ಘಜ್ನಿ, ಜ 27: ಅಫ್ಗಾನಿಸ್ತಾನದ ದೆಹ್ಯಾಕ್ ಜಿಲ್ಲೆಯಲ್ಲಿ ವಿಮಾನವೊಂದು ಪತನಗೊಂಡಿದ್ದು ಸುಮಾರು 83 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಘಜ್ನಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾರ, ಹೇರತ್ ನಿಂದ ಕಾಬೂಲ್ ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಏಕಾಏಕಿ ಪತನಗೊಂಡಿದೆ. ಈ ಅವಘಡಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ.
ಘಟನೆಯಲ್ಲಿ ಗಾಯಗೊಂಡವರ ಕುರಿತು ಇನ್ನೂ ವಿವರ ಹೊರಬೀಳಬೇಕಿದೆ.