾನಪದ ಕಲಾ ವೇದಿಕೆಯ 15ನೇ ವಾರ್ಷಿಕೋತ್ಸವ, ಜನನಿ ಜಾನಪದೋತ್ಸವ ಹಾಗೂ ಜಾನಪದ ಕ್ಷೇತ್ರದ ಸಾಧಕರ ಅಭಿನಂದನಾ ಸಮಾರಂಭ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಜನನಿ ಜಾನಪದ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ ಹಾಗೂ ಗಣ್ಯರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಿದರು. ಜಾನಪದ ಕ್ಷೇತ್ರದ ಸಾಧಕರಾದ ಗುರುನಾಥ ಹುಬ್ಬಳ್ಳಿ (ಮುಗಳಿ), ಕೃಷ್ಣ ಮತ್ತಿಕೋಟೆ (ಕೋಲಾರ), ಅಮರೇಶ್ ಕೊಂಡಗೋಳಿ (ಬೆಂಗಳೂರು), ಅರುಂಧತಿ ಆರೇರ (ಶಿಗ್ಗಾವಿ), ಅಭಿರುಚಿ ಕೆ.ಎಸ್. ನಾಗರಾಜ (ರಾಣೆಬೆನ್ನೂರು), ಯಲ್ಲಪ್ಪ ಸೂರ್ಯೆ (ಆರೆಮಲ್ಲಾಪುರ), ಶಿವಾಜಿ ಬನ್ನಿಕೊಡ (ಯಕಲಾಸಪುರ), ರಾಮಚಂದ್ರ್ಪ ನೆಲವಾಗಲ (ಯಕಲಾಸಪುರ), ಶಂಕರ್ ಮುದ್ದಿ (ದೇವರಗುಡ್ಡ) ಹಾಗೂ ಗಣೇಶ್ ಗುಡಿಗುಡಿ (ಕುಪ್ಪೇಲೂರು) ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜನನಿ ಅಧ್ಯಕ್ಷ ಪರಶುರಾಮ ಬಣಕಾರ, ಗೌರವಾಧ್ಯಕ್ಷ ಶಿವಕುಮಾರ ಜಾದವ, ಶ್ರೀಮತಿ ರಿಂದಮ್ಮ ಬಣಕಾರ, ಮಣಿಕಂಠ ಬಣಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 