ಅಂಕಗಳಿಗಿಂತ ಕೌಶಲ್ಯಕ್ಕೆ ಗಮನ ಅವಶ್ಯ : ಸಿ ಎಂ ಬಂಡಗರ

ಅಂಕಗಳಿಗಿಂತ ಕೌಶಲ್ಯಕ್ಕೆ ಗಮನ ಅವಶ್ಯ : ಸಿ ಎಂ ಬಂಡಗರ Focus on skills rather than grades: CM Bandagara

ಇಂಡಿ 01: ವಿದ್ಯಾರ್ಥಿಗಳಿಗೆ ಅಂಕಗಳಿಗಿಂತಲೂ ಅವರಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಪ್ರತಿಯೊಬ್ಬರಲ್ಲಿ ಇರುವ ಪ್ರತಿಭೆ ಅನಾವರಣ ಆಗಬೇಕು ಎಂದು ಸಾಹಿತಿ ಸಿ ಎಂ ಬಂಡಗರ ಅಭಿಪ್ರಾಯ ಪಟ್ಟರು.  

ಅವರು ತಾಲೂಕಿನ ಝಳಕಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಆಯೋಜಿಸಿದ ಕ್ರೀಡಾ ಸಂಸ್ಕೃತಿಕ ಚಟುವಟಿಕೆ ಹಾಗೂ ಸಂಘಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.  

ಜಗತ್ತಿನಲ್ಲಿ ಯಶಸ್ಸು ಕಂಡವರೆಲ್ಲ ಅಂಕಗಳನ್ನು ಬೆನ್ನಟ್ಟಿ ಹೋದವರು ಅಲ್ಲ. ಹಾಗೂ ತಮ್ಮಲ್ಲಿ ಇರುವ ಪ್ರತಿಭೆ ಗುರುತಿಸಿ ಸತತ ಅಧ್ಯಯನ, ಪ್ರಯತ್ನ ಹಾಗೂ ನಿಚ್ಛೆಲವಾದ ಛಲದಿಂದ ಹೋರಾಡಿದ ಫಲವಾಗಿ ಅವರು ಜಗತ್ತಿನಲ್ಲಿ ವಿಖ್ಯಾತಿ ಪಡೆದರು. ಹಾಗೂ ನಮಗೆಲ್ಲ ಮಾದರಿಯಾಗಿ ಸಮಾಜ ಸುಧಾರಣೆ ಮಾಡಿದ್ದಾರೆ ಅಂತವರ ಆದರ್ಶ್‌ ಇಟ್ಟುಕೊಂಡು ಜೀವನ ರೂಪಿಸಿಕೊಳ್ಳುವ ಅವಶ್ಯಕತೆ ಇಂದಿನ ಪೀಳಿಗೆ ರೂಪಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು. 

ಕಾರ್ಯಕ್ರಮವನ್ನು ಶಾಸಕ ಯಶವಂತ್ರಾಯ ಪಾಟೀಲ್ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ವಿವೇಕಾನಂದ ಉಘಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಸಂತೋಷ ದಂಡ್ಯಾಗೋಳ, ಅನಿಲ ಬಿರಾದಾರ, ತಾಜ್ ಬಾಬಾ, ಬಾಪೂಗೌಡ ಬಿರಾದಾರ, ಸಚಿನ್ ಮಂಚಲಕರ, ಗುರಣ್ಣಗೌಡ ಪಾಟೀಲ್, ಹಾಗೂ ಹಣಮಂತ ಕೋಳಿ, ಸಂಜು ಬಂಗಾರ ತಳ, ಅಣ್ಣಪ್ಪ ತಳವಾರ್, ಸಣ್ಣಪ್ಪ ತಳವಾರ್, ಶ್ರೀಮಂತ ಕಾಪ್ಸೆ, ನಾರಾಯಣ ಜಾಗೀರದಾರ, ಗುರಣ್ಣನಗೌಡ ಬಿರಾದಾರ ಸೇರಿದಂತೆ ಹಲವಾರು ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.