ನಾಗರಾಜ್ ಹರಪನಹಳ್ಳಿ
ಕಾರವಾರ: ಕಳೆದ ವರ್ಷದ ಮಳೆಗಾಲದದಿಂದ ಪ್ರತಿಕ್ಷಣವೂ ಸಮುದ್ರಕೊರೆತದ ಭೀಕರತೆಗೆ ವಾಸದ ನೆಲೆ ಹಾಗೂ ಜೀವನಾಧಾರ ತೋಟಗಳನ್ನು ಕಳೆದುಕೊಳ್ಳುತ್ತಿರುವ ಹೊನ್ನಾವರ ತಾಲೂಕಿನ ಕಕರ್ಿ ಗ್ರಾಮದ ತೊಪ್ಪಲಕೇರಿ ಮಜರೆಯ ಅಮಾಯಕ ಜನರ ಜೀವದೊಂದಿಗೆ ಕಡಲು , ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆಂಬ ಅನುಮಾನ ಕಾಡತೊಡಗಿದೆ. ಇಲ್ಲಿನ ಜನರ ಬೇಡಿಕೆ ಸಹ ಸಕರ್ಾರದ ಎದುರು ಸಮುದ್ರ ರೋಧನದಂತಾಗಿದೆ.
ಸಮುದ್ರದಂಚಿಗೆ ಹರಡಿಕೊಂಡ ತೊಪ್ಪಲಕೇರಿ ಮಜರೆಯಲ್ಲಿ ನೂರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಸಮುದ್ರ ತನ್ನ ಮೇರೆ ಮೀರಿ ಉಕ್ಕಿದ ಉದಾಹರಣೆಗಳಿರಲಿಲ್ಲ. ಆದರೆ ಕಳೆದ ಕುಂಭದ್ರೋಣ ಮಳೆ ಮಾತ್ರ ತೊಪ್ಪಲಕೇರಿ ಮಜರೆಗೆ ಅಕ್ಷರಶಃ ದುಃಸ್ಸಪ್ನವಾಗಿತ್ತು. ಅದೇ ಸಂದರ್ಭದಲ್ಲಿ ಬಂದ ಒಖೈ ಚಂಡಮಾರುತ ಕರಾವಳಿಯನ್ನು ತತ್ತರ ಗೊಳಿಸಿತು. ಈ ವರ್ಷವೂ ಕುಂಭದ್ರೋಣ ಮಳೆಯೊಟ್ಟಿಗೆ ಚಂಡಮಾರುತದಿಂದಾಗಿ ಸಮುದ್ರದಲೆಗಳು ಎತ್ತರೆತ್ತರಕ್ಕೆ ಬಂದು ಬಡಬಗ್ಗರ ಮನೆ, ಗುಡಿಸಲು, ತೋಟ ನುಗ್ಗಿ ಬದುಕು ತತ್ತರಿಸುವಂತೆ ಮಾಡಿತ್ತು. ಈಚೆಗೆ ಸುರಿದ ಗಾಳಿಮಳೆಯ ಜೊತೆಗೆ ಸಮುದ್ರ ರಾತ್ರಿ ಬೆಳಗಾಗುವುದರೊಳಗೆ ತೊಪ್ಪಲಕೇರಿಯ ಅಂಚನ್ನು ಆಪೋಶನ ತೆಗೆದುಕೊಳ್ಳಲು ಆರಂಭಿಸಿತ್ತು. ದೈತ್ಯ ಗಾತ್ರದ ಸಮುದ್ರದ ಅಲೆಗಳು ತೊಪ್ಪಲಕೇರಿ ಗ್ರಾಮವನ್ನೇ ಕಬಳಿಸುತ್ತ ಬಂದವು. ಅಲೆಗಳ ರಭಸಕ್ಕೆ ಮಾಧವ ನಾರಾಯಣ ನಾಯ್ಕ ಎಂಬುವವರ ಮನೆಯ ಬಳಿಯ ಲ್ಯಾಟರೈಟ್ ಮತ್ತು ಗ್ರೆನೈಟ್ ಕಲ್ಲಿನ ತಡೆಗೋಡೆ ಚೂರು ಚೂರಾಗಿತ್ತು. ಸಮುದ್ರದ ನಾಲಿಗೆ ನೇರವಾಗಿ ನುಗ್ಗಿ ಕುಡಿಯುವ ನೀರಿನ ಬಾವಿ, ತೋಟವನ್ನೆಲ್ಲ ಕಬಳಿಸಿತು. ಕಮಲಾಕರ ನಾಗಪ್ಪ ಮೆಸ್ತ, ಉದಯ ನಾಯ್ಕರ ಮನೆಗಳಿಗೆ ಸಮುದ್ರದ ಅಲೆಗಳು