ಬೆಳಗಲಿ ಪ್ರೌಢಶಾಲೆಯ 5 ವಿದ್ಯಾರ್ಥಿಗಳು ’ಪ್ರತಿಭಾ ಪೋಷಕ ಪರೀಕ್ಷೆ’ಗೆ ಆಯ್ಕೆ: ಆಡಳಿತ ಮಂಡಳಿ ಅಭಿನಂದನೆ
Five students from Belagali High School selected for the 'Talent Nurture Examination': Management co
ಬೆಳಗಲಿ ಪ್ರೌಢಶಾಲೆಯ 5 ವಿದ್ಯಾರ್ಥಿಗಳು ’ಪ್ರತಿಭಾ ಪೋಷಕ ಪರೀಕ್ಷೆ’ಗೆ ಆಯ್ಕೆ: ಆಡಳಿತ ಮಂಡಳಿ ಅಭಿನಂದನೆ
ರನ್ನ ಬೆಳಗಲಿ 16-ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಒಟ್ಟು ಐದು ವಿದ್ಯಾರ್ಥಿಗಳು ಪ್ರತಿಷ್ಠಿತ ’ಪ್ರತಿಭಾ ಪೋಷಕ ಪರೀಕ್ಷೆ-2026’ ಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ.ಎನ್‌ಎಂಎಂಎಸ್ (ಓಒಒಖ) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬೆಳಗಾವಿಯ ’ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್’ ವತಿಯಿಂದ ನಡೆಸಲಾದ ’ಪ್ರತಿಭಾ ಪೋಷಕ ಪರೀಕ್ಷೆ-2026’ ರಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಿ, ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಿದ್ದಾರೆ.ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳು:ವಿನಾಯಕ ಕುಳ್ಳೂರಕೃಷ್ಣ ಎಂ. ಕುಂಬಾರಜ್ಯೋತಿ ಎಲ್. ಒಂಟಗೋಡಿಕಾವ್ಯ ನರಗಟ್ಟಿಪ್ರಿಯಾಂಕ ಸುಣಗಾರವಿದ್ಯಾರ್ಥಿಗಳ ಈ ಸಾಧನೆಗೆ ಬೆಳಗಲಿ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಶ್ರೀ ಎಂ ಎಸ್ ಗಾಣಿಗೇರ , ಶಿಕ್ಷಕ ವೃಂದ ಕೆ ಏ ಧಡುತಿ ,ಜಿ ಎಚ್ ಕುಂಬಾರ ಸಿಬ್ಬಂದಿ ವರ್ಗ, ಗುರುಹಿರಿಯರು ಹಾಗೂ ಶಿಕ್ಷಣ ಪ್ರೇಮಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಆಯ್ಕೆಯಾದ ಎಲ್ಲಾ ಪ್ರತಿಭೆಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 