ಸಾಹಿತಿ ಡಾ. ಎಸ್.ಆರ್.ಗುಂಜಾಳ ಹಾಗೂ ಡಾ. ಬಸವರಾಜ ಜಗಜಂಪಿಗೆ ಸನ್ಮಾನ
Felicitation to Dr. SR Gunjala and Dr. Basavaraja Jagajampi
ಹುಬ್ಬಳ್ಳಿ 07: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಪಾಲಕರಾಗಿ ಗ್ರಂಥಾಲಯದ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿರುವ, ಹಲವಾರು ವಚನ ಸಾಹಿತ್ಯ ಕೃತಿಗಳನ್ನು ರಚಿಸಿರುವ, ಹಿರಿಯ ಸಾಹಿತಿ, ಬಸವಶ್ರೀ ಪ್ರಶಸ್ತಿ ಪುರಸ್ಕೃತ, ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಹಿರಿಯರು, ಆತ್ಮೀಯರು, ಮಾರ್ಗದರ್ಶಕರು, ಹಿತೈಸಿಗಳು, ಬಸವತತ್ವ, ಸಮಾಜಮುಖಿ ಚಿಂತಕರಾದ, ಶರಣ ಸಾಹಿತಿ ಡಾ. ಎಸ್.ಆರ್.ಗುಂಜಾಳ ಅವರ 94ನೇ ಜನ್ಮದಿನೋತ್ಸವ ಹಾಗೂ ಬೆಳಗಾವಿಯ ಬಸವತತ್ವ ಚಿಂತಕರು, ಹಿರಿಯ ಸಾಹಿತಿಗಳು, ಹಿರಿಯರು, ಆತ್ಮೀಯರು, ಮಾರ್ಗದರ್ಶಕರು, ಹಿತೈಸಿಗಳು, ಸಮಾಜಮುಖಿ ಚಿಂತಕರಾದ ಡಾ. ಬಸವರಾಜ ಜಗಜಂಪಿ ಅವರ 75ನೇ ಜನ್ಮದಿನೋತ್ಸವ ಶುಭ ಸಂದರ್ಭದಲ್ಲಿ ಇವರುಗಳಿಗೆ ಸನ್ಮಾನಿಸಲಾಯಿತು.
ಬೆಳಗಾವಿಯ ಖ್ಯಾತ ಲೇಖಕರು, ಶರಣ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯ ಹೊಂದಿರುವ, ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿರುವ, ಹಲವಾರು ವಚನಸಾಹಿತ್ಯ ಕೃತಿಗಳನ್ನು ರಚಿಸಿರುವ ಆತ್ಮೀಯರು, ಮಾರ್ಗದರ್ಶಕರು, ಹಿತೈಸಿಗಳು, ಬಸವತತ್ವ ಪ್ರಚಾರಕರು, ಪ್ರಸಾರಕರಾದ ಪ್ರಕಾಶ ಗಿರಿಮಲ್ಲನವರ ಅವರ ದಿನಚರಿಯಲ್ಲಿ ಕಂಡಂತೆ ಡಾ. ಗುಂಜಾಳರು ಸಂಪಾದಿತ ಕೃತಿ ಲೋಕಾರೆ್ಣಗೊಂಡ ಶುಭ ಸಂದರ್ಭದಲ್ಲಿ ಶರಣ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರಿಗೆ ಮಾಲಾರೆ್ಣ ಮಾಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನ, ಪ್ರಣಾಮಗಳನ್ನು ಸಲ್ಲಿಸಿ, ಗೌರವಿಸಿದರು.
ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ನಿವೃತ್ ಪ್ರಾಧ್ಯಾಪಕ ಡಾ.ಎಸ್.ಎಲ್.ಸಂಗಮ, ಆಧ್ಯಾತ್ಮಿಕ ಚಿಂತಕರು, ಸಾಹಿತಿ ಸಿ.ಬಿ.ಮರಿಗೌಡರ, ಪ್ರಾಚಾರ್ಯ ಡಾ. ಮಹೇಶ ಡಿ. ಹೊರಕೇರಿ, ವಕೀಲರಾದ ಕೆ.ಎಸ್.ಕೋರಿಶೆಟ್ಟರ, ಡಾ. ಮನೋಹರ ಕೆಂಚರಹಟ್, ರಾಜೇಂದ್ರ ಗುಂಜಾಳ, ವೀರೇಶ ಜಾಲಕಟ್ಟಿ, ಡಾ. ಸವಣೂರ, ಚಂದ್ರಶೇಖರ ಚನ್ನಂಗಿ, ಮುಂತಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 