ಇಟಲಿ 14, ಬಾಲಿವುಡ್ ಖ್ಯಾತ ನಟಿ, ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಟ ರಣವೀರ್ ಸಿಂಗ್ ಇಟಲಿಯ ಲೇಕ್ ಕೋಮೊದಲ್ಲಿ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ದಕ್ಷಿಣ ಭಾರತದ ಶೈಲಿಯಂತೆ ಕೊಂಕಣಿ ಸಂಪ್ರದಾಯದಂತೆ ದೀಪಿಕಾ ಮತ್ತು ರಣವೀರ್ ಮದುವೆ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರ ಕುಟುಂಬದ ಸದಸ್ಯರು ಮತ್ತು ಆಯ್ದ ನಿಕಟ ಗೆಳೆಯರು ಮಾತ್ರ ಹಾಜರಿದ್ದರು. ಬುಧವಾರ 7ಗಂಟೆಯ ಮುಹೂರ್ತಕ್ಕೆ ವಿವಾಹ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಆದರೆ ಯಾರಿಗೂ ಫೋಟೋ ತೆಗೆಯುವ ಅವಕಾಶ ನೀಡಿಲ್ಲ. ಆಹ್ವಾನಿತರಿಗೂ ಮೊಬೈಲ್ ನಿಷೇಧಿಸಲಾಗಿತ್ತು ಎಂದು ವರದಿ ವಿವರಿಸಿದೆ.
ಗುರುವಾರ ಮತ್ತೆ ದೀಪಿಕಾ ಮತ್ತು ರಣವೀರ್ ಸಿಂಧಿ ಸಂಪ್ರದಾಯದ ಪ್ರಕಾರ ವಿವಾಹವಾಗಲಿದ್ದಾರೆ. ದೀಪಿಕಾ ಮತ್ತು ರಣವೀರ್ ಆರತಕ್ಷತೆ ನವೆಂಬರ್ 21ರಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಬೆಂಗಳೂರಿನಲ್ಲಿ ಹಾಗೂ ನವೆಂಬರ್ 28ರಂದು ಮುಂಬೈನಲ್ಲಿ ನಡೆಯಲಿದೆ ಎಂದು ವರದಿ ವಿವರಿಸಿದೆ. ವಿವಾಹ ಕಾರ್ಯಕ್ರಮ ಇಂದು ಉತ್ತರ ಇಟಲಿಯ ನಯನ ಮನೋಹರ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ. ರೋಮ್ ಚಕ್ರಾಧಿಪತ್ಯದ ಭವ್ಯ ಪರಂಪರೆಯ ಹಿನ್ನೆಲೆ ಹೊಂದಿರುವ ಇಟಲಿಯಲ್ಲಿ ಬಿ ಟೌನ್ನ ಜನಪ್ರಿಯ ತಾರಾಜೋಡಿಯ ವಿವಾಹ ಕನರ್ಾಟಕ ಶೈಲಿಯಲ್ಲಿ ನಡೆದಿರುವುದು ಗಮನಾರ್ಹ. ಇಂದು ಕೊಂಕಣಿ ಕನ್ನಡ ಶೈಲಿಯಲ್ಲಿ ಹಾಗೂ ನಾಳೆ ಸಿಂಧಿ ಸಂಪ್ರದಾಯದ ಶೈಲಿಯಲ್ಲಿ ಜೋಡಿಗಳ ವಿವಾಹ ನೆರವೇರಲಿದೆ.
ವರ್ಷದ ಬಹುನಿರೀಕ್ಷಿತ ಈ ವಿವಾಹ ಸಂಭ್ರಮದಲ್ಲಿ ಉಭಯ ಕುಟುಂಬ ಸದಸ್ಯರು, ನಟ ಶಾರುಖ್ ಖಾನ್, ನಿದರ್ೇಶಕಿ ಫಹರ್ಾಖಾನ್, ನಿದರ್ೇಶಕ ಸಂಜಯ ಲೀಲಾ ಬನ್ಸಾಲಿ ಸೇರಿದಂತೆ ಕೆಲವೇ ಕೆಲವು ಆಪ್ತರಿಗೆ ಆಮಂತ್ರಣ ನೀಡಲಾಗಿದೆ.
