ಇಂಡಿ ತಾಲ್ಲೂಕಿನ ಕೆರೆಗಳು ತುಂಬಿಸಿ: ಗುರುನಾಥ ಬಗಲಿ
Fill the lakes of Indi taluk: Gurunath Bagali
ಲೋಕದರ್ಶನ ವರದಿ
ಇಂಡಿ 30 : ತಾಲ್ಲೂಕಿನ ಎಲ್ಲಾ ಕರೆ ಕೊಳ್ಳಗಳಿಗೆ ನೀರು ಹರಿಸಿ ಇಂಡಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ರೈತರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ ಬಗಲಿ ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದ್ದಾರೆ. ಅವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಮರುಳಸಿದ್ದೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಕಿಸಾನ್ ಸಂಘದ ಸದಸ್ಯರ ಹೋರಾಟದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ.
ರೈತರು ಸಾಲ ಸುಲ್ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತಿವೆ.ಸುದೈವ ಮಾಹಾರಾಷ್ಟದ ಸಹ್ಯಾದ್ರಿಯ ಮಡಿಲಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕೃಷ್ಣಾ ನದಿ ವ್ಯಾಪಕವಾಗಿ ನೀರು ನದಿಗೆ ಹರಿದು ಬರುತ್ತಿದೆ. ಆಲಮಟ್ಟಿ ಆಣೆಕಟ್ಟು ಸಂಪೂರ್ಣ ತುಂಬಿದೆ. ಈಗ ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಹತ್ತು ಸಾವಿರ ಕ್ಯೂಸೆಕ್ ನೀರು ಹೋರಗೋಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಇಂಡಿ ತಾಲ್ಲೂಕಿನ ಎಲ್ಲಾ ಕೆರೆಗಳು ತುಂಬಲು ನಾಲ್ಕು ರಿಂದ ಏಳು ಟಿ ಎಂ ಸಿ ನೀರು ಸಾಕಾಗಿ ಹೋಗುತ್ತದೆ.ದಿನಕ್ಕೆ ಸುಮಾರು ಹತ್ತು ಟಿ ಎಂ ಸಿ ನೀರು ಆಲಮಟ್ಟಿ ಜಲಾಶಯದಿಂದ ಹೋರ ರಾಜ್ಯಕ್ಕೆ ಹೋಗುತ್ತದೆ, ಆದರೆ ಮೊದಲು ನಮ್ಮಗೆ ನೀರು ಹರಿಸಿ ಎಲ್ಲಾ ಕರೆ ಕೊಳ್ಳಗಳು ತುಂಬಿಸಲು ಇದು ಒಂದು ಒಂದು ಸುವರ್ಣಾವಕಾಶ ಇದನ್ನು ಅಧಿಕಾರಿ ಗಮನದಲ್ಲಿ ಇಟ್ಟುಕೊಂಡು ನೀರು ಹರಿಸಿ ಕೆರೆಗಳನ್ನು ತುಂಬಿಸಬೇಕು.
ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ ಇಲ್ಲವಾದರೆ. ತಡವಲಗಾ ಗ್ರಾಮದ ಜೋಡಗುಡಿಯ ಹತ್ತಿರ ಇಂಡಿ -ವಿಜಯಪೂರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಇಂಡಿ ತಾಲೂಕು ಅಖಿಲ ಭಾರತ ಕಿಸಾನ್ ಸಂಘದ ಅಧ್ಯಕ್ಷರಾದ ಈರಣ್ಣ ಗೋಟ್ಯಾಳ ಹಾಗೂ ಸಂಘದ ಮುಖಂಡರಾದ ಮಳಸಿದ್ದಪ ಖಸ್ಕಿ ಶೆಂಕ್ರ್ಪ ರೂಗಿ ಶರಣು ತಾರಾಪೂರ ಅಂಬ್ಬಣ ಪಂತೋಜಿ ಧಶಗೀರ್ ಬಾಗವಾನ ಶರಣು ಪಂತೋಜಿ ಯಶವಂತ ಖಸ್ಕಿ ಚನ್ನಪ್ಪ ಮಿರಗಿ ಚಿದಾನಂದ ಮದರಿ ಬಸವರಾಜ ಪಂತೋಜಿ ಚಂದು ಖಸ್ಕಿ ಮಲ್ಲೇಶಿ ಸುಧಾಮ ಮಾದೇವಪ್ಪ ಗೋಳ್ಳಗಿ ಅಣ್ಣಪ್ಪ ಜಾಲವಾದ ಮಳಸಿದ್ದಪ್ಪ ಮುತ್ತಗಿ ಈರ್ಪ ತೆನ್ನಹಳ್ಳಿ ಮಲ್ಕಪ್ಪ ಖಸ್ಕಿ ಮಳಸಿದ್ದಪ್ಪ ಪತಂಗಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 