ದೇಶಪಾಂಡೆ ಪ್ರತಿಮೆಗೆ ಪುಷ್ಪನಮನ

ದೇಶಪಾಂಡೆ ಪ್ರತಿಮೆಗೆ ಪುಷ್ಪನಮನ  Floral tribute to Deshpande's statue

ಲೋಕದರ್ಶನ ವರದಿ 

  ಧಾರವಾಡ  04: ಕರ್ನಾಟಕ ವಿದ್ಯಾವರ್ಧಕ ಸಂಘದ 137ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ರಾ.ಹ. ದೇಶಪಾಂಡೆ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾ.ಹ. ದೇಶಪಾಂಡೆ ಅವರ ಕನ್ನಡ ಮತ್ತು ಕರ್ನಾಟಕ ಸೇವೆಯನ್ನು ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು.  ಕಾರ್ಯಕ್ರಮದಲ್ಲಿ ಸೋಹನ್ ಸುರೇಶ್ ಹೊರಕೇರಿ, ಡಾ. ಸುರೇಶ್ ಡಿ. ಹೊರಕೇರಿ, ಎನ್‌.ಎಸ್‌. ಕಾಶಪ್ಪನವರ, ರಾಜೇಶ್ ಕೋರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಇತಿಹಾಸ ಹಾಗೂ ಕನ್ನಡದ ಬೆಳವಣಿಗೆಗೆ ರಾ.ಹ. ದೇಶಪಾಂಡೆ ಅವರ ಕೊಡುಗೆಯನ್ನು ಸ್ಮರಿಸಲಾಯಿತು.