ದೇವಗಿರಿ ಗ್ರಾಪಂಗೆ ಹಣಕಾಸು ಆಯೋಗದ ಅಧ್ಯಕ್ಷ ಭೇಟಿ
Finance Commission Chairman visits Devagiri Grampanchayat
ದೇವಗಿರಿ ಗ್ರಾಪಂಗೆ ಹಣಕಾಸು ಆಯೋಗದ ಅಧ್ಯಕ್ಷ ಭೇಟಿ
ಹಾವೇರಿ 04: ತಾಲೂಕಿನ ದೇವಗಿರಿ ಗ್ರಾಪಂಗೆ ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ ನಾರಾಯಣಸ್ವಾಮಿ ಹಾಗೂ ಸದಸ್ಯರು ಭೇಟಿ ನೀಡಿದರು. ಗ್ರಾಮ ಪಂಚಾಯತಿಯ ಜನಸಂಖ್ಯೆ, ಗ್ರಾಮ ಕುಡಿಯುವ ನೀರಿನ ಮೂಲ, ಪಂಚಾಯತಿ ವ್ಯಾಪ್ತಿಯ ಶಾಲೆಗಳ ವಿವರ, ಅಂಗನವಾಡಿ ಕೇಂದ್ರದ ವಿವರ,ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಂಗನವಾಡಿ, ಜೆಜೆಮ್ ಯೋಜನೆ ವಿವರ, ಪಂಚಾಯತಿ ಸಿಬ್ಬಂದಿ, ಬೀದಿ ದೀಪಗಳ ಮಾಹಿತಿ,15ನೇ ಹಣಕಾಸು ಮತ್ತು ಪಂಚಾಯಿತಿ ತೆರಿಗೆ ವಸುಲಾತಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ವಿವರವಾಗಿ ಪಂಚಾಯಿತಿಯಿಂದ ಕೆಲಸ ಮಾಡಿರುವ ಬಗ್ಗೆ ಡಿಜಿಟಲ್ ಮುಖಾಂತರ ನಿಯೋಗದ ಪದಾಧಿಕಾರಿಗಳಿಗೆ ತಿಳಿಸಲಾಯಿತು. ಅಂಗನವಾಡಿ ಕೇಂದ್ರಗಳಿಗೆ ಮತ್ತು ಡಿಜಿಟಲ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರೀಶೀಲಿಸಿದರು. ಈ ಸಂದರ್ಭದಲ್ಲಿ, ಐದನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲಾ, ್ಲಆರ್‌ಎಸ್ ಪೊಂಡೆ,ಎಂ ಕೆ ಕೆಂಪೇಗೌಡ,ಸಿ ಜಿ ಸುಪ್ರಸನ್ನ, ಕೆಯಾಲಕ್ಕಿಗೌಡ, ಗ್ರಾಪಂ ಅಧ್ಯಕ್ಷರಾದ ಪ್ರಭಾಕರ ಪಾರಿಗಂಟಿ, ಗ್ರಾಪಂ ಉಪಾಧ್ಯಕ್ಷರಾದ ಕವಿತಾ ಪರಸಣ್ಣನವರ, ವಸಂತ ಶೇಖಪ್ಪ ಮತ್ತಿಕಟ್ಟಿ, ತಾಪಂ ಕಾರ್ಯನಿರ್ವಾಕ ಅಧಿಕಾರಿ ಪರಮೇಶ ಹುಬ್ಬಳ್ಳಿ, ಬಸವರಾಜ ಕರಜಗಿ, ಪಿಡಿಓ ಸುನೀತಾ ಗರಡಿ, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 