ನಿವೃತ್ತ ಶಿಕ್ಷಕ ಬಿ ಬಿ ಗಡ್ಡದ ಅವರಿಗೆ ಸನ್ಮಾನ

ನಿವೃತ್ತ ಶಿಕ್ಷಕ ಬಿ ಬಿ ಗಡ್ಡದ ಅವರಿಗೆ ಸನ್ಮಾನ Felicitation to retired teacher BED Gaddada

ಇಂಡಿ 05: ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು, ಶ್ರೇಷ್ಠ ಸೇವೆ. ಶಿಕ್ಷಕ ಸಮುದಾಯದವರುಎಲ್ಲ ಕ್ಷೇತ್ರಗಳನ್ನು ಬೆಳೆಸುವಂತಹ ಗಾರುಡಿಗರುಎಂದುಇಂಡಿ ಮತಕ್ಷೇತ್ರದ ಶಾಸಕರಾದಯಶವಂತರಾಯಗೌಡ ಪಾಟೀಲ ಹೇಳಿದರು. 

ಅವರು ಇಂಡಿ ತಾಲ್ಲೂಕಿನ ಹೋರ್ತಿ ಸೋಮೇಶ್ವರ ಪ್ರೌಢಶಾಲೆಯ ಮುಖ್ಯಗುರುಗಳಾದ ಬಿ ಬಿ ಗಡ್ಡದಅವರ ಸೇವಾ ನಿವೃತ್ತಿ ಹೊಂದಿರುವ ಬಿ ಬಿ ಗಡ್ಡದಅವರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದ ಶಾಸಕರುಇದೊಂದು ಸಾಮಾಜಿಕ ಬದಲಾವಣೆತರುವಂತಹ ಹುದ್ದೆಯಾಗಿದೆ.ಈ ಸೇವೆ ಸಿಗುವುದು ತುಂಬಾಅದೃಷ್ಟವಂತರಿಗೆ, ಕಠಿಣ ಪರಿಶ್ರಮಿಗಳಿಗೆ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ನಮ್ಮಜೀವನ ಕಟ್ಟಿಕೊಳ್ಳುವ ವ್ಯಕ್ತಿಗಳಿಗೆ ಒಲಿದಿದೆ.ಆ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಪ್ರತಿಕ್ಷಣವೂ ಕಲಿಸುವ ತಹತಹ ಇಮ್ಮಡಿಗೊಳಿಸಿಕೊಳ್ಳಬೇಕು. ನಮ್ಮತನಯಾವತ್ತಿದ್ದರೂ ಅಳಿದು ಹೋಗದಂತೆ ವಿಶ್ವದ ಭೂಪಟದಲ್ಲಿ ನಾವು ಮಿಂಚಬೇಕು ಎನ್ನುವ ಮಾತಿನಂತೆ, ಬಿ ಬಿ.ಗಡ್ಡದವರುಇಂಡಿತಾಲ್ಲೂಕಿನ ಹೋರ್ತಿ ಎಂಬ ಹಳ್ಳಿಯಿಂದ ಬೆಳೆದು ನಿಂತುಇವತ್ತು  ವಿವಿಧ ಸಂಸ್ಥೆಗಳು ಹಾಗೂ ಸಹಕಾರಿ ಸಂಘಗಳ ಮೂಲಕ ಸಾಧನೆ ಮಾಡುತ್ತಿದ್ದಾರೆ. ಅವರದ್ದು ಸೌಮ್ಯ-ಗಂಭೀರ ಸ್ವಭಾವ.ವ್ಯತಿರಿಕ್ತ ಸಂದರ್ಭಗಳಲ್ಲಿ ಕಷ್ಟಗಳನ್ನು ಅನುಭವಿಸಿ ಯಾರೂ ಬೆಳೆದು ಬರುತ್ತಾರೋಅವರಿಗೆ ಸಾಧನೆ ಮಾಡುವ ಹುಮ್ಮಸ್ಸಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ನಿವೃತ್ತ ಗುರುಗಳಾದ ಬಿ ಬಿ ಗಡ್ಡದಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು ಹಾಗೂ ಜಿಲ್ಲಾಕಾಂಗ್ರೆಸ್‌ಅಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ, ಸೇರಿದಂತೆಅನೇಕರು ಮಾತನಾಡಿದರು.

ಈ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನು ಪ ಪೂ ಶ್ರೀ ಈಶಪ್ರಸಾದ ಮಹಾಸ್ವಾಮಿಗಳು ಶ್ರೀ ಗುರುದೇವಆಶ್ರಯಅಥರ್ಗಾಅವರು ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಹೋರ್ತಿಗ್ರಾಮ ಪಂಚಾಯಿತಿಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಭೋಸಗಿ,ಹೋರ್ತಿ  ಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದಅಧ್ಯಕ್ಷರಾದ ಶ್ರೀಮಂತೆ ಇಂಡಿ, ಚಡಚಣ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಬಾಬುರಾವಗೌಡ ಪಾಟೀಲ,ಸಿ ಎಸ್ ಮಜ್ಜಗಿ ಸಿದರಾಯ ಮೇತ್ರಿಆರ್ ಸಿ ಕಟ್ಟಿಮನಿ  ಎ ಎಸ್ ಹಂಜಗಿ  ಸುನೀಲ ರಾಠೋಡ, ಬಸವರಾಜ ಉಮರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಶ್ರೀ ಸೋಮೇಶ್ವರ ವಿವಿಧೋದ್ದೇಶ ಶಿಕ್ಷಣ ಸಂಸ್ಥೆ , ವಿವಿಧೋದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಪತ್ತಿನ ಸಹಕಾರಿ ಸಂಘ , ಗ್ರಾಮ ಪಂಚಾಯಿತಿ , ಶ್ರೀ ಮಲ್ಲಿಕಾರ್ಜುನ ಪತ್ತಿನ ಸಹಕಾರ ಸಂಘ,ಮಾಹಾಲಕ್ಷ್ಮಿ ಮಹಿಳಾ ಪತ್ತಿನ ಸಹಕಾರ ಸಂಘ ವೀರಭದ್ರೇಶ್ವರ ಪತ್ತಿನ ಸಹಕಾರ ಸಂಘ ಸರ್ವೋದಯ ಶಿಕ್ಷಣ ಸಂಸ್ಥೆ ಕೊಲ್ಲಿಪಾಕ ಸೋಮನಾಥ ಪತ್ತಿನ ಸಹಕಾರಿ ಸಂಘ ಹಾಗೂ ಸಮಸ್ತ ಅಭಿಮಾನಿ ಗೆಳೆಯರ ಬಳಗ ಹೋರ್ತಿಇವರ ಸಂಯುಕ್ತಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.