ಫರ್ನೀಚರ್ ಅಂಗಡಿಯಲ್ಲಿನ ಪೀಠೋಪಕರಣಗಳ ಕಾರ್ಖಾನೆಯಲ್ಲಿ ಅಗ್ನಿ ಅವಘಡ
Fire breaks out at furniture factory in furniture store
ಲೋಕದರ್ಶನ ವರದಿ,
ಜಮಖಂಡಿ 14: ನಗರದ ಮುಧೋಳ ರಸ್ತೆಯ ಹೊರವಲಯದಲ್ಲಿರುವ ಆಲಗೂರ ಫರ್ನೀಚರ್ ಅಂಗಡಿಯಲ್ಲಿನ ಪೀಠೋಪಕರಣಗಳ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ,ಗಳ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಅಂಗಡಿಯ ಮಾಲಿಕ ಮಹಮ್ಮದ ಸಾಧಿಕ್ ಆಲಗೂರ ಅವರಿಗೆ ಸೇರಿದ ಕಾರ್ಖಾನೆಯಲ್ಲಿ ಮಧ್ಯಾಹ್ನದ ವೇಳೆಗೆ ನಮಾಜ ಮಾಡಲು ಹೋದ ಸಮಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ಕಾರ್ಖಾನೆಯಲ್ಲಿದ್ದ ದುಬಾರಿ ಬೆಲೆಯ ಸೋಫಾಗಳು, ಕುರ್ಚಿಗಳು, ಟ್ರೇಜರಿಗಳು ಸಿದ್ಧಪಡಿಸಿದ ಫರ್ನಿಚರ್‌ಗಳು ಹಾಗೂ ಕುಷನ್ ಕಚ್ಚಾ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜಮಖಂಡಿ ಮತ್ತು ಮುಧೋಳ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳಾದ ಎಸ್.ಒ.ಎನ್.ಪಿ ಹೂಗಾರ, ಎಫ್.ಡಿ. ಎ.ವಾಯ್.ಹನಬರಟ್ಟಿ, ಎ.ಎಸ್.ಹಳೇಗೌಡರ, ಎಮ್.ಬಿ.ಕುಂಚನೂರ, ಬಿ.ಎಮ್.ಗಣಾಚಾರಿ, ಎಮ್.ಬಿ.ಬನ್ನಪ್ಪನ್ನವರ, ಬಿ.ಎಸ್.ಬಿರಾದಾರ, ಎಸ್.ಎ.ಮಾಳಶೆಟ್ಟಿ ಅವರು ಅಗ್ನಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ನಿಖರವಾದ ಮಾಹಿತಿ ತಿಳಿದುಬಂದಿರುವುದಿಲ್ಲ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 