ವಿವಾಹ ಕಾರ್ಯಕ್ರಮವು 700 ವರ್ಷ ಇತಿಹಾಸ ಹೊಂದಿರುವ ವಿಲ್ಲಾ ಡೆಲ್ ಬಾಲ್ ಬಿಯಾನೆಲ್ಲೋದಲ್ಲಿ ನಡೆಯಲಿದೆ. ಅಲ್ಲಿಗೆ, ಆಹ್ವಾನಿತರು ತಾವು ಉಳಿದುಕೊಂಡಿರುವ ಸಮೀಪದ ರೆಸಾಟರ್್ ನಿಂದ ಯಾಚ್ನಲ್ಲಿ ಆಗಮಿಸಲಿದ್ದಾರೆ.ಆದರೆ, ವರ ರಣವೀರ್ ಮತ್ತು ಅವರ ಕುಟುಂಬ ಸದಸ್ಯರು ಮಾತ್ರ ಸಮುದ್ರ ವಿಮಾನದಲ್ಲಿ ಆಗಮಿಸಿ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆಂದು ಹೇಳಲಾಗುತ್ತಿದೆ.
ಆಹ್ವಾನಿತರಿಗೆ ಕೊಮೊ ಸರೋವರದ ತೀರದಲ್ಲೇ ಇರುವ ರೆಸಾಟರ್್ನ 75 ಕೊಠಡಿಗಳನ್ನು ವಾರದ ಅವಧಿಗೆ ಪೂರ್ಣವಾಗಿ ಬುಕ್ ಮಾಡಲಾಗಿದ್ದು, ಎಲ್ಲರೂ ಅಲ್ಲಿಯೇ ತಂಗಿದ್ದಾರೆ.
ವಿವಾಹದ ಹಿನ್ನೆಲೆಯಲ್ಲಿ ಆಹ್ವಾನಿತರ ಮೊಬೈಲ್ಗೆ ವಿಶೇಷ ಆಮಂತ್ರಣ ಪತ್ರಿಕೆ ರವಾನಿಸಲಾಗಿದೆ.ಇದರೊಳಗೆ ಕ್ಯುಆರ್ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಿದ ಬಳಿಕವೇ ಎಲ್ಲರಿಗೂ ವಿವಾಹ ಸ್ಥಳಕ್ಕೆ ತೆರಳುವ ಅವಕಾಶ ನೀಡಲಾಗುತ್ತದೆ.
ಉತ್ತರ ಇಟಲಿಯ ಕೊಮೊ ಸರೋವರ ತೀರದಲ್ಲಿರುವ ವಿಲ್ಲಾ ಡೆಲ್ ಬಾಲ್ ಬಿಯಾನೆಲ್ಲೋ ಒಂದು ಖಾಸಗಿ ಕಟ್ಟಡವಾಗಿದೆ. 700 ವರ್ಷ ಇತಿಹಾಸ ಹೊಂದಿರುವ ಈ ಐತಿಹಾಸಿಕ ಹಾಗೂ ಸುಂದರ ಕಟ್ಟಡದೊಳಗೆ ಕುಳಿತರೆ, ಸರೋವರ, ಸುತ್ತಲಿನ ಸುಂದರ ಪರಿಸರವನ್ನು ಆಸ್ವಾದಿಸಬಹುದಾಗಿದೆ. ವಿಲ್ಲಾಡೆಲ್ನಲ್ಲಿ ಕಾರ್ಯಕ್ರಮ ಆಯೋಜನೆಗೆ ಮೂಲ ಶುಲ್ಕವಾಗಿ 8 ಲಕ್ಷ ರೂ.ಪಾವತಿ ಮಾಡಬೇಕು.ಆದರೆ, ಕಾರ್ಯಕ್ರಮಕ್ಕೆ ಗರಿಷ್ಠ 80 ಜನರನ್ನು ಆಹ್ವಾನಿಸಬಹುದು.
ಬೆಂಗಳೂರಿನಲ್ಲಿ ಔತಣ: ಕುಟುಂಬ ಸದಸ್ಯರಿಗಾಗಿ ದೀಪಿಕಾ ಕುಟುಂಬ ನ.21ರಂದು ಬೆಂಗಳೂರಿನ ಹೋಟೆಲ್ ಲೀಲಾ ಪ್ಯಾಲೆಸ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದೆ.
ಇನ್ನು ಮದುವೆ ದಿಬ್ಬಣಕ್ಕಾಗಿ ವಿಶೇಷ ಕೇಕ್ ತಯಾರಿಸಲು ಸ್ವಿಡ್ಜರ್ಲ್ಯಾಂಡ್ನಿಂದ ವಿಶೇಷ ಬಾಣಸಿಗರನ್ನು ಕರೆಸಲಾಗಿದೆ.ಇದೇ ವೇಳೆ ತಮ್ಮ ವಿವಾಹಕ್ಕೆ ಉಡುಗೊರೆ ನೀಡಬಯಸುವವರು ದತ್ತಿ ಸಂಸ್ಥೆಗಳಿಗೆ ದಾನ ಮಾಡಬಹುದು ಎಂದು ದೀಪಿಕಾ-ರಣವೀರ್ ದಂಪತಿ ಕೋರಿದ್ದಾರೆ.