ಮಾಸ್ಕೋ, ಜ 21 : ರಷ್ಯಾದ ಟಾಮ್ಸ್ಕ್ ಪ್ರದೇಶದ ಪ್ರಿಚುಲಿಮ್ಸ್ಕಿ ಗ್ರಾಮದಲ್ಲಿ ಒಂದು ಅಂತಸ್ತಿನ ಮರದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 9 ಜನರು ಮೃತಪಟ್ಟಿದ್ದಾರೆ.
ಈ ವಿಷಯವನ್ನು ತುರ್ತು ಸಚಿವಾಲಯದ ಪ್ರಾದೇಶಿಕ ಇಲಾಖೆ ಮಂಗಳವಾರ ತಿಳಿಸಿದೆ.
ಮುಂಜಾನೆ, ಬೆಂಕಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಆರು ಎಂದು ಮೊದಲು ದೃಢಪಡಿಸಲಾಗಿತ್ತು .
ನಂತರ ಇದು ಈ ಅಂಕಿಅಂಶ ಪರಿಷ್ಕರಣೆಯಾಗಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ , 9 ಜನರ ಶವಗಳ ಗುರುತು ಪತ್ತೆಹಚ್ಚಲಾಗಿದೆ ಎಂದೂ ಸುದ್ದಿ ಸಂಸ್ಥೆ ಸಚಿವಾಲಯ ,ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.