ಅಪಘಾತ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಮುಖ್ಯ : ಡಾ. ಸಂಜೀವ ತೇಲಿ
First aid is important for an accident victim: Dr. Sanjeev Teli
ಲೋಕದರ್ಶನ ವರದಿ
ಅಪಘಾತ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಮುಖ್ಯ : ಡಾ. ಸಂಜೀವ ತೇಲಿ
ಮಹಾಲಿಂಗಪುರ 04: ಅಪಘಾತ ಸಂದರ್ಭದಲ್ಲಿ ಗಾಯಗೊಂಡ ಮತ್ತು ಅಸ್ವಸ್ಥಗೊಂಡ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಬೇಕು. ವ್ಯಕ್ತಿಯ ಯಾವುದೇ ಭಾಗ ಚಲನ-ವಲನ ಇಲ್ಲದಿದ್ದರೆ ಹೃದಯ ಭಾಗದಲ್ಲಿ ಕೈಯಿಂದ ಜೋರಾಗಿ ಒತ್ತಿ ಹೃದಯ ಬಡಿತವನ್ನು ಚಲನಗೊಳಿಸಬೇಕು. ಆಗ ಪ್ರಾಣಪಾಯದಿಂದ ಪಾರು ಮಾಡಬಹುದು ಎಂದು ಮಹಲಿಂಗಪುರ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ.ಸಂಜೀವ ತೇಲಿ ಹೇಳಿದರು.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿ, ರಸ್ತೆ ಸಂಚಾರ ಸಮಯದಲ್ಲಿ ಅಪಘಾತವಾದರೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು. ಜೊತೆಗೆ ಠಾಣಾ ವ್ಯಾಪ್ತಿಗೆ ಬರುವ ಅಪಘಾತ ವ್ಯಕ್ತಿಗಳ ದೇಹದ ಭಾಗದಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ಪ್ರಾಯೋಗಿಕವಾಗಿ ತಿಳಿಸಿದರು. ಮಾನಸಿಕ ಒತ್ತಡ ಹೃದಯಾಘಾತಕ್ಕೆ ಹೆಚ್ಚಿನ ಪರಿಣಾಮ ಬೀರಿದೆ. ಮಧ್ಯಪಾನ, ಧೂಮಪಾನ, ಶುಗರ್, ಬಿ.ಪಿ, ಹೆಚ್ಚಿನ ತೂಕ ಅಪಾಯಕಾರಿಯಾಗಿವೆ. ಆದ್ದರಿಂದ ಒಳ್ಳೆಯ ಪ್ರೋಟಿನ್ ಯುಕ್ತ ಆಹಾರ ಸೇವಿಸಿ ಎಂದು ಪೊಲೀಸ್ ಸಿಬ್ಬಂದಿಗೆ ಹೇಳಿದರು.
ಠಾಣಾಧಿಕಾರಿ ಕಿರಣ ಸತ್ತಿಗೇರಿ ಮತ್ತು ಮಧು ಎಲ್ ಮಾತನಾಡಿದರು. ಪೊಲೀಸ್ ಸಿಬ್ಬಂದಿಗಳಾದ ಎಂ ಬಿ ಕೊಲ್ಲೂರು, ಎಎಸ್‌ಐ ಜೆಟ್ಟರ, ಗೋಸರವಾಡ, ಶ್ರೀಶೈಲ ಓರಸಂಗ, ಎಸ್ ಎಸ್ ನಾಗನಗೌಡರ, ವಾಯ್ ವಾಯ್ ಗಚ್ಚನ್ನವರ, ಎಸ್ ಡಿ ಬಾರಿಗಿಡದ, ವಿ ಬಿ ತೇಲಿ, ಬಿ ಜಿ ದೇಸಾಯಿ, ಕೆ ಎಸ್ ಲಮಾಣಿ, ಎಂ ಎಸ್ ಲಮಾಣಿ, ವೀರೇಶ ಮಸ್ಕಿ, ಜಯಾ ಬಿರಾದಾರ, ಇನ್ನು ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 