ವಿಧಾನ ಪರಿಷತ್ ಸದಸ್ಯ ಇಂದ್ರಿಸ್ ನಾಯಕವಡಿಗೆ ಸನ್ಮಾನ
Felicitation to Legislative Council member Indris Nayakwadi
ಸಂಬರಗಿ 06: ಮಹಾರಾಷ್ಟ್ರದ ರಾಷ್ಟ್ರವಾದಿ ಪಕ್ಷದ ಅಜೀತ ಪವಾರ ಗುಂಪಿನ ವಿಧಾನ ಪರಿಷತ್ ಸದಸ್ಯರಾದ ಇಂದ್ರಿಸ್ ನಾಯಕವಡಿ ಇವರು ಹೊಸದಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಪ್ರಥಮ ಬಾರಿಗೆ ತಮ್ಮ ಗ್ರಾಮಕ್ಕೆ ತೆರಳಿದ ನಂತರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಧ್ಯಮ ಪ್ರತಿನಿಧಿ ಹಾಗೂ ಅಥಣಿ ಪುರಸಭೆ ಸದಸ್ಯರಾದ ರಾವಸಾಹೇಬ ಐಹೊಳೆ ಇವರು ಅವರನ್ನು ಭೇಟಿಯಾಗಿ ಸನ್ಮಾನಿಸಿದರು.
ಈ ವೇಳೆ ರಾವಸಾಹೇಬ ಐಹೋಳೆ ಮಾತನಾಡಿ ಬೇಸಿಗೆಯ ಅವಧಿಯಲ್ಲಿ ಗಡಿ ಭಾಗದ ಅಗ್ರಾಣಿ ನದಿಗೆ ತಾಕಾರಿ-ಮಹಿಶ್ಯಾಳ ಕಾಲುವೆ ಮುಖಾಂತರ ನೀರು ಹರಿಸಿ ಜನರಿಗೆ ಬೇಸಿಗೆಯ ಅವಧಿಯಲ್ಲಿ ನೀರಿನ ಸಮಸ್ಯೆ ಪರ್ಯಾಗೊಳಿಸಬೇಕು. ಕಾಯಿದೆಶಿರ ಬಿಡಲು ಆಗದಿದ್ದರೆ ಮಾನವೀಯ ದೃಷ್ಠಿಯಿಂದ ವಿಚಾರಿಸಿ ನೀರು ಬಿಡಬೇಕೆಂದು ಅವರು ಹೇಳಿದರು. ಇನ್ನುಳಿದ ಮಹಾರಾಷ್ಟ್ರ ಸಂಪರ್ಕ ರಸ್ತೆಗಳು ಡಾಂಬರೀಕರಣಗೊಳಿಸಬೇಕೆಂದು ಅವರು ವಿನಂತಿ ಮಾಡಿಕೊಂಡರು.
ಈ ವೇಳೆ ಸಂಬರಗಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಅಶೋಕ ಮಾನೆ, ಪುರಸಭೆ ಸದಸ್ಯರಾದ ಸೈಯದಅಮೀನ ಗದ್ಯಾಳ, ಶಂಕರ ತಂಗಡಿ, ಕುಮಾರ ರಣಧೀರ, ವಿಜಯ ಹೊನ್ನಮನಿ ಸೇರಿದಂತಹ ಅನೇಕರು ಉಪಸ್ಥಿತ ಇದ್ದರು.
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ, 