ಸರ್ಕಾರದ ಯೋಜನೆಗಳ ಕುರಿತು ಕ್ಷೇತ್ರ ಪ್ರಚಾರ ಕಾರ್ಯಕ್ರಮ

ಗದಗ:  ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪೂರ,    ಯಕ್ಲಾಸಪೂರ, ರಾಮೇನಹಳ್ಳಿ, ಜಂತ್ಲಿ ಶಿರೂರ ಗ್ರಾಮಗಳಲ್ಲಿ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗದಗ ಹಾಗೂ ಗ್ರಾಮ ಪಂಚಾಯತ ಇವರ ಸಹಯೋಗದಲ್ಲಿ ಗ್ರಾಮ ಸಂಪರ್ಕ ಯೋಜನೆ ಅಡಿಯಲ್ಲಿ ಜಾನಪದ ಮತ್ತು ಬೀದಿ ನಾಟಕದ ಮೂಲಕ ಸರ್ಕಾರದ ಯೋಜನೆಯ ಕುರಿತು ಜನ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮ ಜರುಗಿತು.

    ಸಿದ್ಧಲಿಂಗೇಶ್ವರ ಜಾನಪದ ಕಲಾತಂಡ ಅಡವಿಸೋಮಾಪೂರ ಹಾಗೂ ಗುರು ಶಿಷ್ಯ ಪರಂಪರೆ ಜಾನಪದ ಕಲಾತಂಡ ಲಕ್ಕುಂಡಿ ಜಾನಪದ ಕಲಾ ತಂಡದವರು  ಗ್ರಾಮದ ಸ್ವಚ್ಛತೆ ಹಾಗೂ ಸರ್ಕಾರದ ವಿವಿಧ ಜನಪರ ಯೋಜನೆಗಳಾದ ಕಿಸಾನ್ ಸಮ್ಮಾನ್, ಸಹಾಯಧನ, ನೇಕಾರರು, ಮೀನುಗಾರರ ಸಾಲಮನ್ನಾ, ರೈತರ ಸಾಲಮನ್ನಾ, ಸಮ್ಮಾನ್ ಯೋಜನೆ,ಆಯುಷ ಸಮ್ಮಾನ್ ಕಾರ್ಡ್ ಯೋಜನೆ, ವಿದ್ಯಾಶ್ರೀ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಭಾಗ್ಯಶ್ರಿ ಯೋಜನೆ, ಗಂಗಾ ಕಲ್ಯಾಣ ಯೋಜನೆ,  ರುದ್ರಾಪಿ ಯೋಜನೆಗಳ ಕುರಿತು ಆಯಾ ಇಲಾಖೆಯಲ್ಲಿ ಮಾಹಿತಿ ಪಡೆದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು  ಜಾನಪದ ಗೀತೆ ಹಾಗೂ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು  ಇದ್ದರು.