ಶ್ರೀಲಂಕಾ ತಂಡಕ್ಕೆ ಮೊದಲ ದಿನದ ಗೌರವ

ಕರಾಚಿ, ಡಿ.19:      ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಶ್ರೀಲಂಕಾ ಮೊದಲ ದಿನದ ಗೌರವವನ್ನು ತಮ್ಮದಾಗಸಿಕೊಂಡಿವೆ.   

ಮೊದಲು ಬ್ಯಾಟ್ ಮಾಡಿದ ಪಾಕ್ ತಂಡದ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ನೀಡಲಿಲ್ಲ. ಶಾನ್ ಮಸೂದ್ (5), ಆದೀಲ್ ಅಲಿ (38), ಅಜರ್ ಅಲಿ (0) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಾಲ್ಕನೇ ವಿಕೆಟ್ ಗೆ ಬಾಬರ್ ಅಜಮ್ ಹಾಗೂ ಅಸದ್ ಆಶೀಕ್ ಜೋಡಿ ತಂಡಕ್ಕೆ 62 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. ಬಾಬರ್ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿ ಔಟ್ ಆದರು. ಆಸದ್ 63 ರನ್ ಸಿಡಿಸಿದರು. ಉಳಿದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ಎಡವಿದರು. ಅಂತಿಮವಾಗಿ ಪಾಕ್ 191 ರನ್ ಗಳಿಗೆ ಆಲೌಟ್ ಆಯಿತು. ಲಂಕಾ ಪರ ಲಹೀರು ಕುಮಾರ್ ಹಾಗೂ ಲಸಿತ್ ಎಂಬುಲ್ಡೆನಿಯಾ ತಲಾ ನಾಲ್ಕು ವಿಕೆಟ್ ಕಬಳಿಸಿದರು. 

ಮೊದಲ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡದ ಆರಂಭ ಸಹ ಕಳಪೆಯಾಗಿತ್ತು. ದಿನದಾಟದ ಮುಕ್ತಾಯಕ್ಕೆ ಲಂಕಾ ಮೂರು ವಿಕೆಟ್ ನಷ್ಟಕ್ಕೆ 64 ರನ್ ಸೇರಿಸಿತು. ಆಂಜಿಲೋ ಮ್ಯಾಥ್ಯೂಸ್ (8) ಹಾಗೂ ಲಸಿತ್ ಎಂಬುಲ್ಡೆನಿಯಾ (3) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.