ಪ್ರತಿ ಜಾನುವಾರಿಗೆ ದಿನಕ್ಕೆ ಐದು ಕೆ.ಜಿ. ಮೇವು ವಿತರಣೆ
ಹಾವೇರಿ: ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ.ಜಾನುವಾರುಗಳಿಗೆ ಮೇವಿನ ಅವಶ್ಯವಿರುವ ಕಾರಣ ಮೇವು ಬ್ಯಾಂಕ್ ಆರಂಭಿಸಲಾಗಿದೆ. ತಾಲೂಕಿನ ರೈತರು ಮೇವು ಖರೀದಿಸಲು ತಮ್ಮ ಹಳ್ಳಿಯ ವ್ಯಾಪ್ತಿಗೆ ಒಳಪಡುವ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿಂದ ಜಾನುವಾರು ದೃಢೀಕರಣ ಪತ್ರ ತಂದು ಮೇವು ಪಡೆಯಬೇಕು ಎಂದು ತಹಶೀಲ್ದಾರ ಶಿವಕುಮಾರ ಹೇಳಿದರು. ಹಾವೇರಿ ತಹಶೀಲ್ದಾರ ಕಛೇರಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ಗುತ್ತಲ ಪಟ್ಟಣದ ಕುರಿ ಸಂವರ್ಧನಾ ಕೇಂದ್ರದಲ್ಲಿ ಮಂಗಳವಾರ ಮೇವು ಬ್ಯಾಂಕ್ ಆರಂಭಿಸಲಾಗಿದೆ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿದರ್ೇಶಕ ಡಾ.ಪರಮೇಶ ಎನ್ ಹುಬ್ಬಳ್ಳಿ ಅವರು ಮಾತನಾಡಿ, ದಿನವೊಂದಕ್ಕೆ ಒಂದು ಜಾನುವಾರುವಿಗೆ ಐದು ಕೆ.ಜಿ ಯಂತೆ ಒಂದು ವಾರಗಳ ಕಾಲ ಮೇವು ನೀಡಲಾಗುವುದು. ಹಾಗೂ ಖಾಲಿಯಾದ ನಂತರ ಮತ್ತೆ ಪಡೆಯಬಹುದು.
ಒಂದು ಕೆ.ಜಿ ಮೇವಿಗೆ ರೂ. 2 ದರ ನಿಗಧಿ ಪಡಿಸಲಾಗಿದೆ. ಸದ್ಯ ಮೇವು ಬ್ಯಾಂಕಿನಲ್ಲಿ 1440 ಕೆ.ಜಿ ಒಣ ಮೇವು ಲಭ್ಯವಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮೇವು ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ.
ರೈತ ಬಾಂಧವರು ಸದರಿ ಮೇವಿನ ಲಭ್ಯತೆಯನ್ನು ಅವಶ್ಯಕತೆಗೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪಶುವೈದ್ಯಾಧಿಕಾರಿಗಳಾದ ಡಾ.ಗಂಗಾಧರ ಸುಕ್ತೆ, ಡಾ.ವಿಜಯಕುಮಾರ ಹಳಕಟ್ಟಿ, ಡಾ.ಅಣ್ಣಪ್ಪ ಸ್ವಾಮಿ, ಉಪ ತಹಶೀಲ್ದಾರ ಗವಿಸಿದ್ದಪ್ಪ ದ್ಯಾಮಣ್ಣನವರ, ಕಂದಾಯ ನಿರೀಕ್ಷಕ ಮಲ್ಲಾಡದ ಇತರರು ಉಪಸ್ಥಿತರಿದ್ದರು.
ಹೆಚ್ಚುತ್ತಿರುವ ವೃದ್ಧಾಶ್ರಮ ಉತ್ತಮ ಸಮಾಜಕ್ಕೆ ಮಾರಕ: ನಿರಜನಾನಂದ ಶ್ರೀಗಳು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 