ಶ್ರೀಚಕ್ರದ ಐದನೇ ಮಂಡಲ ಪೂಜೆ ; ಮಹಿಳೆಯರು ಭಾರತೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಬೇಕು : ಪ್ರಭು ಸ್ವಾಮಿಜಿ
Fifth Mandala Puja of Sri Chakra; Women should preserve and cultivate Indian culture: Prabhu Swamiji
ಲೋಕದರ್ಶನ ವರದಿ
ಮಹಾಲಿಂಗಪುರ 22 : ಮಹಿಳೆಯರು ದೇವಿಯ ಸ್ವರೂಪರಾಗಿದ್ದು, ಆಧುನೀಕ ಪ್ಯಾಶನ್ ಮಾಯೆಗೆ ಮರುಳಾಗದೇ ನಮ್ಮ ಸನಾತನ ಹಿಂದೂ ಧರ್ಮದ ಸಾಂಪ್ರಾದಾಯಿಕ ಉಡುಗೆ, ಸೀರೆ, ಬಳೆ, ಕುಂಕಮಧಾರಣೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವದು ಮಹಿಳೆಯರ ಆದ್ಯ ಕರ್ತವ್ಯವಾಗಿದೆ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಜಿ ಹೇಳಿದರು. ಮಂಗಳವಾರ ಮುಂಜಾನೆ ಬನಶಂಕರಿದೇವಿ ದೇವಸ್ಥಾನದಲ್ಲಿ ಇಳಕಲ್ಲದ ಮಾಲಾ ವಿಜಯಕುಮಾರ ಕಾಳಗಿ ಅವರು ಹಮ್ಮಿಕೊಂಡಿದ್ದ ಶ್ರೀಚಕ್ರದ ಐದನೇ ಮಂಡಲ ಮಂಡಲ ಪೂಜೆಯ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ತಾಯಿಯೇ ಮೊದಲ ಗುರುವಾಗಿರುವ ಕಾರಣ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸುವಲ್ಲಿ ಹಾಗೂ ಉತ್ತಮ ಮಠಾಧೀಶ, ಉತ್ತಮ ರಾಜಕಾರಿಣಿ, ಉತ್ತಮ ನಾಗರೀಕನನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರವು ಬಹುಮುಖ್ಯವಾಗಿದೆ.
ಇಂದಿನ ಯುವಕ-ಯುವತಿಯರಿಗೆ ನಮ್ಮ ಸನಾತನ ಹಿಂದೂ ಧರ್ಮದ ಪೂಜೆ, ಪುನಸ್ಕಾರ, ಆಚರಣೆಗಳಲ್ಲಿ ತೊಡಗುವಂತೆ ಮಾಡುವ ಜವಾಬ್ದಾರಿಯು ಮನೆಯ ಗೃಹಿಣಿಯರ ಮೇಲಿದೆ. ತಾಯಂದಿರು ಅಡುಗೆ ಮಾಡುವಾಗ ಏಕಾಗ್ರತೆಯಿಂದ ಭಗವಂತನ ನಾಮಸ್ಮರಣೆಯೊಂದಿಗೆ ಅಡುಗೆ ಮಾಡಿದಾಗ ಮಾತ್ರ ಅಡುಗೆ ಪ್ರಸಾದ ರೂಪವಾಗಿ ಮಕ್ಕಳಿಗೆ, ಮನೆಯ ಯಜಮಾನರಿಗೆ ಉತ್ತಮ ಸಂಸ್ಕಾರವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ.
ಶತಮಾನದ ಇತಿಹಾಸವುಳ್ಳ ಬನಶಂಕರಿ ದೇವಸ್ಥಾನದಲ್ಲಿ ಶ್ರೀಚಕ್ರ ಸ್ಥಾಪನೆ ಮಾಡಿ ಈಗ ಮಂಡಲ ಪೂಜೆ ನಡೆಯುತ್ತಿರುವದು ಸಂತೋಷದ ಸಂಗತಿ. ಶ್ರೀಚಕ್ರ ಸ್ಥಾಪನೆಯ ನಂತರ ಐತಿಹಾಸಿಕ ಬನಶಂಕರಿದೇವಸ್ಥಾನಕ್ಕೆ ಅಧ್ಯಾತ್ಮೀಕ ಮತ್ತು ಧಾರ್ಮಿಕವಾಗಿ ಹೊಸ ಚೈತನ್ಯ ಬಂದಿದೆ. ಸದ್ಭಕ್ತರು ಬನಶಂಕರಿದೇವಿ ಮತ್ತು ಶ್ರೀಚಕ್ರದ ದರ್ಶನ, ಆರಾಧನೆಯ ಮೂಲಕ ಬದುಕಿನ ಎಲ್ಲಾ ಕಷ್ಟಗಳಿಂದ ಹೊರಬರಲು ಸಾಧ್ಯವಿದೆ ಎಂದರು.