ಬಡಿದು ಕುಸಿದು ಬೀಳುವ ಹಂತದಲ್ಲಿದೆ. ಹಾಗೆಯೇ ದೇವಿದಾಸ ನಾರಾಯಣ ನಾಯ್ಕ, ಮೋಹನದಾಸ ಸುಬ್ರಾಯ ನಾಯ್ಕ, ಸುನೀಲ ವಗರ್ೀಸ್, ಆನಂದ ದುರ್ಗಪ್ಪ ನಾಯ್ಕ, ಮಾದು ನಾಯ್ಕ, ಮುಂತಾದವರ ತೋಟಗಳು ಕೂಡ ಸಮುದ್ರ ಕೊರೆತಕ್ಕೆ ಆಹುತಿಯಾಗಿವೆ. ಸುಮಾರು 3 ಕಿ.ಮಿ. ಸಮುದ್ರದ ಅಂಚು ಕೊರೆತಕ್ಕೆ ಬಲಿಯಾದರೂ ಕೂಡ ಅದರಲ್ಲಿ ತೊಪ್ಪಲಕೇರಿಯ 400 ಮಿ. ಪ್ರದೇಶದಲ್ಲಿ ಭೂಮಿಯನ್ನು ಕಬಳಿಸಿದೆ.
ವಾಸದ ಮನೆ, ಶೌಚಾಲಯದ ಕೋಣೆ, ಕೊಟ್ಟಿಗೆಗಳೆಲ್ಲ ನಿನರ್ಾಮವಾದವು. ಸಾಲು ಸಾಲು ತೆಂಗಿನ ಮರ, ಅಡಿಕೆ ಮರಗಳ ಬೇರುಗಳೆಲ್ಲ ಕತ್ತರಿಸಿಕೊಂಡು ಉಪ್ಪುನೀರಿಗೆ ಬಲಿಯಾಗಿವೆ. ಅವುಗಳ ಚಂಡೆಗಳೆಲ್ಲ ಹಾರಿಹೋಗಿವೆ. ಬಿರುಕು ಬಿಟ್ಟ ಕುಡಿಯುವ ನೀರಿನ ಬಾವಿ ತುಂಬ ಸಮುದ್ರದ ನೀರು ಕಸಕಡ್ಡಿ ತುಂಬಿ ಉಪ್ಪುಉಪ್ಪಾಗಿವೆ. ಅಮಾಯಕ ಮಂದಿ ಏನು ಮಾಡಬೇಕೆಂತ ಗೊತ್ತಾಗದೇ ಕಕ್ಕಾಬಿಕ್ಕಿಯಾಗಿದ್ದಾರೆ.
ಜನಪ್ರತಿನಿಧಿಗಳು ಬಂದು ಹೋಗಿದ್ದಾರೆ - ಕೆಲಸವಾಗಿಲ್ಲ:
ಅಂದಿನ ಶಾಸಕಿ ಶಾರದಾ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದರು. ಶಾಸಕರು ತಕ್ಷಣ ಕ್ರಮಕೈಗೊಳ್ಳುವುದಾಗಿ ಹೇಳಿ ಜಿಲ್ಲಾಧಿಕಾರಿಗಳಿಗೆ ಬರೆದರು. ತಹಸೀಲ್ದಾರರು ಬಂದು ಹೋದರು. ಒಳನಾಡು ನೀರಾವರಿ ಮತ್ತು ಬಂದರು ಇಲಾಖೆಯ ಸಹಾಯಕ ಇಂಜಿನಿಯರ್ ಸ್ಥಳ ಪರಿಶೀಲಿಸಿದರು. ಎಲ್ಲರೂ ಜಿಲ್ಲಾಧಿಕಾರಿಗಳಿಗೆ, ಜೊತೆಗೆ ತಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸಿದ್ದಾರೆ. ಜಿಲ್ಲಾಧಿಕಾರಿಗಳೂ ಕೂಡ ವಿಕಾಸ ಸೌಧದ ಲೋಕೋಪಯೊಗಿ ಇಲಾಖೆಯ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಪರ ಮುಖ್ಯ ಕಾರ್ಯದಶರ್ಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಸಮುದ್ರ ಕೊರೆತ ತಡೆಗೆ ಅನುದಾನ ಬಿಡುಗಡೆಯಾಗಿಲ್ಲ.
