ಉದ್ಯಮ ಶೀಲತಾ ಅಬಿವೃದ್ದಿ ತರಬೇತಿಯ ಮುಕ್ತಾಯ ಕಾರ್ಯಕ್ರಮ

 ಲೋಕದರ್ಶನ ವರದಿ

 ಬೆಳಗಾವಿ 15: ದೇಶದ ಪ್ರಗತಿಯಲ್ಲಿ ಸರಕಾರಿ ಇಲಾಖೆಗಳು ,ಖಾಸಗಿ ಸಂಸ್ಥೆಗಳು ಮತ್ತು ಸ್ವ ಉದ್ಯೋಗ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ, ಅದರಲ್ಲಿಯೂ ಸ್ವ-ಸಹಾಯ ಸಂಘಗಳ ಪಾತ್ರ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತಿವೆ, ಮನೆಯೆ ಮೂದಲ ಪಾಠ ಶಾಲೆ ಜನನಿ ತಾನೇ ಮೋದಲ ಗುರು ಎಂಬಂತೇ ಮಹಿಳೆ ಸುಶಿಕ್ಷಿತಳಾದಾಗ ಮಾತ್ರ ಎಲ್ಲ ಕಡೆ ಅಭಿವೃದ್ದಿಯಾಗಲು ಸಾಧ್ಯ, ಅದಕ್ಕಾಗಿ ಈ ತರಬೇತಿಯನ್ನು ಹಮ್ಮಿಕೋಂಡಿದ್ದು, ತರಬೇತಿಯಲ್ಲಿ ಪಡೆದ ಜ್ಞಾನದ ಸಹಾಯದಿಂದ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಿರಿ ಮತ್ತು ಪ್ರಾಮಾಣಿಕತನದಿಂದ ಕೆಲಸ ಕಾರ್ಯಗಳನ್ನು ಮಾಡಿದಾಗ ಮಾತ್ರ ನಿಮ್ಮ ಕನಸುಗಳೆಲ್ಲವು ನನಸಾಗಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃಧಿ ಯೋಜನೆ ನಿದರ್ೇಶಕ  ಸಿನಪ್ಪ ಮೋಯ್ಲಿ ಅವರು ಮಾತನಾಡಿ  ಹೇಳಿದರು.

      ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ  ಜಿಲ್ಲೆಯ ಸ್ವ-ಸಹಾಯ ಸಂಘಗಳ ಶಿಬಿರಾಥರ್ಿಗಳಿಗೆ ಹಮ್ಮಿಕೊಂಡಿದ್ದ ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ ಇತ್ತಿಚಿಗೆ ಜರುಗಿತು.

      ಸಂಸ್ಥೆಯ ನಿದರ್ೇಶಕರಾದಂತಹ ಲಕ್ಷ್ಮೀಕಾಂತ ಪಾಟೀಲ ರವರು ಮಾತನಾಡಿ ಇವತ್ತಿನ ದಿನದಲ್ಲಿ ನಿರುದ್ಯೋಗ ನಿವಾರಣೆಗೆ ಸ್ವ ಉದ್ಯೋಗವೆ ಮದ್ದು ಅದಕ್ಕಾಗಿ ಸಕರ್ಾರ ಹಲವಾರು ಯೋಜನೆಗಳ ಮೂಲಕ ಸಾಲ-ಸೌಲಬ್ಯ ಒದಗಿಸುತ್ತಿದೆ ಅವುಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೊಡ್ಡಮಟ್ಟದ ಉದ್ಯಮಿಗಳಾಗಿ ಉತ್ತಮ ಜೀವನ ನಡೆಸಿರಿ, ತರಬೇತಿಯಲ್ಲಿ ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನೀವೂ ಇನೊಬ್ಬರಿಗೆ ಉದ್ಯೋಗವನ್ನು ಕೊಡುವಷ್ಟರ ಮಟ್ಟಿಗೆ ಬೆಳೆಯಬೇಕು, ಇವತ್ತಿನ ದಿನ ಆಥರ್ಿಕ ಕ್ಷೇತ್ರದಲ್ಲಿ ಸ್ವ-ಉದ್ಯೋಗ ವಲಯದ ಕೂಡುಗೆ ಮಹತ್ತರವಾಗಿದ್ದು ಇದಕ್ಕೆ ಎಲ್ಲಾ ಕಡೆಗಳಲ್ಲಿಯೂ ಮಹತ್ವ ಇದೆ ಅದರ ಕಡೆಗೆ ಹೆಚ್ಚಿನ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಿ ದೇಶದ ಅಭಿವೃದ್ದಿಗೆ ಕೈ ಜೋಡಿಸಿರಿ  ಎಂದು ತಿಳಿಹೇಳಿ,ಸಕಾಲದಲ್ಲಿ ಸಾಲವನ್ನು ಮರುಪಾವತಿಸಿ ಬ್ಯಾಂಕಿನ ಜೋತೆ ಅಥವಾ ಇತರೆ ಸಂಘ ಸಂಸ್ಥೆಗಳ ಜೋತೆ ಉತ್ತಮ ಸಂಬಂದವನ್ನು ಹೊಂದಿ ಎಂದು  ಶಿಭಿರಾಥರ್ಿಗಳಿಗೆ ಹಾರೈಸಿದರು

       ಕೊನೆಯದಾಗಿ ಶಿಬಿರದಲ್ಲಿ ಪಾಲ್ಗೊಂಡ ಶಿಭಿರಾಥರ್ಿಗಳು ತಮ್ಮ ತರಬೇತಿ ದಿನಗಳ ಅನುಭವ ಮತ್ತು ಅನಿಸಿಕೆಗಳನ್ನು ಅತೀ ಉತ್ಸಾಹದಿಂದ ಹಂಚಿಕೊಂಡರು ನಂತರ ಮುಖ್ಯ ಮುಖ್ಯ ಅತಿಥಿಗಳು ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಸ್ಥೆಯ ಸಿಬ್ಬಂದಿ ರಾಜೇಶ್ವರಿ ದೇವಲಾಪೂರ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕರಾದ ಚಂದ್ರಕಾಂತ ಹಿರೇಮಠ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಬಸವರಾಜ ಕುಬಸದ ಮತ್ತು ಅಬ್ಬುಲ ರಜಾಕ್ ಉಪಸ್ಥಿತರಿದ್ದರು.