ಹನೋಯಿ, ಜ 21 : ವಿಯೆಟ್ನಾಂನ ದಕ್ಷಿಣ ಹೋಚಿ ಮಿನ್ಹ್ ನಗರದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ವಿಯೆಟ್ನಾಂ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂಜಾನೆ ಈ ದುರಂತ ಸಂಭವಿಸಿದೆ. ಹೋಚಿ ಮಿನ್ಹ್ ನಗರದ ಅಲ್ಲೆ ಎಂಬಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 70, 44 ಮತ್ತು 30 ವರ್ಷ ವಯಸ್ಸಿನ ಮೂವರು ಮಹಿಳೆಯರು ಮತ್ತು 40 ವರ್ಷ ವಯಸ್ಸಿನ ಇಬ್ಬರು ಪುರುಷರು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಮೂರು ಟ್ರಕ್ ಮತ್ತು 22 ಅಗ್ನಿಶಾಮಕ ಯಂತ್ರಗಳು ಆಗಮಿಸಿ ಪರಿಸ್ಥಿತಿ ನಿಬಾಯಿಸಿವೆ .
2019 ರಲ್ಲಿ, ವಿಯೆಟ್ನಾಂ 3,755 ಸ್ಫೋಟಗಳು ಸಂಭವಿಸಿದ್ದು, ಬೆಂಕಿ ದುರಂತದಿಂದ 112 ಜನರನ್ನು ಬಲಿ ತೆಗೆದುಕೊಂಡಿದೆ , 177 ಮಂದಿ ಗಾಯಗೊಂಡಿದ್ದಾರೆ.60.9 ಮಿಲಿಯನ್ ಡಾಲರ್ ಆಸ್ತಿಪಾಸ್ತಿಗೆ ನಷ್ಟವಾಗಿದೆಎಂದೂ ದೇಶದ ಅಗ್ನಿಶಾಮಕ ಇಲಾಖೆ ತಿಳಿಸಿದೆ.