ಪ್ರವಾಹ: ಜಿಲ್ಲೆಗೆ 75 ಕೋಟಿ ರೂ. ಬಿಡುಗಡೆ
ಬಾಗಲಕೋಟೆ: ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರದಿಂದ ಈವರೆಗೆ ಒಟ್ಟು 75 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಿವಿಧ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಮೊದಲು 10 ಕೋಟಿ ಸೋಮವಾರ 25 ಕೋಟಿ ಹಾಗೂ ಮಂಗಳವಾರ 40 ಕೋಟಿ ಸೇರಿ ಒಟ್ಟು 75 ಕೋಟಿ ರೂ.ಗಳನ್ನು ಜಿಲ್ಲೆಗೆ ಬಿಡುಗಡೆಯಾಗಿದೆ ಎಂದರು.
ಸೋಮವಾರ ಜಿಲ್ಲೆಯ ಸಂತ್ರಸ್ಥರಿಗೆ ತಲಾ 10 ಸಾವಿರ ರೂ.ಗಳಂತೆ ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ 8500 ಜನ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ 8.5 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದ್ದು, ನಾಳೆ ಪುನಃ 15 ಸಾವಿರ ಹಾಗೂ ಇನ್ನೇರಡು ದಿನದಲ್ಲಿ ಮತ್ತೆ 15 ಸಾವಿರ ಸೇರಿದಂತೆ 30 ಸಾವಿರ ಸಂತ್ರಸ್ತರಿಗೆ ಜಮಾ ಮಾಡಲಾಗುವುದೆಂದರು.
ಪರಿಹಾರ ವಿತರಣೆ ಸಂಪೂರ್ಣ ಪಾರದರ್ಶಕತೆ :
ಪ್ರವಾಹದಿಂದ ಜಿಲ್ಲೆಯ ಸಂತ್ರಸ್ತರ ಬದುಕೇ ತಲ್ಲಣಗೊಂಡ ಹಿನ್ನಲೆಯಲ್ಲಿ ಪ್ರವಾಹ ಪರಿಹಾರವನ್ನು ನುರಿತ ತಂಡಗಳ ಮುಖಾಂತರ ನೇರವಾಗಿ ಆಯಾ ಸಂತ್ರಸ್ತರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಜಮಾ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಕಾರ್ಯವನ್ನು ಸಂಪೂರ್ಣ ಪಾರದರ್ಶಕವಾಗಿ ಮಾಡಲಾಗುತ್ತಿದೆ ಎಂದರು.
ಪರಿಹಾರದಲ್ಲಿ ಯಾವುದೇ ದುರುಪಯೋಗಕ್ಕೆ ಅವಕಾಶ ನೀಡದೇ ಅಧಿಕಾರಿಗಳು ಸಂಪೂರ್ಣ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಕಳೆದ 2 ದಿನಗಳಿಂದ ಸಂತ್ರಸ್ತರ ಆಧಾರ ಕಾರ್ಡ, ಬ್ಯಾಂಕ್ ಖಾತೆಗಳ ಆರ್.ಟಿ.ಜಿ.ಎಸ್ ಕ್ರೋಢೀಕರಣದತ್ತ ಗಮನ ಹರಿಸಲಾಗಿತ್ತು. ಇವೆಲ್ಲವನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ತಾತ್ಕಾಲಿಕ ಶೆಡ್ ನಿಮರ್ಾಣ :
ಪ್ರವಾಹದಿಂದ ಸಂಪೂರ್ಣವಾಗಿ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ಥರಿಗೆ ತಾತ್ಕಾಲಿಕವಾಗಿ ಶೆಡ್ ನಿಮರ್ಿಸಿ ಕೊಡಲಾಗುತ್ತಿದೆ. ಲೋಕೋಪಯೋಗಿ, ನಿಮರ್ಿತಿ ಕೇಂದ್ರ ಹಾಗೂ ಭೂಸೇನಾ ನಿಗಮದಿಂದ ಜಂಟಿಯಾಗಿ ತಾತ್ಕಾಲಿಕ ಶೆಡ್ ನಿಮರ್ಿಸುವ ಕಾರ್ಯ ಮಾಡಲಾಗುತ್ತದೆ. ಸಂಪೂರ್ಣ ಮನೆ ಹಾಳಾಗಿರುವ ಹಾಗೂ ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುವ ಸಂತ್ರಸ್ತರಿಗೆ ಗರಿಷ್ಠ 10 ತಿಂಗಳ ಅವಧಿಗೆ ಸೀಮಿತಗೊಳಿಸಿ ಮಾಸಿಕ 5 ಸಾವಿರ ರೂ.ಗಳಂತೆ ಬಾಡಿಗೆ ಮೊತ್ತವನ್ನು ನೀಡಲಾಗುವುದೆಂದರು.
