ಲೋಕದರ್ಶನ ವರದಿ
ಧಾರವಾಡ 01: ಪಠ್ಯೇತರ ಚಟುವಟಿಕೆಗಳು ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತವೆ ಅಲ್ಲದೆ ಮಾನಸಿಕ, ದೈಹಿಕ, ಭಾವನಾತ್ಮಕ ಬೆಳವಣಿಗೆಗೆ ಪಠ್ಯ ಹಾಗೂ ಪಠ್ಯೆತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ವಿಜ್ಞಾನ ವಿಷಯ ಓದಿದವರಿಗೆ ಮಾತ್ರ ಹೆಚ್ಚು ಅವಕಾಶಗಳು ಸಿಗುತ್ತವೆ ಎಂಬುದು ಸುಳ್ಳು ಅಲ್ಲದೆ ವಾಣಿಜ್ಯ ಹಾಗೂ ಕಲಾ ವಿಷಯಗಳನ್ನು ಓದಿದರೆ ಅಷ್ಟೇನು ಹೆಚ್ಚು ಅವಕಾಶಗಳು ಸಿಗುವುದಿಲ್ಲ ಎಂಬುದು ತಪ್ಪು ಕಲ್ಪನೆ ಎಂದರು ಏಕೆಂದರೆ ಐಕಉ ಯುಗದಲ್ಲಿ ಎಲ್ಲಾ ವಿದ್ಯಾಥರ್ಿಗಳಿಗೆ ಅವಕಾಶಗಳಿವೆ, ದೇಶ ಬಲಿಷ್ಠವಾಗಲು ಎಲ್ಲ ವಿಷಯದವರು ಬೇಕಾಗುತ್ತದೆ ಗ್ರಾಮಾಂತರ ಜೀವನದಲ್ಲಿ ಎತ್ತರ ವ್ಯಕ್ತಿಗಳಾಗಲು ಬಡತನ ಎಂದೂ ಅಡ್ಡಿಯಾಗಿಲ್ಲ, ಎ ಪಿ ಜಿ ಅಬ್ದುಲ್ ಕಲಾಂ ಅವರು ಅತ್ಯಂತ ಬಡತನ ಕುಟುಂಬದವರು ಅವರು ದಿನ ಪತ್ರಿಕೆಯನ್ನು ಹಂಚಿ ತಮ್ಮ ಜೀವನ ನಡೆಸುತ್ತಿದ್ದರು, ಮುಂದೆ ಜಗತ್ತು ಮೆಚ್ಚುವಂತಹ ವಿಜ್ಞಾನಿಯಾದರು ಮತ್ತು ಡಾ ಬಾಬಾ ಸಾಹೇಬ ಅಂಬೇಡ್ಕರವರು ಕೂಡಾ ಬಡಕುಟುಂಬದಿಂದ ಬಂದವರು ಅವರು ಈ ದೇಶ ಒಪ್ಪುವಂತಹ ಒಬ್ಬ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆದರು ಎಂದು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಹೇಳಿದರು.
ಅವರು ನಗರದ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಸಾಯಿ ಪದವಿ ಪೂರ್ವ ವಿ ಜ್ಞಾ ನ ಹಾಗೂ ವಾಣಿಜ್ಯ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮತ್ತು ಕಾಲೇಜು ಒಕ್ಕೂಟಗಳ ಉದ್ಘಾಟನಾ ಹಾಗೂ ಪ್ರಥಮ ವರ್ಷದ ವಿದ್ಯಾಥರ್ಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನರಗುಂದ ಸಿದ್ದೇಶ್ವರ ಮಹಾವಿದ್ಯಲಯದ ನಿವೃತ್ತ ಪ್ರಾಚಾರ್ಯ ಪ್ರೊ. ಬಿ ಸಿ ಬಿರಾದಾರ, ಮಾತನಾಡಿ, ಈ ಒಂದು ಮಹಾವಿದ್ಯಾಲದ ವಿದ್ಯಾಥರ್ಿಗಳೇ ಸತ್ಯಂ, ವಿದ್ಯಾಥರ್ಿಗಳೇ ಶಿವಂ, ವಿದ್ಯಾಥರ್ಿಗಳೇ ಸುಂದರಂ. ವಿದ್ಯಾಥರ್ಿಗಳು ದುಶ್ಚಟಗಳಿಗೆ ಬಲಿಯಾಗದೆ ನೈತಿಕತೆ, ಪ್ರಾಮಾಣಿಕತೆ, ಶಿಸ್ತು, ಅಧ್ಯಯನಶೀಲ ಗುಣಗಳನ್ನು ಬೆಳೆಸಿಕೊಳ್ಳಬೇಕು. ಒಂದು ಸಂಸ್ಥೆ ಬೆಳೆಯ ಬೇಕಾದರೆ ಎಲ್ಲ ಸಿಬ್ಬಂದಿಗಳ ಸಹಕಾರ ಅತ್ಯಗತ್ಯ ಈ ಒಂದು ಸಂಸ್ಥೆಯಲ್ಲಿ ಒಳ್ಳೆಯ ಸಿಬ್ಬಂದಿಗಳಿದ್ದು ಸಂಸ್ಥೆ ಉನ್ನತ ಸ್ಥಾನವೆರಲು ಎರಡುಮಾತಿಲ್ಲ ಎಂದು ನುಡಿದರು
