ಸಂಗೀತ ಗುರು ಗಾಯಕ ವೆಂಕಟೇಶ ಭಂಡಾರಿಗೆ ಸನ್ಮಾನ

ಸಂಗೀತ ಗುರು ಗಾಯಕ ವೆಂಕಟೇಶ ಭಂಡಾರಿಗೆ ಸನ್ಮಾನ Felicitation to music guru and singer Venkatesh Bhandari

ಹುಬ್ಬಳ್ಳಿ 01: ವಿಶ್ವ ಸಂಗೀತ ದಿನ ಅಂಗವಾಗಿ ಸಂಗೀತ ಕಾರ್ಯಕ್ರಮಗಳಲ್ಲಿ ಕರೋಕೆ ಮನರಂಜನಾ ವ್ಯವಸ್ಥೆಯಲ್ಲಿ ಅತ್ಯಂತ ಸುಶ್ರಾವ್ಯವಾಗಿ ಹಾಡುಗಳನ್ನು ಪ್ರಸ್ತುತಪಡಿಸುತ್ತಿರುವ, ಯುವ ಸಂಗೀತಗಾರರಿಗೆ ತರಬೇತಿ ನೀಡುತ್ತಿರುವ ಸಂಗೀತ ಗಾಯಕ ವೆಂಕಟೇಶ ಭಂಡಾರಿ ಅವರಿಗೆ ಜೈಂಟ್ಸ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ವತಿಯಿಂದ ಶಾಲು, ಮಾಲಾರೆ​‍್ಣ ಮಾಡಿ ಹೃದಯ ಸ್ಪರ್ಶಿಯಾಗಿ, ಅತ್ಯಂತ ಗೌರವದಿಂದ ಸನ್ಮಾನಿಸಿ ಸಂಗೀತದಲ್ಲಿ ಅವರ ಪಯಣ ಹೀಗೆ ಸಾಗಲಿ ಎಂದು ಶುಭ ಕೋರಿದರು.  

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ  ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡಿ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಜೈಂಟ್ಸ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ಅಧ್ಯಕ್ಷ ರೇಖಾ ಚಿನಿವಾಲ, ಹಿಂದಿನ ಅಧ್ಯಕ್ಷ  ಭಾರತಿ ವಾಲಿ, ಸುರೇಖಾ  ಪಾರಗಾಂವಕರ, ಹೇಮಾ ದೇಶಪಾಂಡೆ, ವೇಂಕಟೇಶ ಭಂಡಾರಿ, ದೀಪಿಕಾ ಹಬೀಬ, ಓಂಕಾರ ಹಬೀಬ, ಸಿದ್ದಾರ್ಥ ಹಬೀಬ, ಮುಂತಾದವರು ಭಾಗವಹಿಸಿದ್ದರು.