ಪಟ್ಟದಕಲ್ಲ ಸಂಪೂರ್ಣ ಸ್ಥಳಾತರಕ್ಕೆ ಡಿಸಿ ಒಲವು :
ಪ್ರವಾಹದಿಂದ ತತ್ತರಿಸಿದ ಐತಿಹಾಸಿಕ ಸ್ಮಾರಕಗಳ ತಾಣವಾದ ಪಟ್ಟದಕಲ್ಲು ಗ್ರಾಮವನ್ನು ಸಂಪೂರ್ಣ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಗಳು ಒಲವು ತೋರಿದ್ದು, ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚಚರ್ೆ ನಡೆಸುವುದಾಗಿ ತಿಳಿಸಿದರು.
ಆಸರೆ ಮನೆ :
ಕಳೆದ 2009 ರ ಪ್ರವಾಹದಲ್ಲಿ ಸಾವಿರಾರು ಮನೆಗಳ ನಿಮರ್ಾಣ ಮಾಡಲಾಗಿತ್ತು. ಸಂತ್ರಸ್ತರು ಬಳಸದ ಕಾರಣ ಆಸರೆ ಮನೆಗಳು ಶೀಥಿಲಗೊಂಡಿವೆ. ಅವುಗಳನ್ನು ಪುನಃ ರಿಪೇರಿ ಹಾಗೂ ಸುತ್ತ ಮುತ್ತಲೂ ಜಾಲಿಗಳು ಬೆಳೆದಿದ್ದು, ಅವುಗಳನ್ನು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗುವುದು. ಕೆಲವರಿಗೆ ಹಕ್ಕುಪತ್ರ ವಿತರಣೆ ಬಾಕಿ ಸೇರಿದಂತೆ ಇನ್ನೀತರ ವಿಷಯಗಳನ್ನು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸಂಪೂರ್ಣ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರು ತಾವೇ ತಮ್ಮ ಅನುಕೂಲದಂತೆ ಮನೆ ನಿಮರ್ಿಸಿಕೊಳ್ಳುವುದಾದರೆ ಹಂತ ಹಂತವಾಗಿ 5 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಪಿಡಿಓ ಹಾಗೂ ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆಂದರು.
ಸಭೆಯಲ್ಲಿ ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾಣಹಾನಿ ಪರಿಹಾರ ವಿತರಣೆ :
ಪ್ರವಾಹದಿಂದ ಇಲ್ಲಿವರೆಗೆ 3 ಜನ ಮೃತಪಟ್ಟಿದ್ದು, ತಲಾ 5 ಲಕ್ಷ ರೂ.ಗಳಂತೆ ಒಟ್ಟು 15 ಲಕ್ಷ ರೂ.ಗಳ ಪರಿಹಾಧನ ನೀಡಲಾಗಿದೆ. 150 ಜಾನುವಾರುಗಳು ಸಹ ಸಾವನ್ನೊಪ್ಪಿದ್ದು, ಒಟ್ಟು 5 ಲಕ್ಷ ಪರಿಹಾರಧನವನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಹದಿಂದ 24800 ಮನೆಗಳು ಹಾನಿಗೊಳಪಟ್ಟಿವೆ ಎಂದು ತಿಳಿಸಿದರು.
ರೈತ ಉತ್ಪನ್ನ ಸಂಸ್ಕರಿಸಿ ಮಾರಾಟ ಮಾಡಲು ಕರೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 