ಲೋಕದರ್ಶನ ವರದಿ
ಬಳ್ಳಾರಿ24: ಬಳ್ಳಾರಿ ಜಿಲ್ಲೆಯಲ್ಲಿ ಮೊಟ್ಟ ಮೊದಲನೇ ಬಾರಿಗೆ ಬುಡೊಕಾನ್ ಕರಾಟೆ ಅಕಾಡಮಿ, ಜಿಲ್ಲಾ ಕರಾಟೆಸ್ಪೋಟ್ಸ್ ಅಸೋಸೊಯೇಷನ್ ಮತ್ತು ಬಳ್ಳಾರಿ ತಕ್ಷಶೀಲ ಹೆಲ್ತ್ ಅಂಡ್ ಸ್ಪೋಟ್ಸ್ಕ್ಲಬ್ಗಳ ಸಂಯುಕ್ತಾಶ್ರಯದಲ್ಲಿ ಮೊದಲನೇ ಅಖಿಲಭಾರತ ಕರಾಟೆ ಚಾಂಪಿಯನ್ ಸಿಪ್ ಕಾರ್ಯಕ್ರಮವನ್ನು ಜು.28 ಮತ್ತು 29ರಂದು ಹೊಸ ಬಸ್ ನಿಲ್ದಾಣದ ಹತ್ತಿರವಿರುವ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಘಟನಾ ಕಾರ್ಯದಶರ್ಿ ಕಟ್ಟೆಸ್ವಾಮಿ ಗೌರವಾಧ್ಯಕ್ಷ ಆನಂದ್ ಪೋಲಾ ಮತ್ತಿತರರು ರಾಯಲ್ ಪೊಟರ್್ನ ಕೆಳ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು.
ಈ ಬಾರಿ ನಡೆಯು ಮೊದಲನೇ ಬಾರಿ ಅಖಿಲಭಾರತ ಕರಾಟೆ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ 1000ಕ್ಕೂ ಹೆಚ್ಚು ಕರಾಟೆ ಪಟುಗಳು ಬಳ್ಳಾರಿಗೆ ಆಗಮಿಸಲಿದ್ದಾರೆ. (ಕನರ್ಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ದೇಹಲಿ, ಗೋವಾ, ಮದ್ಯಪ್ರದೇಶ್, ಮಹರಾಷ್ಷ್ರ, ಪಂಜಾಬ್) ಸೇರಿದಂತೆ ಎಲ್ಲಾ ರಾಜ್ಯಗಳ ಕರಾಟೆ ಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ದೇಹದ ರಕ್ಷಣೆಗಾಗಿ ಹೆಣ್ಣು ಮತ್ತು ಗಂಡು ಇಬ್ಬರೂ ಈ ಕರಾಟೆಯನ್ನು ಕಲಿತಿಕೊಳ್ಳುವ ದಿನಗಳು ಈಗ ಎದುರಾಗಿವೆ. ಆತ್ಮ ರಕ್ಷಣೆ ಇದ್ದರೇ ದೇಶದುದ್ದಕ್ಕೂ ನಾವು ತಿರುಗಾಡಬಹುದು. ಯಾವುದೇ ಬಯ ಇರುವುದಿಲ್ಲ.
ಇದಕ್ಕೆ ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ಸಹಕಾರ ನೀಡಲಿವೆ. ಈಗಾಗಲೇ ನಮ್ಮ ಸಂಸ್ಥೆಯಿಂದ ಸಕರ್ಾರಿ ಶಾಲೆಗಳಲ್ಲಿ ಪೋಲಿಸ್ ಇಲಾಖೆಗಳಲ್ಲಿ ಆತ್ಮ ರಕ್ಷಣೆಗಾಗಿ ಉಚಿತ ತರಬೇತಿಯನ್ನು ನೀಡುತ್ತಿದ್ದೇವೆ. ಈ ಪಂದ್ಯಾವಳಿಯಲ್ಲಿ ಸಕರ್ಾರಿ ಶಾಲೆಯ ವಿದ್ಯಾಥರ್ಿಗಳು ಭಾಗವಹಿಸುತ್ತಿರುವುದು ಒಂದು ವಿಶೇಷವಾಗಿದೆ.
ಈ ಬಾರಿ ನಡೆಯುವ ಅಖಿಲಭಾರತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಬಳ್ಳಾರಿ ಜಿಲ್ಲೆಯ ಹತ್ತು ಟಾಪ್ಟೆನ್ ವಿದ್ಯಾಥರ್ಿಗಳಿಗೆ ಮಲೇಶಿಯಾದಲ್ಲಿ ನಡೆಯುವ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ ಅಕ್ಟೋಬರ್ನಲ್ಲಿ ನಡೆಯುವ ಪಂದ್ಯಾವಳಿಗೆ ನಮ್ಮ ಸಂಸ್ಥೆಯ ನೇರವಿನೊಂದಿಗೆ ಕಳುಹಿಸಿಕೊಡಲಿದ್ದೇವೆ ಎಂದು ವಿವರಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಮಹೇಶ್ ಹಾಗೂ ಕರಾಟೆ ನಿಪುಣರಾದ ಹನುಮಂತ್ ರಾವ್, ಬಳ್ಳಾರಿ ಶಾಸಕ ಗಾಲಿ.ಸೋಮಶೇಖರರೆಡ್ಡಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ಉದ್ಘಾಟಿಸಲಿದ್ದಾರೆ. ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಎರಡು ದಿನದ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿ ಆಚರಿಸುವ ನಿರೀಕ್ಷೆಯಲ್ಲಿದ್ದೇವೆ.
ಬೇರೆ-ಬೇರೆ ರಾಜ್ಯಗಳಿಂದ ಬಂದ ಕರಾಟೆ ಪಟುಗಳಿಗೆ ವಸತಿ ಮತ್ತು ಊಟದ ವ್ಯೆವೆಸ್ಥೆಯನ್ನು ಮಾಡಿದ್ದೇವೆ ಎಂದರು. ನಿರ್ಭಯ ಪ್ರಕರಣದ ಹಿನ್ನಲೆ ಬಹಳಷ್ಟು ಹೆಣ್ಣು ಮಕ್ಕಳು ಈ ಕರಾಟೆಗೆ ಸೇರುತ್ತಿದ್ದು ಅವರ ಆತ್ಮ ರಕ್ಷಣೆಗಾಗಿ ಉನ್ನತ ಮಟ್ಟದ ಬೆಲ್ಟ್ ಗಳನ್ನು ಪಡೆಯಲು ಬಹಳ ಕಾತುರದಿಂದ ಕಲಿಯುತ್ತಿದ್ದಾರೆ.
ಸಕರ್ಾರಿ ಶಾಲಾ ಮಕ್ಕಳಿಗೆ ಈ ಕರಾಟೆಯ ಬಗ್ಗೆ ಬಹಳ ಆಸಕ್ತಿವಹಿಸಿ ಕರಾಟೆ ಕಲಿಯುತ್ತಿರುವುದು ಸಂತಸದ ಸಂಘತಿ ಎಂದರು. ಈ ಸಂದರ್ಭದಲ್ಲಿ ಪರಮೇಶ್ವರಯ್ಯ ಸೊಪ್ಪಿನಮಠ, ಹರಿಶಂಕರ್ ಹಗರವಾಲ್, ಸಾಗರ್, ಸೇರಿದಂತೆ ಹಲಾವರು ಕರಾಟೆ ಪಟುಗಳು ಈ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.