ಪತ್ರಿಕಾ ಮತ್ತು ಸಾಹಿತ್ಯ ಸೇವೆಗೆ ಸಿ.ವಾಯ್. ಮೆಣಸಿನಕಾಯಿ ಅವರಿಗೆ ಸನ್ಮಾನ
C.Y. Menasinakai Honoured for Services to Journalism and Literature
ಬೆಳಗಾವಿ, ಆ. 4: ಪತ್ರಿಕಾ ಕ್ಷೇತ್ರ ಹಾಗೂ ಸಾಹಿತ್ಯ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಪತ್ರಕರ್ತ ಸಿ.ವಾಯ್. ಮೆಣಸಿನಕಾಯಿ ಅವರನ್ನು ಬೆಂಗಳೂರಿನ ಮಲ್ಲತ್ತನಹಳ್ಳಿಯ ಕಲಾಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕುವೆಂಪು ವಿರಚಿತ ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನದ ಅಂಗವಾಗಿ ಬಿಂಕ ಬಿನ್ನಾಣರು ತಂಡ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ರಂಗ ನಿರ್ದೇಶಕರಾದ ಶಿವು ಹೊನ್ನಗನಹಳ್ಳಿ ಹಾಗೂ ಹಿರಿಯ ರಂಗಕರ್ಮಿ ಬಿ.ಜಿ. ರಾಮಕೃಷ್ಣ ಅವರು ಮೆಣಸಿನಕಾಯಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಂಗಕರ್ಮಿ ಸಿ.ಎಂ. ತಿಮ್ಮಯ್ಯ, ನಾಟಕಕಾರ್ತಿ ನಾಗರತ್ನಾ ದೇವ ನಾಗೇಶ, ಸಂಗೀತ ನಿರ್ದೇಶಕ ಲಕ್ಷ್ಮಣ ಸುವರ್ಣ, ಡಾ. ಜಗದೀಶ ಗೆಜ್ಜಿ, ಹೋರಾಟಗಾರ ರಂಗಸ್ವಾಮಿ ಗಂಗನಗೌಡರ, ಹಿರಿಯ ರಂಗಕರ್ಮಿ ಬಿ.ಜಿ. ರಾಮಕೃಷ್ಣ ಸೇರಿದಂತೆ ಹಲವಾರು ರಂಗಕಲಾವಿದರು, ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 