ಅರುಣ ದುರ್ಯೋಧನ ಐಹೊಳೆಗೆ ಸನ್ಮಾನ
Felicitation to Arun Duryodhana Aihole
ರಾಯಬಾಗ 08: ಚಿತ್ರದುರ್ಗದ ಶ್ರೀ ಮಾದರ ಚೆನ್ನಯ್ಯ ಗುರು ಪೀಠದ ಡಾ.ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಯವರು ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿಯ ರಾಜ್ಯ ಉಪಾಧ್ಯಕ್ಷರನ್ನಾಗಿ ಅರುಣ ದುರ್ಯೋಧನ ಐಹೊಳೆ ಅವರನ್ನು ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಶನಿವಾರ ಪಟ್ಟಣದ ಆದರ್ಶ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಅರುಣ ಐಹೊಳೆಯವರನ್ನು ಸತ್ಕರಿಸಿದರು.
ಬಳಿಕ ಮಾತನಾಡಿದ ಶ್ರೀಗಳು, ಮಾದರ ಚೆನ್ನಯ್ಯ ಗುರು ಪೀಠದ ಡಾ.ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಯವರು, ಮಾದರ ಚೆನ್ನಯ್ಯ ಪರಂಪರೆಯ ಜನಾಂಗವೆಲ್ಲವು ಮೊದಲು ಸಂಸ್ಕಾರವಂತರಾಗಬೇಕು, ಶಿಕ್ಷಿತರಾಗಬೇಕು ಜೊತೆಗೆ ದೇಶ ಭಕ್ತರಾಗಬೇಕು ಎಂಬ ದೃಷ್ಟಿಕೋನದಿಂದ ಈ ಸೇವಾ ಸಮಿತಿಯನ್ನು ಹುಟ್ಟು ಹಾಕಿದ್ದಾರೆ. ಆ ನಿಟ್ಟಿನ ಜವಾಬ್ದಾರಿಯನ್ನು ಅರುಣ ಐಹೊಳೆಯವರಿಗೆ ನೀಡಿದ್ದು, ಅವರು ಗುರುಗಳು ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುದರ ಮುಖಾಂತರ ಸಮಾಜದ ಕಲ್ಯಾಣಕ್ಕಾಗಿ ಹೆಚ್ಚು ಶ್ರಮಿಸಲಿ ಎಂದು ಹಾರೈಸಿದರು.
ಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಸ್ಥಾನ ಜವಾಬ್ದಾರಿ ಸ್ವೀಕರಿಸಿ ಮಾತನಾಡಿದ ಅರುಣ ಐಹೊಳೆಯವರು, ಹುಕ್ಕೇರಿ ಹಿರೇಮಠದ ಶ್ರೀಗಳು ಮತ್ತು ಚಿತ್ರದುರ್ಗದ ಡಾ.ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀಗಳು ನನಗೆ ಎರಡು ಕಣ್ಣುಗಳು. ಇವರು ತೋರಿಸುವ ಮಾರ್ಗದರ್ಶನದಲ್ಲಿ ನಡೆದು, ಎಲ್ಲ ಜನಾಂಗದ ಸೇವೆಗಳ ಜೊತೆಗೆ ನಮ್ಮ ಜನಾಂಗದ ಸೇವೆಯನ್ನು ರಾಜ್ಯಾದ್ಯಂತ ಮಾಡುವುದಾಗಿ ಹೇಳಿದರು.
ಡಾ.ಜೀವಂಧರ ಕೇತಪ್ಪನವರ, ಸುಶೀಲಾ ಐಹೊಳೆ,ಮನೋಹರ ಪೂಜೇರಿ, ಆರ್.ಎಮ್.ಕುರಾಡೆ, ಪೃಥ್ವಿರಾಜ ಜಾಧವ, ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ, ಎಸ್. ಎಸ್.ಕಾಂಬಳೆ, ಸಂಗನಗೌಡ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಬಿ.ಬಿ.ಪೂಜಾರ ಸೇರಿ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 