ಜಾನಪದ ಕಲಾ ಉತ್ಸವ
ಜಾನಪದ ಕಲಾ ಉತ್ಸವ
ಬೆಳಗಾವಿ 06 : ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಬೆಳಗಾವಿ ಜಿಲ್ಲೆಯ ಯರಗಟ್ಟಿ ಸ್ವಾಮಿ ವಿವೇಕಾನಂದ ಸಾಹಿತ್ಯ ಸಾಂಸ್ಕೃತಿಕ ಯುವಕ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸೆ.30 ರಿಂದ 31 ರಂದು ನಗರದ ವಾಲ್ಮೀಕಿ ನಗರದಲ್ಲಿ ಜಾನಪದ ಕಲಾ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರವೇ ರಾಜ್ಯ ಸಂಚಾಲಕರಾದ ಸತೀಶ ಕರವಣ್ಣವರ ಅವರು ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಲಗಮಣ್ಣಾ ಮಾಳಗಿ, ಬಸವರಾಜ ಧೂಳಪ್ಪಗೋಳ, ಹೊಳೆಪ್ಪಾ ಸುಳಧಾಳ, ಸಿದರಾಯಿ ನಾಯಿಕ, ನಿಂಗಪ್ಪ ಗುಂಡ್ಯಾಗೋಳ, ಕರವೇ ಸದಸ್ಯರು, ಸಿದರಾಯಿ ವಡ್ಡಗೋಳ, ಬಸಪ್ಪ ಗುಂಡ್ಯಾಗೋಳ, ಸಿದರಾಯಿ ಕೋಣೆನ್ನವರ, ಲಗಮಪ್ಪಾ ಕೋಣಕೇರಿ, ಲಗಮಪ್ಪಾ ಪೆಂಡಾರಿ, ಸಿದರಾಯಿ ಗುಜನಾಳ, ಬಸಪ್ಪ ನಾಯಿಕ, ಸಂತೋಷ ಅವಜಪ್ಪಗೋಳ, ಬಸವರಾಜ ಮಾದರ, ರುದ್ರ್ಪ ಮಾದರ ಹಾಗೂ ವಾಲ್ಮೀಕಿ ನಗರದ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತಿರಿದ್ದರು.
ಕಾರ್ಯಕ್ರಮದಲ್ಲಿ ಜಾನಪದ ಗೀತೆ, ಜಾನಪದ ನೃತ್ಯ, ಕೋಲಾಟ, ಭಜನೆ, ಡೋಳ್ಳಿನ ಪದಗಳು, ಜಾನಪದ ಗೀತೆ, ಲಾವಣಿ ಪದಗಳು, ಸೋಬಾಣ ಪದಗಳು, ಸಂಪ್ರದಾಯ ಪದಗಳು, ಸಂಗ್ಯಾ-ಬಾಳ್ಯಾ ಸಣ್ಣಾಟಗಳು ಜರುಗಿದವು.
ವಾವಿಸಂ.17