ರವೀಂದ್ರ ಜಿಂಡ್ರಾಳಿ ಅವರಿಗೆ ಸನ್ಮಾನ
Felicitation to Ravindra Jindrali
ಯಮಕನಮರಡಿ 10: ಸಮೀಪದ ಹತ್ತರಗಿ ಹರಿ ಮಂದಿರದ ಪೂಜ್ಯರಾದ ಡಾಕ್ಟರ್ ಆನಂದ ಮಹಾರಾಜ್ ಗೋಸಾವಿ ಅವರು ದಿ. 9ರಂದು ರವೀಂದ್ರ ಜಿಂಡ್ರಾಳಿ ಅವರಿಗೆ ಶ್ರೀಮಠದಲ್ಲಿ ಗೌರವಿಸಿ ಸನ್ಮಾನಿಸಿದರು.ಇವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹಾಗೂ ಬಡ ರೈತರಿಗೂ ಗ್ರಾಹಕರಿಗೂ ಮತ್ತು ಮಹಿಳಾ ಸ್ವಸಾಯ ಸಂಘಗಳಿಗೆ ಕಡಿಮೆ ಬಡ್ಡಿ ಮೂಲಕ ಸಾಲ ನೀಡಿ ಅವರಿಗೆ ಉದ್ಯೋಗವಕಾಶ ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ತಮ್ಮದೇ ಆದ ಸಹಕಾರ ಸಂಘವನ್ನು ಸ್ಥಾಪಿಸಿ ಯಮಕನಮರಡಿ ಶ್ರೀ ಲಕ್ಷ್ಮಿ ಅರ್ಬನ್ ಸಹಕಾರ ಸಂಘವನ್ನು ಸ್ಥಾಪಿಸಿ ಅದರಿಂದ ಅನೇಕ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವಲ್ಲಿ ಯಶಸ್ವಿಯಾಗಿದ್ದಾರೆ, ಅಲ್ಲದೆ ರಾಜಕೀಯ ರಂಗದಲ್ಲಿ ಅವರು ಬಾರಿ ಚತುರರು ಆಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ಶಾಲೆ ಮಕ್ಕಳಿಗಾಗಿ ನೂರೆಂಟು ಶಾಲೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇವರು ನಿರಂತರ ಜಗಜ್ಯೋತಿ ಬಸವಣ್ಣನವರು ಹೇಳಿದಂತೆ ಕಾಯಕಯೋಗಿಗಳಾಗಿ ಜನರ ಮೆಚ್ಚುಗೆಯನ್ನು ಪಡೆದವರಾಗಿದ್ದಾರೆ. ಇವರ ಅಪಾರ ಸಾಧನೆ ನೋಡಿ ಕಸ್ತುಬ್ ಸಂಸ್ಥೆ ದಾಂಡೇಲಿ ಹಾಗೂ ಫೈವ್ ಸ್ಟಾರ್ ಅಸೋಸಿಯೇಷನ್ ಯರಗಟ್ಟಿ ಇವರು ದಿ. 7ರಂದು ಸಂಕೇಶ್ವರದಲ್ಲಿ ಆಯೋಜಿಸಲಾಗಿದ್ದ ಸಾಧಕರ ಸನ್ಮಾನ ಸಮಾರಂಭದಲ್ಲಿ ಸಂಗೋಳ್ಳಿ ರಾಯಣ್ಣ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸುವುದು ಸಂತೋಷದ ವಿಷಯ ಎಂದು ಹತ್ತರಗಿ ಶ್ರೀಹರಿ ಮಂದಿರದಲ್ಲಿ ಪೂಜ್ಯರಾದ ಆನಂದ ಮಹಾರಾಜ ಗೋಸಾವಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗೋಪಾಲ್ ಚಿಪ್ಪಣಿ, ಏ ಎಮ್ ಕರ್ಣಾಚಿ, ಹನುಮಂತ ಗಾಡಿ, ವಡ್ಡರ ಅಶೋಕ್, ಸಾಳೆ ಶ್ರೀಗಳು ಬಸವರಾಜ ರುದ್ರಪೂರಿ, ಸುರೇಶ್ ಆಡಿನವರ್ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಎಸ್. ಆರ್. ತಬರಿ ಕಾರ‌್ಯಕ್ರಮ ನಿರೂಪಿಸಿ ವಂದಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ‌್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 