ಇದೀಗ ನೂತನ ಶಾಸಕರಾದ ದಿನಕರ ಕೆ.ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇವೆಲ್ಲದರ ನಡುವೆ ಊರ ಜನರು ಮಾತ್ರ ತಮ್ಮ ಮಕ್ಕಳೊಟ್ಟಿಗೆ ಹಗಲು ರಾತ್ರಿಯನ್ನು ಜೀವ ಕೈಯಲ್ಲಿ ಹಿಡಿದು ದಿನ ದೂಡುತ್ತ ಬಂದಿದ್ದಾರೆ.
ಸ್ಥಳೀಯ ನಿವಾಸಿ ಮಾಧವ ನಾರಾಯಣ ನಾಯ್ಕ ಅವರು ಅಪಾಯಕ್ಕೀಡಾದ ಸ್ಥಳದಲ್ಲಿ ತಡೆಗೋಡೆ ನಿಮಿಸಿಕೊಡುವಂತೆ ಸಾರ್ವಜನಿಕರ ಪರವಾಗಿ ಕಳೆದ ಒಂದು ವರ್ಷದಿಂದ ಹೊನ್ನಾವರದಿಂದ ಬೆಂಗಳೂರಿನವರೆಗಿನ ಅಧಿಕಾರಿಗಳೆಲ್ಲ ಸರಣಿ ಪತ್ರ ಬರೆದು ಬಹುಧೀರ್ಘ ಹೋರಾಟವನ್ನೇ ಮಾಡಿದ್ದಾರೆ. ಫಲಿತಾಂಶ ಮಾತ್ರ ಶೂನ್ಯವಾಗಿದೆ. ಉಸಿರು ಉಳಿಸಿಕೊಡುವಂತೆ ಕೊನೆಯ ಪ್ರಯತ್ನವಾಗಿ ಮಾನವ ಹಕ್ಕು ಆಯೋಗಕ್ಕೂ ದೂರಿದ್ದಾರೆ. ಆದರೆ ಅವರೂ ಕೂಡ ಮತ್ತೊಬ್ಬ ಅಧಿಕಾರಿಗೆ ಪತ್ರಗಳನ್ನು ಬರೆಯುವ ಕೆಲಸ ಮಾಡಿದ್ದಾರೆ. ಸಮುದ್ರ ಕೊರೆತದ 400 ಮಿ. ಪ್ರದೇಶಕ್ಕೆ ತುತರ್ು ತಡೆಗೋಡೆ ಕಾಮಗಾರಿ ಕೈಗೊಳ್ಳಲು ಅನುವಾಗುವಂತೆ ರೂ.127.00 ಲಕ್ಷ ಅನುದಾನವನ್ನು ಕೋರಿ ಸಕರ್ಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರಕಾರ ಇನ್ನು ಮಂಜೂರಾತಿ ನೀಡಿಲ್ಲ. ಬಂದರು ಮತ್ತು ಒಳನಾಡು ಜಲಸಾರಿಗೆ ನಿದರ್ೇಶನಾಲಯದ ನಿದರ್ೇಶಕರು, ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದಶರ್ಿ ಬೆಂಗಳೂರು ಅವರಿಗೆ 2017 ನವೆಂಬರ್ 25 ರಂದು ಪತ್ರ ಬರೆದಿದ್ದಾರೆ. ಆದರೆ ಆ ಪತ್ರ ಈವರೆಗೂ ಕಂಡ ಕಂಡ ಅಧಿಕಾರಿಗಳ ಮೇಜು ದಾಟುತ್ತಿದೆಯೇ ಹೊರತು ಫಲಶೃತಿ ಕಂಡಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಈ ಸಮುದ್ರ ಕೊರೆತಕ್ಕೆ ಈ ವರ್ಷದ ಮಳೆಗಾಲದಲ್ಲೂ ಪರಿಹಾರ ಸಾಧ್ಯವಾಗಿಲ್ಲ ಅಂದರೆ ಸರಕಾರಿ ವ್ಯವಸ್ಥೆಯ ಬಗ್ಗೆ ಹಿಡಿ ಶಾಪ ಹಾಕುತ್ತಿರುವ ಸ್ಥಳೀಯರು ಚುನಾವಣೆ, ಪ್ರಜಾಪ್ರಭುತ್ವ ಇವೆಲ್ಲ ಕೇವಲ ಆಡಂಭರಕ್ಕಾಗಿಯೇ ಎಂದು ನೋವಿನಿಂದ ಪ್ರಶ್ನಿಸುತ್ತಿದ್ದಾರೆ.