ಅಮ್ಮಾನ್, ಡಿ 2- ಜೋರ್ಡಾನ್ ರಾಜಧಾನಿಯಾದ ಇಲ್ಲಿಂದ 45 ಕಿ.ಮೀ ದೂರದಲ್ಲಿನ ದಕ್ಷಿಣ ಶುನೇ ಪ್ರದೇಶದಲ್ಲಿ ಮನೆಯೊಂದರಲ್ಲಿ ಸೋಮವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಒಟ್ಟು 13 ಪಾಕಿಸ್ತಾನ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ನಾಗರಿಕ ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪಾಕಿಸ್ತಾನದ ಎರಡು ಕುಟಂಬಗಳ ಕೃಷಿ ತೋಟದ ಮನೆಯಲ್ಲಿ ವಾಸಿಸುತ್ತಿದ್ದವು ಎಂದು ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ತೀವ್ರವಾಗಿ ಸುಟ್ಟ ಗಾಯಗಳಿಂದ 13 ಮಂದಿ ಮೃತಪಟ್ಟಿದ್ದು, ಇತರ ಮೂವರು ಸಹ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಘಟನೆ ಕುರಿತು ತನಿಖೆಗಾಗಿ ಇಲಾಖೆ ಸಮಿತಿಯೊಂದನ್ನು ರಚಿಸಿದೆ. ಜೋರ್ಡಾನ್‍ನಲ್ಲಿ ಸುಮಾರು 8,000 ಪಾಕಿಸ್ತಾನೀಯರು ನೆಲೆಸಿದ್ದ ಕೃಷಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ.