ಸಂಭ್ರಮದ ವಿಶ್ವಕರ್ಮ ಮಹೋತ್ಸವ: ಸಕಲ ವಾದ್ಯದೊಂದಿಗೆ ಪಲ್ಲಕ್ಕಿ ಮೆರವಣಿಗೆ
Festive Vishwakarma Mahotsav: Palanquin procession with full musical instruments
ರಬಕವಿ-ಬನಹಟ್ಟಿ 01: ಬನಹಟ್ಟಿ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮರ ಮಹೋತ್ಸವ ನಗರದಲ್ಲಿ ಸಂಭ್ರಮಸಡಗರದಿಂದ ನಡೆಯಿತು. ಮಹೋತ್ಸವದ ನಿಮಿತ್ಯವಾಗಿ ಬನಹಟ್ಟಿಯ ಲಕ್ಷ್ಮೀ ನಗರದ ಲಕ್ಷ್ಮೀ ದೇವಸ್ಥಾನದ ಹತ್ತಿರ ಬೆಟ್ಟದ ಮೇಲಿರುವ ವಿಶ್ವಕರ್ಮರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಆರಂಭಗೊಂಡು ನಗರ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ಸಂಚರಿಸಿ ಮತ್ತೆ ದೇವಸ್ಥಾನದ ಆವರಣವನ್ನು ತಲುಪಿತು. ಈ ಸಂದರ್ಭದಲ್ಲಿ ಗಾಯತ್ರಿ ಮಹಿಳಾ ಮಂಡಳದ ಮುತ್ತೈದೆಯರು ಕುಂಭಮತ್ತು ಆರತಿ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕರಡಿ ಹಾಗೂ ಸಂಬಾಳ ವಾದನ ಹಾಗೂವೀರಗಾಸೆ ಪುರವಂತರು ನಗರದ ಪ್ರಮುಖ ಸ್ಥಳಗಳಲ್ಲಿ ವೀರಗಾಸೆ ಕಲೆಯನ್ನು ಪ್ರದರ್ಶನ ಮಾಡಿ ಗಮನ ಸೆಳೆದರು. ಮಧ್ಯಾಹ್ನ ಪ್ರಸಾದವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಪಿ. ಬಿ. ಬಡಿಗೇರ,ರಾಜು ಬಡಿಗೇರ, ಕಾಳಪ್ಪ ಬಡಿಗೇರ, ಕಲ್ಲಪ್ಪ ಪತ್ತಾರ, ಅರವಿಂದ ಪತ್ತಾರ, ಮೋಹನ ಪತ್ತಾರ, ಚಿದಾನಂದ ಪತ್ತಾರ, ಅಶೋಕ ಪತ್ತಾರ, ರವಿ ಪತ್ತಾರ, ಅನೀಲ ಬಡಿಗೇರ, ಅಚ್ಯುತ ಪತ್ತಾರ, ಕುಮಾರ ಪತ್ತಾರ, ನಾಗಲಿಂಗ ಪತ್ತಾರ, ಚಂದು ಬಡಿಗೇರ, ಮಲ್ಲಿಕಾರ್ಜುನ ಪತ್ತಾರ, ಮಂಜು ಪತ್ತಾರ, ರಮೇಶ ಬಡಿಗೇರ, ಕಾಳಪ್ಪ ಪತ್ತಾರ, ಸಚಿನ ಪತ್ತಾರ, ಲಲಿತಾ ಪತ್ತಾರ, ಕಲಾ ಪತ್ತಾರ, ಶೃತಿ ಪತ್ತಾರ, ಸ್ನೇಹಾ ಪತ್ತಾರ, ದ್ರಾಕ್ಷಾಯಣಿ ಬಡಿಗೇರ, ಸವಿತಾ ಬಡಿಗೇರ, ರಾಣಿ ಪತ್ತಾರ, ಪ್ರೀತಿ ಬಡಿಗೇರ, ಜ್ಯೋತಿ ಬಡಿಗೇರ, ಶ್ವೇತಾ ಪತ್ತಾರ, ರಬಕವಿ-ಬನಹಟ್ಟಿ, ಮೂಡಲಗಿ, ತೇರದಾಳ, ಜಮಖಂಡಿ, ಮುಧೋಳ ತಾಲ್ಲೂಕಿನ ವಿಶ್ವಕರ್ಮ ಸಮಾಜಬಾಂಧವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 