ಉಪ್ಪಾರ ಸಮಾಜದ ಹಿರಿಯರಾದ ಮಹಾಲಿಂಗಪ್ಪ ಲಾತೂರ ಮಾತನಾಡಿ ಬನಶಂಕರಿದೇವಿ ದೇವಸ್ಥಾನದ ಹಿರಿಯರು ದೇವಸ್ಥಾನದಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳು ವೈಶಿಷ್ಟ್ಯಪೂರ್ಣವಾಗಿರುತ್ತವೆ. ಅಧ್ಯಾತ್ಮೀಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂಘಟನೆಗೆ ಮಾದರಿಯಾಗಿರುವ ಬನಶಂಕರಿದೇವಿ ದೇವಸ್ಥಾನದ ಹಿರಿಯರು ದೇವಸ್ಥಾನದಲ್ಲಿ ಶ್ರೀಚಕ್ರ ಸ್ಥಾಪನೆ, ನವದುರ್ಗೆಯರ ಮೂರ್ತಿ ಪ್ರತಿಷ್ಟಾಪನೆ, ಮಾದರಿ ದಸರಾ ಉತ್ಸವ ಸೇರಿದಂತೆ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪಟ್ಟಣದ ಸದ್ಭಕ್ತರಲ್ಲಿ ಭಕ್ತಿಸಿಂಚನ ಮೂಡಿಸುವ ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು.
ಬನಶಂಕರಿ ದೇವಸ್ಥಾನದ ಅರ್ಚಕರಾದ ಶಿವಾನಂದ ಛಟ್ಟಿಮಠ, ಸಂಗಮೇಶ ಛಟ್ಟಿಮಠ, ಶ್ರೀಶೈಲ ಸ್ವಾಮಿಜಿ ಅವರು ಶಾಸ್ತ್ರೋಕ್ತವಾಗಿ ಶ್ರೀಚಕ್ರದ ಅಭಿಷೇಕ, ಕುಂಕುಮಾರ್ಚನೆಯೊಂದಿಗೆ ಮಹಾಪೂಜೆ ಸಲ್ಲಿಸಿದರು. ಶ್ರೀಚಕ್ರದ ಕುಂಕುಮಾರ್ಚನೆಯಲ್ಲಿ ಭಾಗವಹಿಸಿದ್ದ ನೂರಾರು ಮಹಿಳೆಯರಿಗೆ ಉಡಿ ತುಂಬಲಾಯಿತು. ಡಾ.ಎಂ.ಆಯ್.ಹುಡೇದಮನಿ, ಎಂ.ಆರ್.ತೇರದಾಳ, ಚನ್ನಬಸಪ್ಪಾ ಹೊಸೂರ, ಮಂಜು ಗಲಗಲಿ, ಈರಣ್ಣ ಅಂಬಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಮಹಾಲಿಂಗಪುರದ ವಿವಿಧ ಪ್ರೌಢಶಾಲೆಗಳ 30ಕ್ಕೂ ಅಧಿಕ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳನ್ನು ಬನಶಂಕರಿ ದೇವಸ್ಥಾನದ ವತಿಯಿಂದ ಹಿರಿಯರು ಸನ್ಮಾನಿಸಿದರು. ಬನಶಂಕರಿ ದೇವಸ್ಥಾನದ ಹಿರಿಯರಾದ ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ನಾರಾಯಣ ಕಿರಗಿ, ಸಿದಗಿರೆಪ್ಪ ಕಾಗಿ, ಶ್ರೀಶೈಲಪ್ಪ ಬಾಡನವರ, ಜಿ.ಎಸ್.ಗೊಂಬಿ, ಅಶೋಕ ಬಾಣಕಾರ, ಪ್ರಭು ಬೆಳಗಲಿ, ಅಶೋಕ ಧಡೂತಿ, ಶಂಕರ ಅಂಬಿ, ಮಹಾದೇವ ಹುಣಶ್ಯಾಳ, ಬಿ.ಸಿ.ಪೂಜಾರಿ, ಕೆ.ಎಂ.ಬಿಜಾಪೂರ, ಈರಣ್ಣ ಹಲಗತ್ತಿ, ಸಂಜು ಜಮಖಂಡಿ, ರಾಜೇಶ ಭಾವಿಕಟ್ಟಿ, ಈರ್ಪ ಮುದಕವಿ, ಗಂಗಪ್ಪ ಕರಡಿ, ಮಹಾಲಿಂಗ ಹಾವನಳ್ಳಿ, ಗುರು ಬಾಡಗಿ, ಮಂಜುನಾಥ ಭಾವಿಕಟ್ಟಿ, ಚಂದು ಕಾಗಿ, ಗುರುಪಾದ ಕಾಗಿ, ಶಿವಾನಂದ ಕಿತ್ತೂರ, ಶಿವಾನಂದ ಮುರಗೋಡ, ನಾಗಪ್ಪ ಮುದಕವಿ, ಮಹಾಲಿಂಗ ಅಯ್ಯಂಗ ಸೇರಿದಂತೆ ಹಲವರು ಶ್ರೀಚಕ್ರದ ಐದನೇ ಮಂಡಲ ಪೂಜೆಯಲ್ಲಿ ಭಾಗವಹಿಸಿದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 