ಪ್ರಥಮ ವರ್ಷದ ವಿದ್ಯಾರ್ಥಿ ಪರಿಚಯ ಹಾಗೂ ಮಾರ್ಗದರ್ಶನದ ಸಮಾರೋಪ ಕಾರ್ಯಕ್ರಮ

ಪ್ರಥಮ ವರ್ಷದ ವಿದ್ಯಾರ್ಥಿ ಪರಿಚಯ ಹಾಗೂ ಮಾರ್ಗದರ್ಶನದ ಸಮಾರೋಪ ಕಾರ್ಯಕ್ರಮ First-year student introduction and guidance closing ceremony

ಬೀದರ್ 19 :  ಬೀದರ್ ನಗರದ  ಹೊರವಲಯದಲ್ಲಿರುವ ಲಿಂಗರಾಜಪ್ಪ ತಾಂತ್ರಿಕ ಮಾವಿದ್ಯಾಲಯದಲ್ಲಿ . ಲಿಂಗೈಕ್ಯ ಡಾಕ್ಟರ್ ಶರಣಬಸವಪ್ಪ ಅವರ ಹಾಗೂ  ಡಾಕ್ಟರ್ ದಾಕ್ಷಾಯಿಣಿ ಎಸ್  ಅಪ್ಪ ಅಧ್ಯಕ್ಷರು ಶರಣಬಸವ ವಿದ್ಯಾ ವರ್ಧಕ ಸಂಘ ಕಲ್ಬುರ್ಗಿ,  ಹಾಗೂ ಚಾನ್ಸಲರ್ ಶರಣಬಸವ ವಿಶ್ವವಿದ್ಯಾಲಯ  ಕಲ್ಬುರ್ಗಿ  9ನೇ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ರವರ ಕೃಪಾ ಆಶೀರ್ವಾದದೊಂದಿಗೆ ಹಾಗೂ ಕಾರ್ಯದರ್ಶಿಗಳಾದ  ಬಸವರಾಜ್ ದೇಶಮುಖ ಅವರ ಮಾರ್ಗದರ್ಶನದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ ಪರಿಚಯ ಹಾಗೂ ಮಾರ್ಗದರ್ಶನದ ಸಮಾರೋಪ ಕಾರ್ಯಕ್ರಮ  ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾವಿದ್ಯಾಲಯದ ನಿರ್ದೇಶಕರು ಆದ  ಶರಣಬಸಪ್ಪ ದೇಶಮುಖ್, ವಿದ್ಯಾರ್ಥಿಗಳು  ಆತ್ಮಸ್ಥೈರ್ಯವನ್ನು , ಕಂಡುಕೊಳ್ಳಬೇಕು, ಓದುವುದರ ಜೊತೆಗೆ  ಬರೆಯುವ ಅಭ್ಯಾಸವನ್ನು ಮಾಡಬೇಕು , ನಮ್ಮ ಸಂಸ್ಥೆವು ಬಡ ಮಕ್ಕಳಿಗೆ ಅತ್ಯುತ್ತಮ ವಿದ್ಯಾ ಅರ್ಚನೆ ನೀಡುತ್ತಿದೆ ಎಂದು ಕರೆ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶೆಟ್ಟಿ ಮಾತನಾಡಿ  ಭಾರತವು ಸುಸಂಸ್ಕೃತ ರಾಷ್ಟ್ರವಾಗಿದೆ, ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಪಾಲಿಸುತ್ತಿದ್ದಾರೆ, ವಿದ್ಯಾರ್ಥಿಗಳು ನಮ್ಮ ದೇಶದ ಸಂಸ್ಕೃತಿ, ತಂದೆ ತಾಯಿಗೆ ಗೌರವ ಪ್ರೀತಿಯಿಂದ ಕಾಣಬೇಕು ಎಂದು ತಿಳಿ ಹೇಳಿದರುಕಾರ್ಯಕ್ರಮದ ಆಯೋಜಕರು, ಹಾಗೂ ಪ್ರಾಚಾರ್ಯರು ಆದ ಡಾಕ್ಟರ್ ವಿನಿತಾ ಪಾಟೀಲ್ ಅವರು ಮಾತನಾಡಿ ನಮ್ಮ ಮಹಾವಿದ್ಯಾಲಯವು, ಒಳ್ಳೆಯ ವಿದ್ಯಾರ್ಥಿ ಯಾಗಿ ರೂಪಿಸುವಲ್ಲಿ ಮುಂಚಣೆಯಲ್ಲಿದೆ, ತಂದೆ ತಾಯಿಗಳು ಹಾಗೂ ಶಿಕ್ಷಕರ ಹಾಗೂ ತಂದೆ ತಾಯಿಗಳು ಕೂಡಿ ವಿದ್ಯಾರ್ಥಿಗಳ ಒಳ್ಳೆಯ ಭವಿಷ್ಯವನ್ನು  ರೂಪಿಸೋಣ ಎಂದು ಎಂದು ಹೇಳಿದರು . ಇನ್ನೋರ್ವ ಮುಖ್ಯ ಅತಿಥಿಯಾಗಿ  ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಶಿಸ್ತು , ಸಮಯದ ಮಹತ್ವ, ಸ್ವಪ್ರೇರಣೆಯಾಗಿ ಯಶಸ್ಸು ಸಾಧಿಸಬೇಕೆಂದು ಕರೆ ನೀಡಿದರು,   ಕಾರ್ಯಕ್ರಮದ ಕೊನೆಯ ದಿನದಂದು ತಂದೆ ತಾಯಿಗಳ ಪಾದಪೂಜೆಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ಸಿದ್ದಾರೂಡ್ ಭಾಲ್ಕಿ ಅವರು ಪಾಲ್ಗೊಂಡಿದ್ದರು ಪ್ರೊಫೆಸರ ಅನಿತಾ ಅವರು ನಿರೂಪಿಸಿದರು , ಪ್ರೊಫೆಸರ್ ಅಲೋರೆ ಹೊಂದಿಸಿದರು ಕಾರ್ಯಕ್ರಮದ  ಸಹ ಆಯೋಜಕರಾದ  ಪ್ರೊಫೆಸರ್ ಅನಿಲ್ ಕುಮಾರ್, ಆರು ದಿನದ ಕಾರ್ಯಕ್ರಮದ ಸಾರಾಂಶವನ್ನು ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಆರು ದಿನದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರೊಫೆಸರ್ ಶ್ರೀನಿವಾಸ್, ಪ್ರೊಫೆಸರಅಭಿಷೇಕ್ ಎಲ್ಲಾ ವಿಭಾಗದ ಮುಖ್ಯಸ್ಥರು,  ಉಪನ್ಯಾಸಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.