ಫಿರ್ದೋಸೇ ಉಲೂಮ್ ಅರಬ್ಬಿ ಶಾಲೆ ಕಟ್ಟಡ ಕಾಮಗಾರಿಗೆ ಚಾಲನೆ

ಫಿರ್ದೋಸೇ ಉಲೂಮ್ ಅರಬ್ಬಿ ಶಾಲೆ ಕಟ್ಟಡ ಕಾಮಗಾರಿಗೆ ಚಾಲನೆ  Firdosay Uloom Arabic School building work started

ಕೊಪ್ಪಳ, ಆ.16: ನಗರದ ಫಿರ್ದೋಸ್ ಮಸೀದಿ ಆವರಣದಲ್ಲಿರುವ ಫಿರ್ದೋಸೇ ಉಲೂಮ್ ಅರಬ್ಬಿ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಶನಿವಾರ ಅಡಿಗಲ್ಲು ನೆರವೇರಿಸಿ ಚಾಲನೆ ನೀಡಿದರು.  

ಈ ಹಿಂದೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿ ಬಿಡುಗಡೆ ಮಾಡಿದ್ದರು. ಕಾಮಗಾರಿಯನ್ನು ಗುಣಮಟ್ಟದಿಂದ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಚಿವ ತಂಗಡಗಿ ಸೂಚಿಸಿದರು.  

ಕಾರ್ಯಕ್ರಮದಲ್ಲಿ ಸಂಸದ ಕೆ. ರಾಜಶೇಖರ್ ಹಿಟ್ನಾಳ್, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಅಮ್ಜದ್ ಪಟೇಲ್ ಸೇರಿದಂತೆ ಮಸೀದಿ ಕಮಿಟಿ ಪದಾಧಿಕಾರಿಗಳು, ಧರ್ಮಗುರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.