ಐದು ವರ್ಷದ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಹಾಕಿಸಿ : ಉಪ್ಪಾರ ನಾಗರಾಜ
Five-year-old children should be given pulse polio without fail: Uppara Nagaraj
ಕಂಪ್ಲಿ 21: ದೇಶವನ್ನು ಪೋಲಿಯೊ ಮುಕ್ತವಾಗಿಸುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಆದ್ದರಿಂದ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹಾಕಿಸುವಲ್ಲಿ ನಿರ್ಲಕ್ಷ್ಯವಹಿಸಬಾರದು ಎಂದು ಕಂಪ್ಲಿ ತಾಲೂಕು ಉಪ್ಪಾರ(ಭಗೀರಥ) ಸಮಾಜದ ತಾಲೂಕಾಧ್ಯಕ್ಷ ಉಪ್ಪಾರ ನಾಗರಾಜ ಹೇಳಿದರು. ಪಟ್ಟಣದ 4ನೇ ವಾರ್ಡಿನ ಸಣಾಪುರ ರಸ್ತೆಯ ಅಂಬೇಡ್ಕರ್ ನಗರದ ನಮ್ಮ ಕ್ಲಿನಿಕ್‌ನಲ್ಲಿ ಪಲ್ಸ್ ಪೋಲಿಯೋ ದಿನದ ಅಂಗವಾಗಿ ಆರೋಗ್ಯ ಇಲಾಖೆ ಹಾಗೂ ಉಪ್ಪಾರ ಸಮಾಜ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಪೋಲಿಯೋ ಲಸಿಕೆ ಹಾಕಿ, ಮಕ್ಕಳ ತಾಯಂದಿಯರಿಗೆ ಉಚಿತವಾಗಿ ಹಣ್ಣು, ಹಂಪಲು ವಿತರಿಸಿದ ನಂತರ ಮಾತನಾಡಿ, ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯನ್ನು ತಡೆಗಟ್ಟಲು ಐದು ವರ್ಷದ ಒಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು.
ಭಾರತವನ್ನು ಪೋಲಿಯೋ ಮುಕ್ತವನ್ನಾಗಿಸಲು ಪ್ರಾರಂಭವಾದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಿಂದಾಗಿ ದೇಶದಲ್ಲಿ ಪ್ರಗತಿ ಸಾಧಿಸಲಾಗಿದೆ. ಆದ್ರೂ ಪೋಲಿಯೋದಿಂದ ಉಂಟಾಗುವ ಅಂಗವಿಕಲತೆಯನ್ನು ತಡೆಗಟ್ಟಲು ಮಕ್ಕಳಿಗೆ ಲಸಿಕೆ ತಪ್ಪದೇ ಹಾಕಿಸಬೇಕು ಎಂದರು. ತಾಲೂಕು ನೋಡಲ್ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಮಾತನಾಡಿ, ಹಲವು ವರ್ಷಗಳ ಹಿಂದೆ ಜನರು ಪೋಲಿಯೋ ರೋಗದಿಂದ ಬಳಲುತ್ತಿದ್ದರು. ಆದರೆ, 1995ರಲ್ಲಿ ನಮ್ಮ ದೇಶದಲ್ಲಿ ಪಲ್ಸ್ ಪೋಲಿಯೋ ಆರಂಭಗೊಂಡ ಹಿನ್ನಲೆ ಈಗ ಪೋಲಿಯೋ ಪ್ರಕರಣಗಳು ಕಂಡು ಬರುತ್ತಿಲ್ಲ. ಹೀಗೆ ಮುಂದೆಯೂ ಸಹ ಪೋಲಿಯೊ ಮುಕ್ತ ಭಾರತವಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೇಶದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಎರಡು ಹನಿ ಹಾಕಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಅಂಗವಿಕಲತೆ ತಪ್ಪಿಸಬಹುದು.
ಅಕ್ಕಪಕ್ಕದ ಮಕ್ಕಳಲ್ಲಿಯೂ ಸಹ ಲಸಿಕೆ ಹಾಕಿಸಬೇಕು. ಪಟ್ಟಣದಲ್ಲಿ 5490 ಹಾಗೂ ಗ್ರಾಮೀಣ ಭಾಗದಲ್ಲಿ 10061 ಮಕ್ಕಳು ಸೇರಿದಂತೆ ಒಟ್ಟಾರೆ ತಾಲೂಕಿನಲ್ಲಿ 15551 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಆದ್ದರಿಂದ ಪಟ್ಟಣದ 27 ಹಾಗೂ ಗ್ರಾಮೀಣ ಭಾಗದಲ್ಲಿ 71 ಬೂತ್‌ಗಳನ್ನು ತೆರೆಯಲಾಗಿದೆ. ಪಟ್ಟಣದಲ್ಲಿ 27 ಹಾಗೂ ಗ್ರಾಮೀಣದಲ್ಲಿ 55 ತಂಡಗಳನ್ನು ರಚಿಸಿ, ಪೋಲೀಯೋ ಯಶಸ್ವಿಗೆ ಮುಂದಾಗಿದೆ ಎಂದರು. ಈ ಸಂದರ್ಭದಲ್ಲಿ ಟಿಎಚ್‌ಒ ಡಾ.ಅರುಣ್ ಜಿ, ವೈದ್ಯಾಧಿಕಾರಿಗಳಾದ ಡಾ.ಮಲ್ಲೇಶಪ್ಪ, ಡಾ.ಶ್ರೀನಿವಾಸ, ಉಪ್ಪಾರ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ಗೋವಿಂದಪ್ಪ, ಉಪಾಧ್ಯಕ್ಷ ಉಪ್ಪಾರ ವೆಂಕಟೇಶ, ಮುಖಂಡ ಉಪ್ಪಾರ ರಾಮದಾಸ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಚನ್ನಬಸುವರಾಜ, ಪಿ.ಬಸವರಾಜ, ನಮ್ಮ ಕ್ಲಿನಿಕ್ ಸಿಬ್ಬಂದಿಗಳಾದ ನಂದಿನಿ ಕೆ, ಆರ್.ದೇವರಾಜ, ಮಹಾಲಕ್ಷ್ಮೀ ಸೇರಿದಂತೆ ಮಕ್ಕಳು ಹಾಗೂ ತಾಯಿಯಂದಿರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 