ಬಣ್ಣದ ಹಬ್ಬ ರಾಜ್ಯ ಮಟ್ಟದ ಯುವ ಕಲಾವಿದರ ಚಿತ್ರಕಲಾ ಶಿಬಿರ ಸಂಪನ್ನ
Festival of Colors State Level Painting Camp for Young Artists Sampanna
ಧಾರವಾಡ ನ.04: ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್‌ದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬಣ್ಣದ ಹಬ್ಬ ರಾಜ್ಯ ಮಟ್ಟದ ಯುವಕಲಾವಿದರ ಚಿತ್ರಕಲಾ ಶಿಬಿರವನ್ನು ಅಕ್ಟೋಬರ್ 29, 2025 ರಿಂದ ಅಕ್ಟೋಬರ್ 31, 2025 ರ ವರೆಗೆ ಧಾರವಾಡದ ಸರ್ಕಾರಿ ಆರ್ಟ ಗ್ಯಾಲರಿಯಲ್ಲಿ ಸಂಪನ್ನವಾಯಿತು.
ಸದರಿ ಶಿಬಿರದಲ್ಲಿ 15 ಜನ ಕಲಾವಿದರು ರಚಿಸಿದ 15 ಸುಂದರ ಕಲಾಕೃತಿಗಳನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಆರ್ಟ ಗ್ಯಾಲರಿಯಲ್ಲಿ ನವೆಂಬರ್ 01, 2025 ರಂದು ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಈ ಪ್ರದರ್ಶನವು 10 ದಿನಗಳ ವರೆಗೆ ವೀಕ್ಷಣೆಗೆ ಲಭ್ಯವಿದೆ.
ಕಲಾ ಪ್ರದರ್ಶನದ ಉದ್ಘಾಟನೆಯನ್ನು ಕಲಾ ಚಿಂತಕರು, ಕಲಾ ಇತಿಹಾಸಕರು ಹಾಗೂ ಕಲಾ ವಿಮರ್ಶಕ ಡಾ ಎಸ್.ಸಿ. ಪಾಟೀಲ ಅವರು ಸಸಿಗೆ ನೀರೆರೆಯುವುದರೊಂದಿಗೆ ನೆರವೇರಿಸಿ, ಮಾತನಾಡಿ, ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ಅವರ ವ್ಯಕ್ತಿತ್ವ ಹಾಗೂ ಚಿತ್ರಕಲಾ ಅಭ್ಯುದಯಕ್ಕೆ ಆವರಿಸಿರುವ ಕಳ-ಕಳಿಯನ್ನು ವಿವರಿಸುತ್ತಾ, ಅವರೊಂದಿಗಿನ ತಮ್ಮ ಒಡನಾಟದ ಕ್ಷಣವನ್ನು ಸ್ಮರಿಸಿಕೊಂಡರು. ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ಟ್ರಸ್ಟ್ ಹೊಸ ಹೊಸ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಶ್ರೀ ಹಾಲಭಾವಿ ಅವರ ಕುರಿತು ವಿಚಾರ ಸಂಕೀರ್ಣಗಳನ್ನು ಹಮ್ಮಿಕೊಂಡು ಕಿರು ಹೊತ್ತಿಗೆಗಳನ್ನು ಹೊರತರಲಿ ಎಂದು ಆಶಿಸಿದರು.
ಪ್ರದರ್ಶನ ಉದ್ಘಾಟಿಸಿದ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲ ಅವರು, ಮಾತನಾಡಿ ಚಿತ್ರಕಲಾ ಶಿಲ್ಪಿ ಡಿ.ವ್ಹಿ. ಹಾಲಭಾವಿ ಟ್ರಸ್ಟಿನ ಸಮಿತಿಯು ಹೊಸದಾಗಿ ರಚನೆಗೊಂಡಿದ್ದು, ತುಂಬಾ ಉತ್ಸಾಹಿ ಸದಸ್ಯರು ಹಾಗೂ ಅಧ್ಯಕ್ಷರು ನೂತನ ಕಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಆಸೆಯನ್ನು ಹೊಂದಿದ್ದಾರೆ. ಪ್ರಸ್ತುತ ಪ್ರದರ್ಶನದಲ್ಲಿ ತುಂಬಾ ಉತ್ತಮ ಕಲಾಕೃತಿಗಳು ರಚನೆಯಾಗಲು ಶಿಬಿರದ ಸಂಚಾಲಕರು ಆಸಕ್ತಿ ವಹಿಸಿದ್ದಾರೆ ಎಂದರು.
ಮಾಜಿ ಪ್ರಾಚಾರ್ಯರು ಹಾಗೂ ಟ್ರಸ್ಟಿನ ಹಿರಿಯ ಸದಸ್ಯ ಸುರೇಶ ಹಾಲಭಾವಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಟ್ರಸ್ಟ್ ಹೊಂದಿದ ಉದ್ದೇಶಗಳನ್ನು ವಿವರಿಸುತ್ತಾ, ಪ್ರಸ್ತುತ ಕಲಾ ಶಿಬಿರದಲ್ಲಿ ರಚಿತವಾದ ಕಲಾಕೃತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರಸ್ಟಿನ್ ಸದಸ್ಯ ಡಾ ಬಿ.ಎಚ್‌ಕುರಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ಶಿಬಿರದ ಸಂಚಾಲಕ ಡಿ.ಎಂ. ಬಡಿಗೇರ ಅವರು ಸಮಾರೋಪ ನುಡಿಗಳನಾಡಿದರು.
(ಫೋಟೊ ಇವೆ)
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 