ಇದೇ ವೇಳೆ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದ ನಿಮಿತ್ಯವಾಗಿ ನಿವೃತ್ತ ಪ್ರಾಚಾರ್ಯರಾದ ಪ್ರೊ. ಬಿ ಸಿ ಬಿರಾದಾರ ಅವರು ಪಿ ಯು ಸಿ ಪ್ರಥಮ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರ ಪ್ರತೀಕ ಗಾಡಿ ಇವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ಮಾಡಿದರು.
ಮಂಜುಳಾ ಬಿ ಬಿರಾದಾರ ಅವರು ಅವರ ತಂದೆಯವರಾದ ಖ್ಯಾತ ಸಾಹಿತಿಗಳು ಹಾಗೂ ಕಾದಂಬರಿಕಾರರಾದ ದಿವಂಗತ ಬಸವರಾಜ ಕಟ್ಟಿಮನಿಯವರ ಸ್ಮರಣಾರ್ಥವಾಗಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರ ಪರಶುರಾಮ ಲಮಾಣಿ ಇವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ಮಾಡಿದರು.
ಸಂಸ್ಥೆಯ ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿದರ್ೇಶಕರಾದ ಡಾ. ವೀಣಾ ಬಿರಾದಾರ ಅವರು ಮಾತನಾಡಿ ಮಹಾವಿದ್ಯಾಲಯದ ಎಲ್ಲ ವಿದ್ಯಾಥರ್ಿಗಳು ಅತ್ಯ ಮೂಲ್ಯ ರತ್ನಗಳು ಇದ್ದಹಾಗೆ ಎಂದರು, ಯಾವುದೇ ಒಂದು ವ್ಯವಸ್ಥೆ ಸರಿಯಾಗಿ ನಡೆಸಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ ಹೀಗಾಗಿ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು.
ಪ್ರಾಸ್ತಾವಿಕನುಡಿಯನ್ನಾಡಿದ ನಿದರ್ೇಶಕರು ಹಾಗೂ ಪ್ರಾಚಾರ್ಯರಾದ ಪ್ರೊ. ನಾಗರಾಜ ಶಿರೂರ ಮಾತನಾಡಿ ಮಹಾವಿದ್ಯಾಲಯವನ್ನು ಪ್ರಾರಂಭಿಸುವಾಗ ಎದುರಿಸಿದ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಪಟ್ಟ ಕಷ್ಟವನ್ನು ನೆನಪಿಸಿಕೊಂಡು ಇಂದಿನ ಮಹಾವಿದ್ಯಾಲಯದ ಬೆಳವಣಿಗೆಗೆ ಹರ್ಷ ವ್ಯಕ್ತ ಪಡಿಸಿದರು. ಸಂಸ್ಥೆಯ ಹಾಗೂ ಮಹಾವಿದ್ಯಾಲಯದ ಅಧ್ಯಕ್ಷೆ ವೀಣಾ ಬಿರಾದಾರ, ಕಾಲೇಜು ಪ್ರಾಚಾರ್ಯ ಪ್ರೊ. ನಾಗರಾಜ ಶಿರೂರ, ಕಾರ್ಯದಶರ್ಿ ಅನ್ನಪೂರ್ಣ ಗುರುಮಠ, ಡಾ. ಸುರೇಶ ಗಾಡಿ, ಡಾ. ಶಾಂತಯ್ಯ ಗುರುಮಠ, ಉಪ ಪ್ರಾಚಾರ್ಯರು ಪ್ರೊ. ವಿನಾಯಕ ರಗಟಿ ಉಪಸ್ಥಿತರಿದ್ದರು.